ಫ್ಲ್ಯಾಟ್‌ಗಳಿಗೆ ನುಗ್ಗಿ ವಿದ್ಯಾರ್ಥಿಗಳ ಸೊತ್ತು ಕಳವು

ಮಣಿಪಾಲ, ಅ.24: ಇಲ್ಲಿಗೆ ಸಮೀಪದ ವಸತಿ ಸಮುಚ್ಛಯದಲ್ಲಿನ ವಿದ್ಯಾರ್ಥಿಗಳ ಫ್ಲ್ಯಾಟ್‌ಗೆ ನುಗ್ಗಿದ ಕಳ್ಳರು, ನಾಲ್ಕು ಲ್ಯಾಪ್‌ಟಾಪ್ ಸೇರಿದಂತೆ ಲಕ್ಷಾಂತರ ರೂ. ಮೌಲ್ಯದ ಸೊತ್ತುಗಳನ್ನು ಕಳವು ಮಾಡಿರುವ ಬಗ್ಗೆ ವರದಿಯಾಗಿದೆ.
ಯಶ್ ಕಥೋರ್ ಮತ್ತು ಅವರ ಸ್ನೇಹಿತರು ಮಣಿಪಾಲದ ಮಾಂಡವಿ ಸಪಾಯಿರ್ ಅಪಾರ್ಟ್‌ಮೆಂಟ್‌ನಲ್ಲಿ ವಾಸವಾಗಿದ್ದು, ಅ.24ರಂದು ಬೆಳಗ್ಗೆ ಇವರ ರೂಮಿಗೆ ನುಗ್ಗಿದ ಕಳ್ಳರು, ಲ್ಯಾಪ್‌ಟಾಪ್ ಕಳವು ಮಾಡಿದ್ದಾರೆ. ಬಳಿಕ ಅದೇ ಅಪಾರ್ಟ್ ಮೆಂಟ್‌ನಲ್ಲಿರುವ ಗಾಯತ್ರಿ ಅವರ ಲ್ಯಾಪ್‌ಟಾಪ್ ಮತ್ತು ಜೆಬಿಎಲ್ ಟ್ಯುನ್, ಆಯಿಶಾ ಅಲ್ಮಾಸ್ ಅವರ ಲ್ಯಾಪ್‌ಟಾಪ್, ಶಫೀನಾ ಶಂಶುದ್ದೀನ್ ಅವರ ಲ್ಯಾಪ್‌ಟಾಪ್ ಮತ್ತು ಮೇದಿಯಾ ಮನ್ಸೂರ್ ಅವರ ಇಯರ್ ಪೋನ್ ಮತ್ತು ವ್ಯಾಚ್‌ಗಳನ್ನು ಕಳವು ಮಾಡಿಕೊಂಡು ಹೋಗಿರುವು ದಾಗಿ ದೂರಲಾಗಿದೆ. ಇವುಗಳ ಒಟ್ಟು ಮೌಲ್ಯ 2,56,000ರೂ. ಎಂದು ಅಂದಾಜಿಸಲಾಗಿದೆ.
ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story





