ಹೊಸತುಗಳಿಂದ ಕನ್ನಡ ಸಾಹಿತ್ಯ ವಿಸ್ತಾರ: ಕೆ.ಎಸ್.ಶ್ರೀಧರ ಮೂರ್ತಿ
ಕಾಪು ತಾಲೂಕು ಐದನೆಯ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಚಾಲನೆ

ಶಿರ್ವ: ಸಾಹಿತ್ಯ ಮತ್ತು ಸಾಹಿತ್ಯೇತರ ಕ್ಷೇತ್ರಗಳಲ್ಲಾದ ಸಾಧನೆಗಳೆಲ್ಲವೂ ಸೊಗಸುಗಳೆ. ಇಂತಹ ಸೊಗಸುಗಳಿಂದಲೇ ಕನ್ನಡ, ಸಿರಿಗನ್ನಡವಾಗಿದೆ. ಸೊಗಸುಗಳ ಅರಿವನ್ನು ಹೊಂದಿ ಆತ್ಮವಿಶ್ವಾಸದಿಂದ ಹೆಮ್ಮೆ ಪಡುವುದೇ ಅಭಿಮಾನ. ಪಾಶ್ಚಿಮಾತ್ಯ ಸಾಹಿತ್ಯದ ಪರಿಚಯದಿಂದ ಅನೇಕ ಹೊಸತುಗಳು ಸೇರಿಕೊಂಡು ಕನ್ನಡ ಸಾಹಿತ್ಯ ವಿಸ್ತಾರಗೊಂಡಿದೆ ಎಂದು ಸಮ್ಮೇಳನಾಧ್ಯಕ್ಷ ಕೆ.ಎಸ್. ಶ್ರೀಧರ ಮೂರ್ತಿ ಶಿರ್ವ ಹೇಳಿದ್ದಾರೆ.
ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಕಾಪು ತಾಲ್ಲೂಕು ಘಟಕದ ವತಿಯಿಂದ ಬಂಟಕಲ್ಲು ಶ್ರೀಮಧ್ವ ವಾದಿರಾಜ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಶನಿವಾರ ನಡೆದ ಕಾಪು ತಾಲ್ಲೂಕು ೫ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷತೆ ವಹಿಸಿ ಅವರು ಮಾತನಾಡುತಿದ್ದರು.
ಸಾಹಿತ್ಯದ ತೌಲನಿಕ ಅಭ್ಯಾಸಕ್ಕೆ, ಸಾಂಸ್ಕೃತಿಕ, ಸಾಮಾಜಿಕ ವಿಷಯಗಳ ಅಧ್ಯಯನ ಶೋಧನೆಗಳಿಗೆ ಭಾಷಾಂತರ ಕೆಲಸವು ಅವಕಾಶ ಮಾಡಿಕೊಡುತ್ತದೆ. ಈ ದಿಶೆಯಲ್ಲಿ ಭಾಷೆಯ ಮಹತ್ವದ ಕೃತಿಗಳು ಇನ್ನೊಂದಕ್ಕೆ ಭಾಷಾಂತರ ಗೊಳ್ಳು ವುದು ಬಹುಮುಖ್ಯ. ಕನ್ನಡದ ಬಹಳಷ್ಟು ಕಾದಂಬರಿಗಳು, ನಾಟಕಗಳು, ಕಾವ್ಯಗಳು ಬೇರೆ ಬೇರೆ ಭಾಷೆಗಳಿಗೆ ಭಾಷಾಂತ ರಗೊಂಡಿರುವುದು ಹೆಮ್ಮೆಯ ಸಂಗತಿಯಾಗಿದೆ ಎಂದರು.
ಕಾಪು ಶಾಸಕ ಗುರ್ಮೆ ಸುರೇಶ ಶೆಟ್ಟಿ ಮಾತನಾಡಿ, ಕನ್ನಡದ ಸಾಹಿತ್ಯ ಸಮ್ಮೇಳನಗಳು ನಮ್ಮೊಳಗೊಂದು ಹೊಸ ಸಂಚ ಲನವನ್ನು ಮೂಡಿಸುವಂತಿರ ಬೇಕು. ಎಲ್ಲಿ ಸಾಹಿತಿ, ಕವಿಗಳಿದ್ದರೋ ಅಲ್ಲಿ ಸಂಸ್ಕಾರ ಸಂಸ್ಕೃತಿಯ ಸಮಾಜವನ್ನು ಕಾಣಬ ಹುದಾಗಿದೆ. ಓದು ಜಾರುವ ಜಾಗದಲ್ಲಿ ಜಾಗೃತಿಯನ್ನು ಮೂಡಿಸಬೇಕು. ಸಾಹಿತ್ಯ ಸಾಮರಸ್ಯದ ಬದುಕಿಗೆ ಮನುಷ್ಯರನ್ನು ಅಣಿಗೊಳಿಸಬೇಕಾಗಿದೆ ಎಂದು ತಿಳಿಸಿದರು.
ಸಾಹಿತಿ ಎಸ್.ಎಸ್.ಪ್ರಸಾದ್ ಬರೆದಿರುವ ಸಾಯಿ ಸಂದೇಶಗಳು ಎನ್ನುವ ಪುಸ್ತಕವನ್ನು ಬಿಡುಗಡೆಗೊಳಿಸಿದ ಕಸಾಪ ಪೂರ್ವಾಧ್ಯಕ್ಷ ಧರ್ಮದರ್ಶಿ ಹರಿಕೃಷ್ಣ ಪುನರೂರು ಮಾತನಾಡಿ, ಹೊರ ರಾಜ್ಯಗಳಿಂದ ಬಂದವರು ಕನ್ನಡವನ್ನು ಕಲಿಯು ವಂತಾಗಬೇಕು, ಕನ್ನಡವನ್ನು ನಾವು ಉಳಿಸಬೇಕು. ಕನ್ನಡ ಉಳಿಯ ಬೇಕಾದರೆ ಮಕ್ಕಳಲ್ಲಿ ಬರೆಯಲು ಹಾಗೂ ಓದಲು ಅಭ್ಯಾಸವಾಗಬೇಕು ಎಂದರು.
ಕನ್ನಡ ಮತ್ತು ಸಂಸ್ಕತಿ ಇಲಾಖೆ ಸಹಾಯಕ ನಿರ್ದೇಶಕಿ ಪೂರ್ಣಿಮಾ ಮಾತನಾಡಿದರು. ಜಿಲ್ಲಾ ಕಸಾಪ ಅಧ್ಯಕ್ಷ ನೀಲಾ ವರ ಸುರೇಂದ್ರ ಅಡಿಗ ಆಶಯ ನುಡಿಗಳನ್ನಾಡಿದರು. ಬಂಟಕಲ್ಲು ಸಾರ್ವಜನಿಕ ಶ್ರೀಗಣೇಶೋತ್ಸವ ಸಮಿತಿ ಅಧ್ಯಕ್ಷ ಮಾಧವ ಕಾಮತ್ ಸ್ಮರಣ ಸಂಚಿಕೆ ಬಿಡುಗಡೆಗೊಳಿಸಿದರು.
ಸಮ್ಮೇಳನದ ಅಧ್ಯಕ್ಷತೆಯನ್ನು ನಿವೃತ್ತ ಉಪನ್ಯಾಸಕ, ಕನ್ನಡ ಸಂಘಟಕ ಕೆ.ಎಸ್. ಶ್ರೀಧರ ಮೂರ್ತಿ ಶಿರ್ವ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಸೋದೆ ವಾದಿರಾಜ ಮಠ ಶಿಕ್ಷಣ ಪ್ರತಿಷ್ಠಾನದ ಕಾರ್ಯದರ್ಶಿ ರತ್ನ ಕುಮಾರ್, ನಿಕಟಪೂರ್ವ ಸಮ್ಮೇಳನಾಧ್ಯಕ್ಷೆ ಕ್ಯಾಥರಿನ್ ರೊಡ್ರಿಗಸ್, ಕಾಪು ತಹಶೀಲ್ದಾರ್ ನಾಗರಾಜ ವಿ.ನಾಯ್ಕಡ, ಶಿರ್ವ ಸುನ್ನಿ ಜಾಮಿಯಾ ಮಸೀದಿ ಧರ್ಮಗುರು ಸಿರಾಜುದ್ದೀನ್ ಝೈನಿ, ಕಾಲೇಜಿನ ಪ್ರಾಚಾರ್ಯ ಡಾ.ತಿರುಮಲೇಶ್ವರ ಭಟ್, ಬಂಟಕಲ್ಲು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ಆಡಳಿತ ಮೊಕ್ತೇಸರ ಶಶಿಧರ ವಾಗ್ಳೆ, ಶ್ರೀ ಬಬ್ಬು ಸ್ವಾಮಿ ದೈವಸ್ಥಾನದ ಗುರಿಕಾರ ಶಂಕರ ಪದಕಣ್ಣಾಯ, ಜಿಲ್ಲಾ ಕನ್ನಡ ಭವನ ಸಮಿತಿ ಕಾರ್ಯಾಧ್ಯಕ್ಷ ದೇವದಾಸ್ ಹೆಬ್ಬಾರ್, ಗೌರವ ಕೋಶಾಧಿಕಾರಿ ಮನೋಹರ ಪಿ. ಉಪಸ್ಥಿತರಿದ್ದರು.
ಶಿರ್ವ ಗ್ರಾಪಂ ಅಧ್ಯಕ್ಷೆ ಸವಿತಾ ರಾಜೇಶ್ ರಾಷ್ಟ್ರ ಧ್ವಜಾರೋಹಣಗೈದರು. ಕಸಾಪ ಕಾಪು ತಾ.ಅಧ್ಯಕ್ಷ ಬಿ.ಪುಂಡಲೀಕ ಮರಾಠೆ ಪರಿಷತ್ತಿನ ಧ್ವಜಾರೋಹಣ ಗೊಳಿಸಿದರು. ಗ್ರಾಪಂ ಉಪಾಧ್ಯಕ್ಷ ವಿಲ್ಸನ್ ರೊಡ್ರಿಗಸ್ ಉಪಸ್ಥಿತರಿದ್ದರು. ಸ್ವಾಗತ ಸಮಿತಿ ಕಾರ್ಯಾಧ್ಯಕ್ಷ, ಶಿರ್ವ ಗ್ರಾಪಂ ಮಾಜಿ ಅಧ್ಯಕ್ಷ ಕೆ.ಆರ್.ಪಾಟ್ಕರ್ ಸ್ವಾಗತಿಸಿದರು. ಅನಂತ ಮುಡಿತ್ತಾಯ ಸಮ್ಮೇಳ ನಾಧ್ಯಕ್ಷರನ್ನು ಪರಿಚಯಿಸಿ, ಶಿಕ್ಷಕ ಸುಧಾಕರ್ ಶೆಣೈ ಪಿಲಾರ್ ಕಾರ್ಯಕ್ರಮ ನಿರೂಪಿಸಿ, ಅಶ್ವಿನ್ ಲಾರೆನ್ಸ್ ವಂದಿಸಿದರು.
‘ಕರ್ನಾಟಕದಲ್ಲಿ ಕನ್ನಡ ಶಾಲೆಯಲ್ಲಿ ಕನ್ನಡ ಅಧ್ಯಾಪಕರ ನೇಮಕವಾಗುತ್ತಿಲ್ಲ. ಹಲವು ವರ್ಷಗಳಿಂದಲೂ ಸರ್ಕಾರಕ್ಕೆ ಮನವಿಯನ್ನು ಮಾಡಿಕೊಂಡರೂ ಯಾವುದೇ ಪ್ರಯೋಜವಾಗಿಲ್ಲ. ಮುಂದಿನ ದಿನಗಳಲ್ಲಿಯಾದರೂ ಕನ್ನಡದ ಅಧ್ಯಪಕರ ನೇಮಕವಾಗಿ ವಿದ್ಯಾರ್ಥಿಗಳು ಈ ನಾಡಿನ ಭಾಷೆ ಕನ್ನಡವನ್ನು ಕಲಿಯುವಂತಾಗಬೇಕು’
-ನೀಲಾವರ ಸುರೇಂದ್ರ ಅಡಿಗ, ಅಧ್ಯಕ್ಷರು, ಕಸಾಪ ಉಡುಪಿ ಜಿಲ್ಲೆ







