ಬೋಟಿನಿಂದ ನದಿಗೆ ಬಿದ್ದು ಮೀನುಗಾರ ನಾಪತ್ತೆ

ಗಂಗೊಳ್ಳಿ, ಜ.19: ಮೀನುಗಾರಿಕೆ ಮುಗಿಸಿ ವಾಪಾಸ್ಸು ಬರುತ್ತಿದ್ದ ಬೋಟಿನಿಂದ ಮೀನುಗಾರರೊಬ್ಬರು ಗಂಗೊಳ್ಳಿ ಪಂಚಗಂಗಾವಳಿ ನದಿಯ ನೀರಿಗೆ ಬಿದ್ದು ನಾಪತ್ತೆಯಾಗಿರುವ ಘಟನೆ ಜ.19ರಂದು ಬೆಳಗಿನ ಜಾವ ನಡೆದಿದೆ.
ಮೃತರನ್ನು ಕುಂಭಾಶಿ ಗ್ರಾಮದ ಕೊರವಡಿ ನಿವಾಸಿ ಶೀನಾ ಮರಕಾಲ ಎಂಬವರ ಮಗ ಸಂತೋಷ(38) ಎಂದು ಗುರುತಿಸಲಾಗಿದೆ. ಇವರು ಗಂಗೊಳ್ಳಿ ಶಾರದ ಖಾರ್ವಿ ಅವರ ಗುರು ಜಟ್ಟಿಗೇಶ್ವರ ಎಂಬ ಬೋಟಿನಲ್ಲಿ ಮೀನುಗಾರಿಕೆ ಮುಗಿಸಿ ವಾಪಾಸು ಬಂದರಿಗೆ ಬರುತ್ತಿದ್ದು, ಈ ವೇಳೆ ಅವರು ಬೋಟಿನಿಂದ ಆಕಸ್ಮಿಕವಾಗಿ ಕಾಲು ಜಾರಿ ಪಂಚ ಗಂಗಾವಳಿ ನದಿಯ ನೀರಿಗೆ ಬಿದ್ದು ನಾಪತ್ತೆಯಾಗಿದ್ದರು. ಎಲ್ಲರೂ ಸೇರಿ ಹುಡುಕಾಡಿದರೂ ಇನ್ನು ಅವರ ಪತ್ತೆಯಾಗಿಲ್ಲ ಎಂದು ತಿಳಿದುಬಂದಿದೆ. ಈ ಬಗ್ಗೆ ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story





