ಡಿಕೆಎಸ್‌ಸಿ ವಿಷನ್ 30: ನೂತನ ಸಮಿತಿ ರಚನೆ

ಉಡುಪಿ, ಡಿ.21: ಮೂರು ದಶಕಗಳ ಪ್ರಯಾಣವನ್ನು ಮುಗಿಸಿರುವ ದಕ್ಷಿಣ ಕರ್ನಾಟಕ ಸುನ್ನಿ ಸೆಂಟರ್‌ನ ಮುಂದಿನ ಯೋಜನೆ ’ವಿಷನ್ 30’ಯ ಯೋಜನೆಗಳನ್ನು ರೂಪಿಸಿ ಕಾರ್ಯರೂಪಕ್ಕೆ ತರುವ ನಿಟ್ಟಿನಲ್ಲಿ ಹಾಜಿ ಝಕರಿಯ್ಯ ಮುಝೈನ್ ಅವರ ನಿವಾಸದಲ್ಲಿ ಡಿಕೆಎಸ್‌ಸಿಯ ಪ್ರಮುಖ ನೇತಾರರ ಸಭೆ ಇತ್ತೀಚೆಗೆ ನಡೆಯಿತು.
ಸಭೆ ಅಧ್ಯಕ್ಷತೆಯನ್ನು ಕರ್ನಾಟಕ ವಿಧಾನಸಭಾ ಅಧ್ಯಕ್ಷ ಯು.ಟಿ.ಖಾದರ್ ವಹಿಸಿದ್ದರು. ಡಿಕೆಎಸ್‌ಸಿ ಹಣಕಾಸು ಕಾರ್ಯದರ್ಶಿ ಹಾಜಿ ದಾವೂದು ಕಜೆಮಾರ್ ಕಿರಾತ್ ಪಠಿಸಿದರು. ಹಾಜಿ ಝಕರಿಯಾ ಜೋಕಟ್ಟೆ, ಅಬ್ದುಲ್ ಹಮೀದ್ ಅಸ್ಕಾಫ್, ಹಾಜಿ ಹಾತಿಂ ಕೂಳೂರು ಮುಂತಾದವರು ಮಾತನಾಡಿದರು.
ಸಭೆಯಲ್ಲಿ ಮುಖ್ಯವಾಗಿ ಇತ್ತೀಚೆಗೆ ಡಿಕೆಎಸ್‌ಸಿ ಮುಡಿಪುವಿನಲ್ಲಿ ನೂತನವಾಗಿ ಖರೀದಿಸಿದ ಜಾಗದ ಅಭಿವೃಧ್ಧಿಗಾಗಿ ಯೋಜನೆಗಳನ್ನು ರೂಪಿಸಿ ಕಾರ್ಯಗತಗೊಳಿಸುವುದು ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಅದನ್ನು ಅಭಿವೃದ್ಧಿ ಪಡಿಸುವ ಕುರಿತು ಚರ್ಚಿಸಲಾಯಿತು.
ಇದೇ ಸಂದರ್ಭದಲ್ಲಿ ಡಿಕೆಎಸ್‌ಸಿ ವಿಷನ್ 30ಗೆ ನೂತನ ಸಮಿತಿಯನ್ನು ರಚಿಸಲಾಯಿತು. ಗೌರವಾಧ್ಯಕ್ಷರಾಗಿ ಯು.ಟಿ.ಖಾದರ್, ಚೇಯರ್‌ಮೆನ್ ಆಗಿ ಹಾಜಿ ಝಕರಿಯ್ಯ ಜೋಕಟ್ಟೆ ಅಲ್‌ಮುಝೈನ್, ವೈಸ್ ಚೆಯರ್ ಮೆನ್ ಆಗಿ ಅಶ್ಫಾಖ್ ಕರ್ನಿರೆ ಎಕ್ಸ್‌ಪರ್ಟೈಸ್, ಪ್ರಧಾನ ಕಾರ್ಯದರ್ಶಿ ಯಾಗಿ ಅಬ್ದುಲ್ ಹಮೀದ್(ಅಸ್ಕಾಫ್), ಕೋಶಾಧಿಕಾರಿ ಯಾಗಿ ಶರೀಫ್ ಬೋಳಾರ್ ವೈಟ್‌ಸ್ಟೋನ್, ಸಲಹೆಗಾರರಾಗಿ ಅಶ್ರಫ್ ಎಕ್ಸ್‌ಪರ್ಟೈಸ್, ಕಾರ್ಯದರ್ಶಿಗಳಾಗಿ ಶಬೀರ್ ಎಂಪ್ಲಿಟ್ಯೂಡ್, ಹಿದಾಯತ್ ಅಡ್ಡೂರು, ಸಂಘಟನಾ ಕಾರ್ಯದರ್ಶಿಗಳಾಗಿ ಅಮ್ಜದ್ ಪುತ್ತೂರು, ಜುನೈದ್ ಎಂಪ್ಲಿಟ್ಯೂಡ್, ಕಾರ್ಯಕಾರಿ ಸಮಿತಿ ಸದಸ್ಯರುಗಳಾಗಿ ಸೀದಿ ಹಾಜಿ ಬಹರೈನ್, ಝಹೀರ್ ಝಕರಿಯ್ಯ, ಹಾತಿಂ ಕೂಳೂರು, ಜಾವಿದ್ ಕಲ್ಲಡ್ಕ ಜಿದ್ದಾ, ಶಕೀಲ್ ಜಿದ್ದಾ, ನಝೀರ್ ಅಲ್ ಫಲಾಹ್, ಅಬ್ದುರ‌್ರಹ್ಮಾನ್ ಕರ್ನಿರೆ ಫೇಸ್, ಅನ್ಸಾಫ್ ಐಎನ್‌ಸಿ, ಮುಬೀನ್, ಟೇಬಲ್ ಪೋರ್ ಶಹೀರ್, ಸಬಕೋರ್ ಖಮರುದ್ದೀನ್, ಮುಸ್ತಫಾ ಭಾರತ್, ಮುಹಮ್ಮದ್ ಕಮ್ಮರಡಿ, ಆಸೀಫ್ ಎಸ್.ಎ. ಇಂಜಿನಿಯರಿಂಗ್, ಇಸ್ಮಾಯೀಲ್ ಝಕರಿಯ್ಯ ಬಾಕೋರ್, ಅಶ್ರಫ್ ಶಾಹ್ ಮಾಂತೂರು ದುಬೈ, ಕೆ.ಎಚ್.ರಫೀಖ್ ಸೂರಿಂಜೆ, ಅಬ್ದುಲ್ ಮಜೀದ್ ಕಣ್ಣಂಗಾರ್, ಅಬ್ದುಲ್ ಹಮೀದ್ ಉಳ್ಳಾಲ, ಅಬ್ದುಲ್ ಅಝೀಝ್ ಮೂಳೂರು, ದಾವೂದ್ ಕಜಮಾರ್, ಅಬ್ದುಲ್ ಅಝೀಝ್ ಬಜ್ಪೆ ಅವರನ್ನು ಆಯ್ಕೆ ಮಾಡಲಾಯಿತು.
ಅಬ್ದುಲ್ ಹಮೀದ್ ಅರೆಮೆಕ್ಸ್ ಪ್ರಾಸ್ತಾವಿಕವಾಗಿ ಮಾತನಾಡಿ, ಸ್ವಾಗತಿಸಿದರು. ಕೆ.ಎಚ್.ರಫೀಕ್ ವಂದಿಸಿದರು. ರಫೀಕ್ ಮಾಸ್ಟರ್ ಕಾರ್ಯಕ್ರಮ ನಿರೂಪಿಸಿದರು.







