ಟೈಲರ್ಸ್ ಪ್ರತ್ಯೇಕ ಕ್ಷೇಮಾ ನಿಧಿ ಮಂಡಳಿ ರಚನೆಗೆ ಪ್ರಯತ್ನ: ಯಶ್ಪಾಲ್
ಟೈಲರ್ಸ್ ಬೃಹತ್ ಸಮಾವೇಶ -ಮಹಾಸಭೆ ಉದ್ಘಾಟನೆ

ಉಡುಪಿ : ಪ್ರತ್ಯೇಕ ಕ್ಷೇಮಾ ನಿಧಿ ಮಂಡಳಿ ರಚನೆ ಸೇರಿದಂತೆ ಟೈಲರ್ ಗಳ ಪ್ರಮುಖ ಬೇಡಿಕೆಗಳನ್ನು ಈಡೇರಿಸಲು ಮುಂದಿನ ಅಧಿವೇಶನದಲ್ಲಿ ಚರ್ಚಿಸಿ ಸರಕಾರವನ್ನು ಒತ್ತಾಯಿಸಲಾಗುವುದು ಎಂದು ಉಡುಪಿ ಶಾಸಕ ಯಶ್‌ಪಾಲ್ ಸುವರ್ಣ ಭರವಸೆ ನೀಡಿದ್ದಾರೆ.
ಕರ್ನಾಟಕ ಸ್ಟೇಟ್ ಟೈಲರ್ಸ್ ಅಸೋಸಿಯೇಶನ್ ಕ್ಷೇತ್ರ ಸಮಿತಿ ಉಡುಪಿ ವತಿಯಿಂದ ರವಿವಾರ ಬನ್ನಂಜೆ ನಾರಯಣ ಗುರು ಸಭಾಭವನದಲ್ಲಿ ಆಯೋಜಿಸಲಾದ ಟೈಲರ್ಸ್ ಬೃಹತ್ ಸಮಾವೇಶ ಹಾಗೂ ಮಹಾಸಭೆ ಉದ್ಘಾಟಿಸಿ ಅವರು ಮಾತನಾಡುತಿದ್ದರು.
ಟೈಲರ್‌ಗಳ ಹಲವಾರು ಸಮಸ್ಯೆಗಳ ಬಗ್ಗೆ ತಿಳಿದುಕೊಂಡಿದ್ದೇನೆ. ಈ ಬಗ್ಗೆ ಸಾಕಷ್ಟು ಮನವಿಗಳು ಬಂದಿವೆ. ಪ್ರತ್ಯೇಕ ಕ್ಷೇಮಾ ನಿಧಿ ಮಂಡಳಿ ರಚಿಸಲು ಬೇಡಿಕೆ ಇದ್ದು, ಸರಕಾರ ಮಟ್ಟದಲ್ಲಿ ಕಾರ್ಮಿಕ ಸಚಿವರ ಜತೆಗೆ ಚರ್ಚಿಸ ಲಾಗುವುದು. ಸದನದಲ್ಲಿಯೂ ವಿಷಯ ಪ್ರಸ್ತಾಪಿಸಿ ಟೈಲರ್ಸ್ ಬೇಡಿಕೆ ಈಡೇರಿಸಲು ಪ್ರಮಾಣಿಕ ಪ್ರಯತ್ನ ಮಾಡಲಾಗುವುದು ಎಂದರು.
ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ, ಸಾಯಿರಾಮ್ ಟೆಕ್ಟ್‌ಟೋರಿಯಂ ಮಾಲಕ ಪಿ.ರಾಜೇಶ್, ಉದ್ಯಮಿ ಸುರೇಶ್ ಪುರೋಹಿತ್, ರಾಜ್ಯ ಟೈಲರ್ ಅಸೋಸಿಯೇಶನ್ ಅಧ್ಯಕ್ಷ ಬಿ.ನಾರಾಯಣ, ಕೋಶಾಧಿಕಾರಿ ಕೆ.ರಾಮಚಂದ್ರ, ಉಡುಪಿ ಜಿಲ್ಲಾ ಸಮಿತಿ ಅಧ್ಯಕ್ಷ ಗುರುರಾಜ್ ಎಂ.ಶೆಟ್ಟಿ, ಮಂಗಳೂರು ಸಮಿತಿ ಅಧ್ಯಕ್ಷ ಹರೀಶ್ ಮುಖ್ಯ ಅತಿಥಿಗಳಾಗಿದ್ದರು.
ಅಸೋಸಿಯೇಶನ್ ಪದಾಧಿಕಾರಿಗಳಾದ ಸುರೇಶ್ ಪಾಲನ್, ಯೊಗೀಶ್ ಕಾಮತ್, ರಾಜು ಕೊಲ್ಲೂರು, ಶಾಂತಾ ಬಸ್ರೂರು, ಮೀನಾಕ್ಷಿ ಆಚಾರ್ಯ, ಸಂಕ್ರೆಗೌಡ ಹಾಸನ, ಲಕ್ಷ್ಮೀ ಆರ್.ಭಟ್, ರಾಜು ಪೂಜಾರಿ, ರವಿ ನಾಯ್ಕ, ನವೀನ್ ರಾವ್, ಬಿ.ಕೆ.ಶ್ರೀನಿವಾಸ್ ಉಪಸ್ಥಿತರಿದ್ದರು.
ರಾಜ್ಯ ಪ್ರಧಾನ ಕಾರ್ಯದರ್ಶಿ ಪ್ರಜ್ವಲ್ ಪ್ರಸ್ತಾವಿಕವಾಗಿ ಮಾತನಾಡಿದರು. ಅಧ್ಯಕ್ಷತೆ ವಹಿಸಿದ್ದ ಉಡುಪಿ ಕ್ಷೇತ್ರ ಸಮಿತಿ ಅಧ್ಯಕ್ಷ ದಯಾನಂದ ಕೋಟ್ಯಾನ್ ಕೊರಂಗ್ರಪಾಡಿ ಸ್ವಾಗತಿಸಿದರು. ಪ್ರಶಾಂತ್ ಶೆಟ್ಟಿ ಹಾವಂಜೆ ನಿರೂಪಿಸಿದರು.







