ಬೋಟಿನಿಂದ ಸಮುದ್ರಕ್ಕೆ ಬಿದ್ದು ಮೃತ್ಯು

ಕಾಪು, ಜ.20: ಮೀನುಗಾರಿಕೆ ಸಂದರ್ಭ ಬೋಟಿನಿಂದ ಸಮುದ್ರಕ್ಕೆ ಬಿದ್ದು ನಾಪತ್ತೆಯಾಗಿದ್ದ ಮೀನುಗಾರರೊಬ್ಬರ ಮೃತದೇಹ ಉದ್ಯಾವರ ಗ್ರಾಮದ ಪಡುಕೆರೆಯ ಪಾಪನಾಶಿನಿ ಹೊಳೆಯಲ್ಲಿ ಜ.19ರಂದು ಸಂಜೆ ವೇಳೆ ಪತ್ತೆಯಾಗಿದೆ.
ಮೃತರನ್ನು ಕೋಟತಟ್ಟು ಮಧುವನ ನಿವಾಸಿ ಮಂಜುನಾಥ(61) ಎಂದು ಗುರುತಿಸಲಾಗಿದೆ. ಇವರು ಜ.17ರಂದು ಬೋಟಿನಲ್ಲಿ ಮೀನುಗಾರಿಕೆ ಕೆಲಸಕ್ಕೆ ತೆರಳಿದ್ದು, ಜ.18ರಂದು ವಾಪಾಸ್ಸು ಮಲ್ಪೆಯ ಬಂದರಿಗೆ ಬರುವಾಗ ಆಕಸ್ಮಿಕ ವಾಗಿ ಸಮುದ್ರದ ನೀರಿಗೆ ಬಿದ್ದು ನಾಪತ್ತೆಯಾಗಿದ್ದರು. ಇವರ ಮೃತದೇಹ ಜ.19ರಂದು ಸಂಜೆ ಪಡುಕೆರೆಯ ಪಾಪನಾಶಿನಿ ಹೊಳೆಯಲ್ಲಿ ಪತ್ತೆಯಾಗಿದೆ. ಈ ಬಗ್ಗೆ ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story





