ಫೆ. 18-28 : ಬಾಹುಬಲಿ ಸ್ವಾಮಿ ಮಹಾಮಸ್ತಕಾಭಿಷೇಕ; ಮನವಿ ಪತ್ರ ಬಿಡುಗಡೆ

ಕಾರ್ಕಳ : 2027 ಫೆಬ್ರವರಿಯಲ್ಲಿ ನಡೆಯಲಿರುವ ಮಹಾಮಸ್ತಕಾಭಿಷೇಕದ ಮನವಿ ಪತ್ರವನ್ನು ಏಲಾಚಾರ್ಯ 108 ಶ್ರೀ ಪ್ರಸಂಗಸಾಗರ ಮುನಿಮಹಾರಾಜರು ಸೆ. 25ರಂದು ಮಹಾಮಸ್ತಕಾಭಿಷೇಕ ಕಾರ್ಯಾಲಯದಲ್ಲಿ ಬಿಡುಗಡೆಗೊಳಿಸಿದರು.
ಕಾರ್ಕಳ ಜೈನಮಠದ ಶ್ರೀ ಲಲಿತಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮೀಜಿ, ಮಹಾಮಸ್ತಕಾಭಿಷೇಕ ಸಮಿತಿ ಉಪಾಧ್ಯಕ್ಷರಾದ ಪಡುಬಿದಿರೆ ರತ್ನಾಕರರಾಜ್ ಅರಸರು, ಅನಂತ್ರಾಜ ಪೂವಾಣಿ, ಪೆರಿಂಜೆ ಜೀವಂಧರ್ ಕುಮಾರ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಸಮಿತಿ ಪ್ರಧಾನ ಕಾರ್ಯದರ್ಶಿ ಪುಷ್ಪರಾಜ್ ಜೈನ್ ಸ್ವಾಗತಿಸಿ, ಡಾ. ಸುವೀರ್ ಜೈನ್ ಕಾರ್ಯಕ್ರಮ ನಿರೂಪಿಸಿದರು. ಸಮಿತಿ ಕೋಶಾಧಿಕಾರಿ ಮೋಹನ್ ಪಡಿವಾಳ್ ವಂದಿಸಿದರು.
Next Story




