ಅವಧಿ ಮೀರಿದ ಕಡತಗಳ ನಾಶ
ಉಡುಪಿ, ನ.11: ರಾಜ್ಯ ಗ್ರಾಹಕರ ಆಯೋಗದ ಆದೇಶದಂತೆ 2016 ರಿಂದ 2020ನೇ ಸಾಲಿನವರೆಗಿನ ಕಡತಗಳಲ್ಲಿ ಅಂತಿಮ ಆದೇಶದ ವಿರುದ್ಧ ಕರ್ನಾಟಕ ರಾಜ್ಯ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ, ರಾಷ್ಟ್ರೀಯ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ, ಕರ್ನಾಟಕ ರಾಜ್ಯ ಉಚ್ಛ ನ್ಯಾಯಾಲಯ ಹಾಗೂ ಭಾರತ ಸರ್ವೋಚ್ಛ ನ್ಯಾಯಾಲಯಗಳಲ್ಲಿ ಯಾವುದಾದರೂ ಮೇಲ್ಮನವಿ ಅಥವಾ ರಿಟ್ ಅರ್ಜಿ, ಪುನರ್ ಪರಿಶೀಲನಾ ಅರ್ಜಿಗಳು ದಾಖಲಾಗಿದ್ದರೆ ಅಥವಾ ತಡೆಯಾಜ್ಞೆ ಇದ್ದರೆ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಗಮನಕ್ಕೆ ತರಬಹುದಾಗಿದೆ.
ಮೂಲ ಕಡತ ಮತ್ತು ಅಮಲ್ಜಾರಿ ಅರ್ಜಿಗಳಲ್ಲಿನ ಮೂಲ ದಾಖಲೆಗಳು ಅವಶ್ಯವಿದ್ದಲ್ಲಿ ನವೆಂಬರ್ 11ರಿಂದ ಡಿಸೆಂಬರ್ 9ರ ಒಳಗೆ ತೆಗೆದುಕೊಳ್ಳಬಹುದಾಗಿದೆ. ಅನಂತರ ಮೂಲ ದಾಖಲೆಗಳಿಗೆ ಆಯೋಗವು ಜವಾಬ್ದಾರಿ ಹೊಂದಿರುವುದಿಲ್ಲ. ಡಿಸೆಂಬರ್ 10ರ ನಂತರ 5 ವರ್ಷ ಅವಧಿ ಮೀರಿದ ಕಡತಗಳನ್ನು ಕಡ್ಡಾಯವಾಗಿ ನಾಶಗೊಳಿಸಲು ಕ್ರಮವಹಿಸಲಾಗುವುದು ಎಂದು ಜಿಲ್ಲಾ ಗ್ರಾಹಕರ ಆಯೋಗದ ಸಹಾಯಕ ರಿಜಿಸ್ಟ್ರಾರ್ ಮತ್ತು ಸಹಾಯಕ ಆಳಿತಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.





