ಬಾವಿಗೆ ಹಾರಿ ಎಲೆಕ್ಟ್ರಿಷಿಯನ್ ಆತ್ಮಹತ್ಯೆ

ಉಡುಪಿ, ಫೆ.8: ವೈಯಕ್ತಿಕ ಕಾರಣದಿಂದ ಮನನೊಂದ ಎಲೆಕ್ಟ್ರಿಷಿಯನ್ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಅಂಬಾಗಿಲು ಸಮೀಪದ ಕಕ್ಕುಂಜೆ ಎಂಬಲ್ಲಿ ಶನಿವಾರ ರಾತ್ರಿ ವೇಳೆ ನಡೆದಿದೆ.
ಮೃತರನ್ನು ಕಕ್ಕುಂಜೆಯ ನಿವಾಸಿ ಅರ್ಚಕ ವಾಸುದೇವ ನಾಯಕ್ ಎಂಬವರ ಮಗ ಪುರುಷೋತ್ತಮ ನಾಯಕ್(52) ಎಂದು ಗುರುತಿಸ ಲಾಗಿದೆ. ಮಣಿಪಾಲದ ವ್ಯಾಲ್ಯೂವೀವ್ ಹೋಟೆಲ್‌ನಲ್ಲಿ ಎಲೆಕ್ಟ್ರಿಷಿಯನ್ ವಿಭಾಗದಲ್ಲಿ ಅಸಿಸ್ಟೆಂಟ್ ಸೂಪರ್‌ವೈಸರ್ ಆಗಿ ಕೆಲಸ ಮಾಡಿಕೊಂಡಿದ್ದ ಇವರು, ಕಳೆದ ಒಂದು ವಾರದಿಂದ ಸರಿಯಾಗಿ ನಿದ್ದೆ ಬರುತ್ತಿಲ್ಲವೆಂದು ಮಾನಸಿಕ ಖಿನ್ನತೆಗೆ ಒಳಗಾಗಿದ್ದರು.
ಇದೇ ಚಿಂತೆಯಲ್ಲಿ ಅವರು ಮನೆಯ ಬಳಿಯಿರುವ ತೋಟದ ಬಾವಿ ಕಬ್ಬಿಣದ ಪೈಪ್‌ಗೆ ಹಗ್ಗ ಕಟ್ಟಿ ಹಾರಿ ಆತ್ಮಹತ್ಯೆ ಮಾಡಿಕೊಂಡರು. ಜಿಗಿದ ರಭಸಕ್ಕೆ ಅವರ ರುಂಡ ಬೇರ್ಪಟ್ಟಿದ್ದು, ದೇಹದ ಭಾಗ ಬಾವಿಯಲ್ಲಿದ್ದರೆ, ರುಂಡ ಹಗ್ಗದಲ್ಲಿ ನೇತಾಡುತ್ತಿತ್ತು. ಇವರು ಕಕ್ಕುಂಜೆಯ ಕಟ್ಟೆಮಹಾದೇವಿ ದೇವಸ್ಥಾನದ ಆಡಳಿತ ಮಂಡಳಿಯ ಕಾರ್ಯದರ್ಶಿ ಯಾಗಿದ್ದರು. ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.




