ಕೊಂಕಣ ರೈಲ್ವೇ ಡಬ್ಲಿಂಗ್ ಬಗ್ಗೆ ಚರ್ಚೆ : ಗಣೇಶ್ ಪುತ್ರನ್

ಕುಂದಾಪುರ, ಆ.28: ಇತ್ತೀಚೆಗೆ ನವೀ ಮುಂಬಯಿಯಲ್ಲಿ ನಡೆದ ಕೊಂಕಣ ರೈಲ್ವೇ ಬಳಕೆದಾರರ ಸಲಹಾ ಸಮಿತಿಯ ಸಭೆಯಲ್ಲಿ ಕೊಂಕಣ ರೈಲ್ವೇಗೆ ತಕ್ಷಣ ಆಗಬೇಕಾದ ವಿಷಯಗಳ ಕುರಿತು ಸಲಹಾ ಸಮಿತಿಯ ಸದಸ್ಯ ಗಣೇಶ್ ಪುತ್ರನ್ ನಿಗಮದ ಎದುರು ಚರ್ಚೆ ನಡೆಸಿದ್ದಾರೆ.
ಕೊಂಕಣ ನಿಗಮದ ಮೂರನೇ ಹಣಕಾಸು ಮರುವಿನ್ಯಾಸಕ್ಕೆ ಭಾರತ ಸರಕಾರದ ಒಪ್ಪಿಗೆ ದೊರೆತ ಹಿನ್ನೆಲೆಯಲ್ಲಿ ಕರಾವಳಿಯಲ್ಲಿ ರೈಲುಗಳನ್ನು ಆರಂಭಿಸಲು ಮತ್ತು ಪಾರ್ಕ್ ಮಾಡಲು ಬೇಕಾದ ಸ್ಟೇಬಲ್ ಲೈನ್ ನಿರ್ಮಾಣದ ಬೇಡಿಕೆಯಿಟ್ಟಿದ್ದು ನಿಗಮವು ಸಕಾರತ್ಮಕವಾಗಿ ಸ್ಪಂದಿಸಿದೆ ಎಂದು ಗಣೇಶ ಪುತ್ರನ್ ತಿಳಿಸಿದ್ದಾರೆ.
ಬಾರ್ಕೂರಿಗೆ ಎರಡನೇ ಪ್ಲಾಟ್ ಪಾರಂ, ಮೇಲ್ ಸೇತುವೆ, ಗೋಕರ್ಣ ನಿಲ್ದಾಣದ ಆಧುನೀಕರಣ, ರೈಲುಗಳ ಸಮಯ ಫಾಲನೆ ಕುರಿತು ಚರ್ಚೆ ನಡೆಸಲಾಯಿತು ಎಂದವರು ತಿಳಿಸಿದ್ದಾರೆ.
ಪಂಚಗಂಗಾ ರೈಲಿಗೆ 19 ಕೋಚ್ ಗಳಿದ್ದು, ಇದನ್ನು 22 ಮಾಡುವ ಕುರಿತು ಸೂಕ್ತ ಕ್ರಮಕ್ಕೆ ಶಿಪಾರಸ್ಸು ಮಾಡಲಾಗಿದ್ದು ಅದನ್ನು ನೈರುತ್ಯ ರೈಲ್ವೇಗೆ ತಿಳಿಸುವ ಕುರಿತು ತೀರ್ಮಾನ ತೆಗೆದುಕೊಳ್ಳಲಾಯಿತು. ಕೊಂಕಣ ರೈಲ್ವೆಯ ಡಬ್ಲಿಂಗ್ ಕುರಿತು ಚರ್ಚೆ ನಡೆಸಲಾಯಿತಾದರೂ, ಡಿಪಿಆರ್ ಕೆಲಸಗಳು ಮುಗಿದಿದ್ದರೂ ಅದಕ್ಕೆ ಬೇಕಾದ ಹಣಕಾಸಿನ ಗೊಂದಲ ಮುಂದುವರಿದಿದ್ದು ಅದನ್ನು ಸಂಸದರ ಜತೆ ಈ ವಿಷಯವನ್ನು ದೆಹಲಿ ಮಟ್ಟದಲ್ಲಿ ಚರ್ಚೆಗೆ ಯೊಜನೆ ರೂಪಿಸಲಾಗಿದೆ.
ಉಡುಪಿಯಲ್ಲಿ ರೈಲುಗಳಿಗೆ ನೀರು ತುಂಬುವ ವ್ಯವಸ್ಥೆ, ಮೂಕಾಂಬಿಕ ದೇಗುಲವನ್ನು ವೇಗವಾಗಿ ತಲುಪಲು ಸಾಧ್ಯವಾಗುವ ಕುಂದಾಪುರ ರೈಲು ನಿಲ್ದಾಣ ಅಭಿವೃದ್ದಿ ಕುರಿತು ಸೂಕ್ತ ಸಲಹೆ ಸೂಚನೆಗಳನ್ನು ನೀಡಲಾಯಿತು ಎಂದು ಕುಂದಾಪುರ ರೈಲ್ವೇ ಪ್ರಯಾಣಿಕರ ಹಿತರಕ್ಷಣಾ ಸಮಿತಿಯ ಅಧ್ಯಕ್ಷ ಹಾಗೂ ಕೊಂಕಣ ರೈಲ್ವೇ ಬಳಕೆದಾರರ ಸಲಹಾ ಸಮಿತಿಯ ಸದಸ್ಯ ಗಣೇಶ್ ಪುತ್ರನ್ ತಿಳಿಸಿದ್ದಾರೆ.






