ಉಚಿತ ಪ್ರಾಣ ಯೋಗ ಶಿಬಿರಕ್ಕೆ ಚಾಲನೆ

ಕಾಪು: ಪತಂಜಲಿ ಯೋಗ ಸಮಿತಿ ಉಡುಪಿ ಹಾಗೂ ಎಸ್‌ವಿಎಸ್ ಹಳೆ ವಿದ್ಯಾರ್ಥಿ ಸಂಘ ಕಟಪಾಡಿ ಇವರ ಸಹಯೋಗದಲ್ಲಿ ಕಟಪಾಡಿಯ ಮಹಿಳಾ ಮಂಡಲದ ಸಭಾಭವನದಲ್ಲಿ ಹಮ್ಮಿಕೊಳ್ಳಲಾದ 10 ದಿನಗಳ ಉಚಿತ ಪ್ರಾಣ ಯೋಗ ಶಿಬಿರಕ್ಕೆ ಇಂದು ಚಾಲನೆ ನೀಡಲಾಯಿತು.
ಶಿಬಿರವನ್ನು ಎಸ್‌ವಿಎಸ್ ವಿದ್ಯಾವರ್ಧಕ ಸಂಘದ ಸಂಚಾಲಕ ಕೆ.ಸತ್ಯೇಂದ್ರ ಪೈ ಉದ್ಘಾಟಿಸಿದರು. ಉಡುಪಿ ಪತಂಜಲಿ ಯೋಗ ಸಮಿತಿಯ ಯೋಗ ಶಿಕ್ಷಕರಾದ ರಾಘವೇಂದ್ರ ಭಟ್, ವೆಂಕಟೇಶ್ ಮೇಹಂದಲೆ ಹಾಗೂ ಜಗದೀಶ್ ಕುಮಾರ್ ಮುಖ್ಯ ಅತಿಥಿಗಳಾಗಿದ್ದರು.
ಕಟಪಾಡಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಪ್ರಭಾ ಬಿ.ಶೆಟ್ಟಿ ಕಟಪಾಡಿ ಮಾತ ನಾಡಿದರು. ಹಳೆ ವಿದ್ಯಾರ್ಥಿ ಸಂಘದ ಮಹೇಶ್ ಅಂಚನ್, ರವಿರಾಜ್ ಶೆಟ್ಟಿ ಉಪಸಿತರಿದ್ದರು. ಕಟಪಾಡಿ ಪತಂಜಲಿ ಯೋಗ ಕಕ್ಷೆಯ ರಾಜೇಶ್ ಕಾಮತ್ ರಾಮಚಂದ್ರ ಪೈ ಶಿಬಿರವನ್ನು ಆಯೋಜಿಸಿದ್ದರು. ಹಳೆ ವಿದ್ಯಾರ್ಥಿ ಸಂಘದ ನಾಗೇಶ್ ಕಾಮತ್ ಸ್ವಾಗತಿಸಿ, ವಂದಿಸಿದರು.
Next Story





