ಕುತ್ಯಾರು ಗೋಶಾಲೆಯ ಮೇವು ಸಂಗ್ರಹಣಾ ಕೊಠಡಿಗೆ ಬೆಂಕಿ

ಶಿರ್ವ, ಡಿ.7: ಶಿರ್ವ ಸಮೀಪದ ಕುತ್ಯಾರು ಆನೆಗುಂದಿ ಮಠದ ಗೋಶಾಲೆಯ ಮೇವು ಸಂಗ್ರಹಣಾ ಕೊಠಡಿಯಲ್ಲಿ ರವಿವಾರ ಅಗ್ನಿ ಅನಾಹುತ ಸಂಭವಿಸಿರುವ ಬಗ್ಗೆ ವರದಿಯಾಗಿದೆ.
ಮಠದ ಪರಿಸರದ ಗೋಶಾಲೆಯಿಂದ ಪ್ರತ್ಯೇಕವಾಗಿ ಇರುವ ಸಭಾ ಭವನದ ಮಹಡಿಯಲ್ಲಿದ್ದ ಕೊಠಡಿಯಲ್ಲಿ ಬೆಳಗ್ಗೆ 9ಗಂಟೆ ಸುಮಾರಿಗೆ ವಿದ್ಯುತ್ ಶಾರ್ಟ್ ಸರ್ಕ್ಯೂಟ್ನಿಂದ ಬೆಂಕಿ ಕಾಣಿಸಿಕೊಂಡಿದ್ದು, ಬಳಿಕ ಬೆಂಕಿಯ ಕೆನ್ನಾಲಿಗೆ ಇಡೀ ಕೊಠಡಿಯನ್ನು ವಿಸ್ತರಿಸಿತು.
ಇದರಿಂದ ಒಣ ಬೈ ಹುಲ್ಲಿನ ಮೇವು ಸಂಪೂರ್ಣ ಸುಟ್ಟು ಹೋಗಿದೆ. ತಕ್ಷಣ ವೇದಪಾಠ ಶಾಲೆಯ ವಿದ್ಯಾರ್ಥಿಗಳು ಮಠದ ಸಿಬ್ಬಂದಿಗಳು ಸಮಯಪ್ರಜ್ಜೆ ಮೆರೆದು ಹೆಚ್ಚಿನ ಅನಾಹುತವನ್ನು ತಪ್ಪಿಸಿದ್ದಾರೆ. ಉಡುಪಿ ಅಗ್ನಿಶಾಮಕ ದಳದ ಸಿಬ್ಬಂದಿಗಳು ಸ್ಥಳಕ್ಕಾಗಮಿಸಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ.
Next Story





