ಖಾಸಗಿ ಕ್ಷೇತ್ರದಲ್ಲಿ ಮೀಸಲಾತಿಗಾಗಿ ಹೋರಾಟ ಅನಿವಾರ್ಯ: ಸಂಜೀವ ಬಳ್ಕೂರು

ಕುಂದಾಪುರ: ದಲಿತರ ಅಭಿವೃದ್ಧಿಗೆ ಮೀಸಲಿಟ್ಟ ಹಣವನ್ನು ಸರಕಾರಗಳು ಹೇಗೆ ದುರೋಪಯೋಗ ಆಗುತ್ತಿದೆ ಮತ್ತು ಖಾಸಗಿಕರಣದಿಂದ ದಲಿತರಿಗೆ ಮೀಸಲಾತಿ ವಂಚಿಸುತ್ತಿದ್ದು ಮುಂದಿನ ದಿನಗಳಲ್ಲಿ ಖಾಸಗಿ ಕ್ಷೇತ್ರದಲ್ಲಿ ಮೀಸಲಾತಿಗಾಗಿ ದಲಿತ ಹಕ್ಕುಗಳ ನೇತೃತ್ವದಲ್ಲಿ ಹೋರಾಟ ನಡೆಸಲು ಮುಂದಾಗುವುದು ಅನಿವಾರ್ಯವಾಗಿದೆ ಎಂದು ಉಡುಪಿ ಜಿಲ್ಲಾ ದಲಿತ ಹಕ್ಕುಗಳ ಸಮಿತಿ ಜಿಲ್ಲಾ ಸಂಚಾಲಕ ಸಂಜೀವ ಬಳ್ಕೂರು ಹೇಳಿದ್ದಾರೆ.
ಉಡುಪಿ ಜಿಲ್ಲಾ ದಲಿತ ಹಕ್ಕುಗಳ ಸಮಿತಿ(ಡಿಎಚ್‌ಎಸ್) ವತಿಯಿಂದ ಅಂಪಾರು ಬಾಲಾಡಿಯ ಶಾಂತಿಧಾಮದಲ್ಲಿ ಮೇ 18ರಂದು ಆಯೋಜಿಸಲಾದ ಜನಜಾಗೃತಿ ಸಭೆಯನ್ನುದ್ದೇಶಿಸಿ ಅವರು ಮಾತನಾಡುತಿದ್ದರು.
ಸ್ಥಳೀಯ ಮುಖಂಡರಾದ ಮನೋಜ್ ಕುಮಾರ್, ಸ್ಥಳೀಯ ಸಮಸ್ಯೆಗಳಾದ ರಸ್ತೆ ರಿಪೇರಿ, ಮಾರ್ಗಗಳಿಗೆ ದಾರಿ ದೀಪ ಅಳವಡಿಸಲು ಹಾಗೂ ದಲಿತರಿಗೆ ಸ್ಮಶಾನ ಭೂಮಿ ಮಂಜೂರಾತಿಯ ತೊಡಕಿನ ಬಗ್ಗೆ ಮಾಹಿತಿ ನೀಡಿದರು.
ತಾಲೂಕು ಸಂಚಾಲಕ ರವಿ, ಸಿಐಟಿಯು ಹಿರಿಯ ಮುಖಂಡ ಬಾಲಕೃಷ್ಣ ಶೆಟ್ಟಿ ಮಾತನಾಡಿದರು. ಅಧ್ಯಕ್ಷತೆಯನ್ನು ನಾಗರಾಜ್ ವಹಿಸಿದ್ದರು. ಬಲಾಡಿಯ ಸ್ಥಳೀಯ ಮುಖಂಡರಾದ ಮನೋಜ್ ಕುಮಾರ್ ಕೆ.ಸಿ., ಸುವರ್ಣಾ ಹಾಗೂ ಅರಣ್ಯಾಧಿಕಾರಿ ಗುರುರಾಜ್ ಉಪಸ್ಥಿತರಿದ್ದರು.
ಸಭೆಯಲ್ಲಿ ಸ್ಥಳೀಯ 18 ಜನರನ್ನೊಳಗೊಂಡ ದಲಿತ ಹಕ್ಕುಗಳ ಸಮಿತಿಯ ಘಟಕವನ್ನು ರಚಿಲಾಯಿತು. ಸಂಚಾಲಕರಾಗಿ ಗುರುಮೂರ್ತಿ ಕೆ.ಸಿ., ಸಹ ಸಂಚಾಲಕರಾಗಿ ರಾಜೀವ, ನಾಗರಾಜ ಹಾಗೂ ಮನೋಜ್ ಅವರನ್ನು ಆರಿಸಲಾಯಿತು. ಸಮಿತಿ ಸದಸ್ಯರಾಗಿ ಸುವರ್ಣ, ಗೋಪಾಲ, ಶೇಷು, ನಾರಾಯಣ, ಜಯರಾಮ, ಪದ್ಮ, ಸುಮಿತ್ರಾ, ಮಂಜು, ಅಣ್ಣಪ್ಪ, ಶ್ವೇತಾ, ಜಯಕರ, ರಕ್ಷಿತಾ, ರಂಜಿತಾ, ನಾಗರಾಜ ಬಿ. ಅವರುಗಳನ್ನು ಆಯ್ಕೆ ಮಾಡಲಾಯಿತು.







