ಗಂಗೊಳ್ಳಿ: ಲಾರಿಯಲ್ಲಿಯೇ ಚಾಲಕ ಮೃತ್ಯು

ಸಾಂದರ್ಭಿಕ ಚಿತ್ರ (credit: AI)
ಗಂಗೊಳ್ಳಿ: ಲಾರಿ ಚಾಲಕರೊಬ್ಬರು ಹೃದಯಾಘಾತದಿಂದ ಲಾರಿ ಯೊಳಗೆ ಮೃತಪಟ್ಟ ಘಟನೆ ತ್ರಾಸಿ ಗ್ರಾಮದ ಶ್ರೀಗಜಾನನ ಗ್ಯಾರೇಜಿನ ಎದುರಿನ ರಾ.ಹೆ.66ರಲ್ಲಿ ನಡೆದಿದೆ.
ಮೃತರನ್ನು ದಾವಣಗೆರೆಯ ಮನ್ಸೂರ್ ಅಲಿ(50) ಎಂದು ಗುರುತಿಸಲಾಗಿದೆ.
ಇವರು ನ.6ರಂದು ರಾತ್ರಿ ಲಾರಿ ಚಲಾಯಿಸಿಕೊಂಡು ದಾವಣಗೆರೆಯಿಂದ ಮಂದಾರ್ತಿಯ ಲಕ್ಷ್ಮೀ ಫೀಡ್ಸ್ ಕಾರ್ಖಾನೆಗೆ ಹೊರಟಿದ್ದು, ದಾರಿ ಮಧ್ಯೆ ಲಾರಿಯನ್ನು ನಿಲ್ಲಿಸಿ ಮಲಗಿದ್ದರು. ಈ ವೇಳೆ ಅವರು ಹೃದಯಾಘಾತದಿಂದ ಮೃತಪಟ್ಟಿರಬಹುದೆಂದು ಶಂಕಿಸಲಾಗಿದೆ.
ನ.7ರಂದು ಸಂಜೆ ವೇಳೆ ಲಾರಿ ಬಳಿ ಹೋಗಿ ನೋಡಿದಾಗ ಮನ್ಸೂರ್ ಅಲಿ ಮೃತಪಟ್ಟಿರುವುದು ಕಂಡುಬಂದಿದೆ.
ಈ ಬಗ್ಗೆ ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story





