Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಜಿಲ್ಲೆಗಳು
  3. ಉಡುಪಿ
  4. ನಕಲಿ ಎನ್‌ಕೌಂಟರ್ ಆರೋಪ ಸುಳ್ಳು: ಡಿಜಿಪಿ...

ನಕಲಿ ಎನ್‌ಕೌಂಟರ್ ಆರೋಪ ಸುಳ್ಳು: ಡಿಜಿಪಿ ಪ್ರಣಬ್ ಮೊಹಂತಿ

ಎನ್‌ಕೌಂಟರ್ ನಡೆದ ಪೀತಬೈಲ್ ಘಟನಾ ಸ್ಥಳಕ್ಕೆ ಭೇಟಿ ಪರಿಶೀಲನೆ

ವಾರ್ತಾಭಾರತಿವಾರ್ತಾಭಾರತಿ20 Nov 2024 10:10 PM IST
share
ನಕಲಿ ಎನ್‌ಕೌಂಟರ್ ಆರೋಪ ಸುಳ್ಳು: ಡಿಜಿಪಿ ಪ್ರಣಬ್ ಮೊಹಂತಿ

ಹೆಬ್ರಿ: ನಕ್ಸಲ್ ವಿಕ್ರಂ ಗೌಡನನ್ನು ನಕಲಿ ಎನ್‌ಕೌಂಟರ್‌ನಲ್ಲಿ ಹತ್ಯೆ ಮಾಡಲಾಗಿದೆ ಎಂಬ ಆರೋಪ ಸುಳ್ಳು. ನಕ್ಸಲರು ಮತ್ತು ಎಎನ್‌ಎಫ್ ಮಧ್ಯೆ ನಡೆದ ಗುಂಡಿನ ಚಕಮಕಿಯಿಂದ ವಿಕ್ರಂ ಗೌಡ ಮೃತಪಟ್ಟಿದ್ದಾರೆ. ಈ ಎನ್‌ಕೌಂಟರ್‌ನಲ್ಲಿ ಯಾವುದೇ ಸಂಶಯ ಬೇಡ. ಎಎನ್‌ಎಫ್ ಸಿಬ್ಬಂದಿ ತಮ್ಮ ಆತ್ಮರಕ್ಷಣೆಗಾಗಿ ನಡೆಸಿದ ದಾಳಿಯೇ ಹೊರತು ಪೂರ್ವ ನಿಯೋಜಿತ ಅಲ್ಲ ಎಂದು ಆಂತರಿಕ ಭದ್ರತಾ ವಿಭಾಗದ ಡಿಜಿಪಿ ಪ್ರಣಬ್ ಮೊಹಂತಿ ತಿಳಿಸಿದ್ದಾರೆ.

ಎನ್‌ಕೌಂಟರ್ ನಡೆದ ಹೆಬ್ರಿ ತಾಲೂಕಿನ ಪೀತಬೈಲುವಿನ ಸ್ಥಳಕ್ಕೆ ಬುಧವಾರ ಭೇಟಿ ನೀಡಿದ ಬಳಿಕ ಅವರು ಹೆಬ್ರಿ ಪೊಲೀಸ್ ಠಾಣೆಯಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದರು. ನ.18ರಂದು ಸಂಜೆ ಆರು ಗಂಟೆಗೆ ನಮ್ಮ ತಂಡ ಹೋಗುತ್ತಿರುವಾಗ 3-4 ಬಂದೂಕುದಾರಿ ನಕ್ಸಲರು ಎದುರಾದರು. ಆ ವೇಳೆ ಎರಡು ಕಡೆಯಿಂದ ಗುಂಡಿನ ಚಕಮಕಿ ನಡೆಯಿತು. ಈ ದಾಳಿಯಲ್ಲಿ ವಿಕ್ರಂ ಗೌಡ ಮೃತಪಟ್ಟು, ಉಳಿದವರು ಗುಂಡು ಹಾರಿಸಿಕೊಂಡು ಕಾಡಿನಲ್ಲಿ ಪರಾರಿಯಾದರು ಎಂದರು.

ಗನ್, ರಿವಾಲ್ವರ್, ಚೂರಿ ವಶ: ಮೃತ ವಿಕ್ರಂ ಗೌಡನ ಬಳಿ ದೊರೆತ 9 ಎಂ.ಎಂ. ಕಾರ್ಬೈನ್(ಮೆಷಿನ್) ಗನ್, ರಿವಾಲ್ವರ್, ಚೂರಿಗಳನ್ನು ವಶಪಡಿಸಿಕೊಳ್ಳಲಾಗಿದೆ. ಈ ಕಾರ್ಯಾಚರಣೆಯಲ್ಲಿ ಪೊಲೀಸರಿಗೆ ಯಾವುದೇ ಗಾಯಗಳಾಗಿಲ್ಲ. ವಿಕ್ರಂ ಗೌಡನ ಎದೆ, ಹೊಟ್ಟೆ ಭಾಗಕ್ಕೆ ಗುಂಡುಗಳು ಬಿದ್ದಿವೆ. ಈ ಬಗ್ಗೆ ತನಿಖೆ ನಡೆಯುತ್ತಿದ್ದು, ಹೆಚ್ಚಿನ ಮಾಹಿತಿ ಇನ್ನಷ್ಟೇ ದೊರೆಯಬೇಕಾಗಿದೆ ಎಂದು ಅವರು ಹೇಳಿದರು.

ಮೃತಪಟ್ಟಿರುವುದು ವಿಕ್ರಂ ಗೌಡ ಅಲ್ಲ ಎಂದು ಹೇಳುತ್ತಿರುವುದು ತಪ್ಪು. ಯಾಕೆಂದರೆ ಈಗಾಗಲೇ ಅವನ ಮೃತದೇಹವನ್ನು ಅವನ ಮನೆಯವರು ಗುರುತಿಸಿ, ಸ್ವೀಕರಿಸಿ ಅಂತ್ಯಸಂಸ್ಕಾರ ನೆರವೇರಿಸಿದ್ದಾರೆ ಎಂದು ಅವರು ಸ್ಪಷ್ಟ ಪಡಿಸಿದರು. 2024ರ ಮಾರ್ಚ್ ಎಪ್ರಿಲ್‌ನಲ್ಲಿ ವಿಕ್ರಂ ಗೌಡ ಕೊಡಗು, ದಕ್ಷಿಣ ಕನ್ನಡ ಜಿಲ್ಲೆಯ ಅರಣ್ಯದಲ್ಲಿ ಕಾಣಿಸಿಕೊಂಡಿದ್ದನು. ಇವರು ಒಂದೇ ಜಾಗದಲ್ಲಿ ಇರುವುದಿಲ್ಲ. ಎಲ್ಲ ಕಡೆ ಓಡಾಟ ನಡೆಸುತ್ತಿರುತ್ತಾರೆ ಎಂದರು.

ಮನೆಯವರ ಪಾತ್ರ ಇಲ್ಲ: ಎನ್‌ಕೌಂಟರ್ ನಡೆದ ಮನೆಗಳನ್ನು ಖಾಲಿ ಮಾಡಿ ಕಳುಹಿಸುವುದು ನಮ್ಮ ಕೆಲಸ ಅಲ್ಲ. ಆ ರೀತಿಯ ಯಾವುದೇ ಕಾರ್ಯ ಮಾಡಿಲ್ಲ. ಈ ಕಾರ್ಯಾಚರಣೆಯಲ್ಲಿ ಅಲ್ಲಿನ ಮನೆಯವರ ಯಾವುದೇ ಪಾತ್ರ ಇಲ್ಲ. ಹಾಗಾಗಿ ಅವರು ಭಯಪಡಬೇಕಾಗಿಲ್ಲ. ಅವರಿಗೆ ಬೇಕಾದರೆ ಸ್ಥಳೀಯ ಪೊಲೀಸರು ಭದ್ರತೆ ನೀಡುವ ಕೆಲಸ ಮಾಡಲಿ ದ್ದಾರೆ ಎಂದು ಅವರು ತಿಳಿಸಿದರು.

ಈ ಎನ್‌ಕೌಂಟರ್ ಸಂಬಂಧ ಪ್ರಕರಣವನ್ನು ಪೊಲೀಸ್ ಇಲಾಖೆಗೆ ಹಸ್ತಾಂತರಿಸಲಾಗಿದೆ. ಮುಂದೆ ಈ ಬಗ್ಗೆ ಅವರು ತನಿಖೆ ನಡೆಸಲಿದ್ದಾರೆ. ನಕ್ಸಲರ ವಿರುದ್ಧ ನಮ್ಮ ಕೂಬಿಂಗ್ ಕಾರ್ಯಾಚರಣೆ ಮುಂದುವರೆಯಲಿದೆ. ಈ ಘಟನೆಯಿಂದ ಜನ ಭಯ ಪಡುವ ಅಗತ್ಯ ಇಲ್ಲ. ಜನರ ರಕ್ಷಣೆಗೆ ನಾವು ಇದ್ದೇವೆ. ನಕ್ಸಲ್ ಚಟುವಟಿಕೆ ಬಗ್ಗೆ ಯಾವುದೇ ಆತಂಕ ಭಯ ಬೇಡ ಎಂದರು.

ಕೊಡಗು, ಉಡುಪಿ ಸೇರಿದಂತೆ ಮಲೆನಾಡು ಭಾಗಗಳಲ್ಲಿ ನಕ್ಸಲ್ ಚಟುವಟಿಕೆಗಳಿವೆ. ಎಷ್ಟು ನಕ್ಸಲರು ಇದ್ದಾರೆಂಬುದು ನಿಖರವಾಗಿ ಹೇಳಲು ಆಗುವುದಿಲ್ಲ. ಇದರಲ್ಲಿ ಹೊರರಾಜ್ಯದವರು ಇಲ್ಲ. ನಮ್ಮ ಮಾಹಿತಿ ಪ್ರಕಾರ ಎಲ್ಲರೂ ಸ್ಥಳೀಯರೇ ಆಗಿದ್ದಾರೆ. ಈ ಘಟನೆಯನ್ನು ಇಟ್ಟುಕೊಂಡು ನಕ್ಸಲರು ಪ್ರತಿದಾಳಿ ನಡೆಸುವ ಬಗ್ಗೆ ನಾವು ಅಲರ್ಟ್ ಆಗಿದ್ದೇವೆ ಎಂದು ಅವರು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕ ಡಾ.ಕೆ.ಅರುಣ್, ನಕ್ಸಲ್ ನಿಗ್ರಹ ಪಡೆಯ ಪೊಲೀಸ್ ಅಧೀಕ್ಷಕ ಜೀತೇಂದ್ರ ದಯಾಮ ಉಪಸ್ಥಿತರಿದ್ದರು.

ಶರಣಾಗತಿಯೇ ಉತ್ತಮ ದಾರಿ

ಶಸ್ತ್ರಾಸ್ತ್ರ ತೊರೆದು ಶರಣಾಗಿ ಮುಖ್ಯವಾಹಿಗೆ ಬಂದು ಸಾಮಾನ್ಯ ಜೀವನ ನಡೆಸಲು ಬಯಸುವ ನಕ್ಸಲರಿಗೆ ಕರ್ನಾಟಕ ರಾಜ್ಯ ಸರಕಾರದಿಂದ 2024ರಲ್ಲಿ ವಿಶೇಷ ಪ್ಯಾಕೇಜ್ ಮತ್ತು ಪುನರ್ ವಸತಿಗಳನ್ನು ಘೋಷಣೆ ಮಾಡಲಾಗಿದೆ. ಶರಣಾಗತಿಯೇ ಉತ್ತಮ ದಾರಿಯಾಗಿದೆ. ಅದಕ್ಕೆ ನಾವು ಹೆಚ್ಚು ಪ್ರೋತ್ಸಾಹ ನೀಡುತ್ತಿದ್ದೇವೆ ಎಂದು ಡಿಜಿಪಿ ಪ್ರಣಬ್ ಮೊಹಂತಿ ತಿಳಿಸಿದರು.

ವಿಕ್ರಂ ಗೌಡ ಅವರನ್ನು ಮುಖ್ಯವಾಹಿನಿಗೆ ಕರೆ ತರುವ ಪ್ರಯತ್ನ ನಡೆಯುತ್ತಿತ್ತು ಎಂಬ ವಿಚಾರ ನಮಗೆ ತಿಳಿದಿಲ್ಲ. ಆ ಕುರಿತು ಪತ್ರ ವ್ಯವಹಾರದ ಬಗ್ಗೆಯೂ ನಮಗೆ ಮಾಹಿತಿ ಇಲ್ಲ. ವಿಕ್ರಂ ಗೌಡ ಅಥವಾ ಕಬಿನಿ ತಂಡದ ಬೇರೆಯವರು ಕೂಡ ಶರಣಾಗತಿ ಸಂಬಂಧ ನಮ್ಮನ್ನು ಸಂರ್ಪಕ ಮಾಡಿಲ್ಲ ಮತ್ತು ಯಾರು ಮುಂದೆ ಬಂದಿಲ್ಲ ಎಂದರು.

‘ಉಡುಪಿ ಜಿಲ್ಲೆಯೊಂದರಲ್ಲೇ 34 ಪ್ರಕರಣಗಳು’

ವಿಕ್ರಮ್ ಗೌಡ ವಿರುದ್ಧ ಕೇರಳ, ತಮಿಳುನಾಡು, ಕರ್ನಾಟಕದ ಉಡುಪಿ ಮತ್ತು ಇತರೆ ಜಿಲ್ಲೆಗಳಲ್ಲಿ ಕೊಲೆ, ಕೊಲೆ ಯತ್ನ, ಅಪಹರಣ, ಸುಲಿಗೆ, ಬೆದರಿಕೆ ಸೇರಿದಂತೆ ಒಟ್ಟು 64 ಪ್ರಕರಣಗಳು ದಾಖಲಾಗಿದ್ದು, ಮೋಸ್ಟ್ ವಾಂಟೆಡ್ ಆರೋಪಿಯಾ ಗಿದ್ದನು ಎಂದು ಡಿಜಿಪಿ ಪ್ರಣಬ್ ಮೊಹಂತಿ ಮಾಹಿತಿ ನೀಡಿದರು.

ಉಡುಪಿ ಜಿಲ್ಲೆಯೊಂದರಲ್ಲೇ ಆತನ ವಿರುದ್ಧ 34 ಪ್ರಕರಣಗಳು ದಾಖಲಾಗಿವೆ. ಈತನ ವಿರುದ್ಧ 2003ರಲ್ಲಿ ಕೊಲೆಯತ್ನದ ಬಗ್ಗೆ ಮೊದಲೇ ಪ್ರಕರಣ ವರದಿಯಾಗಿತ್ತು. ಅಲ್ಲಿಯವರೆಗೂ ಭೂಗತನಾಗಿ ನಕ್ಸಲ್ ಚಟುವಟಿಕೆಯಲ್ಲಿ ಸಕ್ರಿಯನಾಗಿದ್ದನು. ಈತನ ಪತ್ತೆಗೆ ಸೂಕ್ತ ಮಾಹಿತಿ ನೀಡಿದವರಿಗೆ ರಾಜ್ಯ ಸರಕಾರ 5 ಲಕ್ಷ ರೂ. ಬಹುಮಾನ ಕೂಡ ಘೋಷಣೆ ಮಾಡಿತ್ತು ಎಂದರು.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X