ಫೆ.10: ಬ್ರಹ್ಮಾವರ ತಾಲ್ಲೂಕು ಮಟ್ಟದ ಸವಿತಾ ಸಮಾಜ ಸಮಾವೇಶ

ಉಡುಪಿ: ಬ್ರಹ್ಮಾವರ ತಾಲ್ಲೂಕು ಮಟ್ಟದ ಸವಿತಾ ಸಮಾಜದ ಘಟಕಗಳು ಹಾಗೂ ವಲಯ ಸಂಘಟನೆಗಳನ್ನು ಬಲಪಡಿಸುವ ಜೊತೆಗೆ, ಜಿಲ್ಲೆಯಾದ್ಯಂತ ಇರುವ ಘಟಕಗಳನ್ನು ಒಗ್ಗೂಡಿಸುವ ಉದ್ದೇಶದಿಂದ ಫೆ.10ರಂದು ಸಮಾವೇಶವನ್ನು ನಡೆಸಲು ತೀರ್ಮಾನಿಸಲಾಗಿದೆ ಎಂದು ತಾಲ್ಲೂಕು ಅಧ್ಯಕ್ಷ ಸಂದೀಪ್ ಪರಿಯಾಳ ತಿಳಿಸಿದ್ದಾರೆ.
ಬ್ರಹ್ಮಾವರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸವಿತಾ ಸಮಾಜದ ಘಟಕಗಳಲ್ಲಿ ಕ್ಷೇಮನಿಧಿ, ದರಪಟ್ಟಿ ಒಗ್ಗಟ್ಟು, ಪ್ರವಾಸ ಹಾಗೂ ವೃತ್ತಿಪರ ಸಂಘಟನೆಗಳ ಅಭಿವೃದ್ಧಿಗೆ ಸಂಬಂಧಿಸಿದಂತೆ ವಿವಿಧ ಯೋಜನೆ ಗಳನ್ನು ಅನುಷ್ಠಾನಗೊಳಿಸುವ ಗುರಿಯನ್ನು ಸಂಘಟನೆಯು ಹೊಂದಿದೆ ಎಂದರು.
ಪ್ರತಿ ವರ್ಷ ಬ್ರಹ್ಮಾವರ ತಾಲ್ಲೂಕಿನ ಉಪ್ಪೂರು ಹಾವಂಜೆ ಘಟಕ, ಬಾರಕೂರು, ಕೊಕ್ಕರ್ಣೆ- ಮಂದಾರ್ತಿ, ಬ್ರಹ್ಮಾವರ, ಪೇತ್ರಿ ಘಟಕಗಳು ಹಾಗೂ ಕೋಟ ವಲಯದ ಸಹಯೋಗದಲ್ಲಿ ವಿದ್ಯಾರ್ಥಿಗಳಿಗೆ ಪುಸ್ತಕ ವಿತರಣೆ ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಗುರುತಿಸಿ ಗೌರವಿಸುವ ಕಾರ್ಯಕ್ರಮಗಳನ್ನು ನಿರಂತರವಾಗಿ ಹಮ್ಮಿಕೊ ಳ್ಳಲಾಗುತ್ತಿದೆ ಎಂದು ಅವರು ಮಾಹಿತಿ ನೀಡಿದರು.
ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಅಧ್ಯಕ್ಷ ರಾಜು ಸಿ.ಭಂಡಾರಿ, ಸವಿತಾ ಸಹಕಾರಿಯ ಅಧ್ಯಕ್ಷ ನವೀನ್ ಚಂದ್ರ ಭಂಡಾರಿ, ಬ್ರಹ್ಮಾವರ ತಾಲ್ಲೂಕು ಗೌರವಾಧ್ಯಕ್ಷ ಶಿವರಾಮ ಭಂಡಾರಿ, ಪ್ರಧಾನ ಕಾರ್ಯದರ್ಶಿ ಪುನೀತ್ ಭಂಡಾರಿ, ರಾಜ್ಯ ಪ್ರತಿನಿಧಿ ಬನ್ನಂಜೆ ಗೋವಿಂದ ಭಂಡಾರಿ ಉಪಸ್ಥಿತರಿದ್ದರು.






