ಆಸ್ಪತ್ರೆಗೆ ಚಿಕಿತ್ಸೆ ಪಡೆಯಲು ಬಂದ ತಂದೆ ಮಗನಿಗೆ ಹಲ್ಲೆ: ಪ್ರಕರಣ ದಾಖಲು

ಮಣಿಪಾಲ: ಜಾಗದ ವಿಚಾರದ ಧ್ವೇಷದಲ್ಲಿ ಆಸ್ಪತ್ರೆಗೆ ಚಿಕಿತ್ಸೆ ಪಡೆಯಲು ಬಂದ ತಂದೆ ಮಗನಿಗೆ ಆರೋಪಿಗಳ ತಂಡ ಹಲ್ಲೆ ನಡೆಸಿರುವ ಬಗ್ಗೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನ.11ರಂದು ಬೊಮ್ಮರಬೆಟ್ಟು ಗ್ರಾಮದ ಹುಸೇನ್ ಶೇಖ್ ಅಹ್ಮದ್ ಹಾಗೂ ಆರೋಪಿಗಳಾದ ಮೊಹಮ್ಮದ್ ರಫೀಕ್, ಮೊಹಮ್ಮದ್ ಅಶ್ರಫ್, ಮೊಹಮ್ಮದ್ ಸಾಜೀಕ್ ಎಂಬವರಿಗೆ ಜಾಗದ ವಿಚಾರದಲ್ಲಿ ಬೊಮ್ಮರಬೆಟ್ಟು ಗ್ರಾಮದಲ್ಲಿ ಗಲಾಟೆ ನಡೆದಿತ್ತು. ನಂತರ ಚಿಕಿತ್ಸೆ ಬಗ್ಗೆ ಮಣಿಪಾಲ ಆಸ್ಪತ್ರೆಗೆ ಹುಸೇನ್ ಶೇಖ್ ಹಾಗೂ ಅವರ ಮಗ ಹೋಗಿದ್ದು, ಆಗ ಆಸ್ಪತ್ರೆಯ ಎಮರ್ಜೆನ್ಸಿ ವಾರ್ಡ್ ಎದುರು ಆರೋಪಿಗಳಾದ ರಫೀಕ್, ಅಶ್ರಫ್, ಸಾಜೀಕ್ ಮತ್ತು ಅಶ್ರಫ್‌ನ ಕಾರು ಚಾಲಕ ಸೇರಿ ಸಮಾನ ಉದ್ದೇಶದಿಂದ ತಡೆಹಿಡಿದು ಹುಸೇನ್ ಶೇಖ್ ಮತ್ತು ಅವರ ಮಗನಿಗೆ ಹಲ್ಲೆ ಮಾಡಿ ಅವಾಚ್ಯ ಶಬ್ದಗಳಿಂದ ಬೈದು ಜೀವ ಬೆದರಿಕೆ ಹಾಕಿರುವುದಾಗಿ ದೂರಲಾಗಿದೆ.
Next Story





