ಸಂಘಟನೆ ಮೂಲಕ ಮಹಿಳೆಯರ ಸಬಲೀಕರಣ ಸಾಧ್ಯ: ಉಡುಪಿ ಡಿಸಿ ವಿದ್ಯಾ ಕುಮಾರಿ

ಉಡುಪಿ : ಸ್ವಾತಂತ್ರ್ಯ ಪೂರ್ವದಲ್ಲಿಯೂ ಮಹಿಳೆಯರು ಸಂಘಟಿತ ರಾಗಿ ದೇಶಕ್ಕಾಗಿ ಹೋರಾಟ ಮಾಡಿದ್ದರು. ಸ್ವಾತಂತ್ರ್ಯ ಬಳಿಕವೂ ಮಹಿಳೆಯರು ಸಂಘಟಿತ ನೆಲೆಯಲ್ಲಿ ಸಬಲೀಕರಣ ಮತ್ತು ದೇಶದ ಅಭಿವೃದ್ಧಿಗೆ ಕೊಡುಗೆ ನೀಡುತ್ತಿದ್ದಾರೆ. ಸಂಘಟನೆ ಮೂಲಕ ಇನ್ನಷ್ಟು ಮಹಿಳೆಯರ ಸಬಲೀಕರಣ ಆಗಬೇಕು ಎಂದು ಉಡುಪಿ ಜಿಲ್ಲಾಧಿಕಾರಿ ಡಾ.ಕೆ.ವಿದ್ಯಾಕುಮಾರಿ ಹೇಳಿದ್ದಾರೆ.
ಮಣಿಪಾಲ ಮಹಿಳಾ ಸಮಾಜದ ವತಿಯಿಂದ ಉಡುಪಿ ಎಂಜಿಎಂ ಗೀತಾಂಜಲಿ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾದ ದೀಪಾವಳಿ ಉತ್ಸವವನ್ನು ಶುಕ್ರವಾರ ಉದ್ಘಾಟಿಸಿ ಅವರು ಮಾತನಾಡುತಿದ್ದರು.
ಮುಖ್ಯ ಅತಿಥಿಗಳಾಗಿ ಉಡುಪಿ ಆದರ್ಶ ಆಸ್ಪತ್ರೆಯ ನಿರ್ದೇಶಕಿ ವಿಮಲಾ ಚಂದ್ರಶೇಖರ್, ಎಂಜಿಎಂ ಕಾಲೇಜು ಪ್ರಾಂಶುಪಾಲ ಪ್ರೊ.ಲಕ್ಷ್ಮೀನಾರಾಯಣ ಕಾರಂತ್ ಉಪಸ್ಥಿತರಿದ್ದರು.
ಮಹಿಳಾ ಸಮಾಜದ ಅಧ್ಯಕ್ಷೆ ಸುಲತಾ ಭಂಡಾರಿ ಸ್ವಾಗತಿಸಿದರು. ಖಜಾಂಚಿ ಸುಜಯ ಶೆಟ್ಟಿ ಪರಿಚಯಿಸಿದರು. ರೂಪಾ ದಿನೇಶ್ ಕಿಣಿ, ಶಶಿಕಲಾ ರಾಜವರ್ಮ ಕಾರ್ಯಕ್ರಮ ನಿರೂಪಿಸಿದರು. ಕಾರ್ಯದರ್ಶಿ ವೀಣಾ ಕುಡ್ವಾ ವಂದಿಸಿದರು.
ಉತ್ಸವದಲ್ಲಿ ಮಹಿಳಾ ಸ್ವ ಉದ್ಯೋಗ ಉತ್ಪನ್ನ, ಗೃಹಲಂಕಾರ, ದೀಪಾವಳಿ ಹಬ್ಬದ ಪರಿಕರ, ಕೇಕ್ ಟ್ವಿಸ್ಟರ್ ಗೋಲಾ, ದಕ್ಷಿಣ, ಉತ್ತರ ಭಾರತೀಯ ಆಹಾರ ಮಾರಾಟ, ಪ್ರದರ್ಶನದ ಮಳಿಗೆಗಳಿದ್ದವು.







