ಮಣಿಪಾಲ ಕಾಲೇಜಿನ ಪ್ರೊ.ಡಾ.ಅಲೆಕ್ಸ್ ಜೋಸೆಫ್ ಹೃದಯಾಘಾತದಿಂದ ಮೃತ್ಯು

ಮಣಿಪಾಲ, ಡಿ.19: ಮಣಿಪಾಲ ಫಾರ್ಮಸ್ಯುಟಿಕಲ್ ಸೈನ್ಸ್ ಕಾಲೇಜಿನ ಪ್ರೊಫೆಸರ್ ಹೃದಯಾಘಾತದಿಂದ ಮೃತಪಟ್ಟ ಘಟನೆ ಕಾಲೇಜಿನಲ್ಲಿ ಮಂಗಳವಾರ ಬೆಳಗ್ಗೆ 11.50ರ ಸುಮಾರಿಗೆ ನಡೆದಿದೆ.
ಮೃತರನ್ನು ಮಣಿಪಾಲ ಕಾಲೇಜ್ ಆಫ್ ಫಾರ್ಮಸ್ಯುಟಿಕಲ್ ಸೈನ್ಸ್ ಇದರ ಪ್ರೊ. ಡಾ.ಅಲೆಕ್ಸ್ ಜೋಸೆಫ್(47) ಎಂದು ಗುರುತಿಸಲಾಗಿದೆ. ಇವರು ತನ್ನ ಪತ್ನಿ ಅದೇ ಕಾಲೇಜಿನ ಸಹಾಯಕ ಪ್ರೊ. ಎಂಜೆಲ್ ಟ್ರೀಸಾ ಅಲೆಕ್ಸ್ ಜೊತೆ ಬೆಳಗ್ಗೆ 8 ಗಂಟೆಗೆ ಕಾಲೇಜಿಗೆ ತೆರಳಿದ್ದರು.
ಕಾಲೇಜಿನಲ್ಲಿರುವ ವೇಳೆ ಡಾ.ಅಲೆಕ್ಸ್ ಜೋಸೆಫ್ ಅವರಿಗೆ ವಿಪರೀತ ಎದೆ ನೋವು ಕಾಣಿಸಿಕೊಂಡಿದ್ದು ಕೂಡಲೇ ಅವರನ್ನು ಮಣಿಪಾಲ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಯಿತು. ಅಲ್ಲಿ ಪರೀಕ್ಷಿಸಿದ ವೈದ್ಯರು ಅಲೆಕ್ಸ್ ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ.
ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story





