ವನಮಹೋತ್ಸವ ಮೂಲಕ ಪರಿಸರ ಕಾಳಜಿ ಅರಿವು

ಉಡುಪಿ, ಆ.2: ಪೆರಂಪಳ್ಳಿ ಟ್ರನಿಟಿ ಸೆಂಟ್ರಲ್ ಶಾಲೆ ಹಾಗೂ ಉಡುಪಿಯ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದೊಂದಿಗೆ ಪ್ಲಾಂಟೇಶನ್ ಡ್ರೈವ್ ಎಂಬ ನಾಮದಡಿಯಲ್ಲಿ ವನಮಹೋತ್ಸವದ ಮೂಲಕ ಗಿಡಗಳನ್ನು ನೆಡುವ ವಿಶೇಷ ಕಾರ್ಯಕ್ರಮವು ಮಣಿಪಾಲದ ಪ್ರಗತಿ ನಗರದಲ್ಲಿರುವ ಕನ್ನಡ ಸಂಸ್ಕೃತಿ ಇಲಾಖೆಯ ಆವರಣದಲ್ಲಿ ಇತ್ತೀಚೆಗೆ ನಡೆಯಿತು.
ಕಾರ್ಯಕ್ರಮಕ್ಕೆ ಟ್ರಿನಿಟಿ ಸೆಂಟ್ರಲ್ ಶಾಲೆಯ ಪ್ರಾಂಶುಪಾಲ ರೆ.ಫಾ. ಡೊಮಿನಿಕ್ ಸುನಿಲ್ ಲೋಬೋ, ಉಪ ಪ್ರಾಂಶುಪಾಲ ರೆ.ಫಾ.ರವಿ ರಾಜೇಶ್ ಸೆರಾವೋ ಚಾಲನೆ ನೀಡಿದರು. ಉಡುಪಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಪೂರ್ಣಿಮಾ ಮಾತನಾಡಿದರು.
ಈ ಸಂದರ್ಭದಲ್ಲಿ ವಿದ್ಯಾರ್ಥಿಗಳಿಂದ ಸುಮಾರು 25 ಗಿಡಗಳು ನೆಡಲ್ಪಟ್ಟವು. ಶಾಲೆಯ ಶಿಕ್ಷಕಿಯರಾದ ಜೆಸ್ಲಿನ್, ಶ್ರೀಲತಾ, ಸುಷ್ಮಾ ಉಪಸ್ಥಿತರಿದ್ದರು.
Next Story





