ಆನ್‌ಲೈನ್ ಸಾಲದ ಹೆಸರಿನಲ್ಲಿ ವಂಚನೆ: ಪ್ರಕರಣ ದಾಖಲು

ಹೆಬ್ರಿ, ಜ.9: ಆನ್‌ಲೈನ್ ಸಾಲದ ಹೆಸರಿನಲ್ಲಿ ವ್ಯಕ್ತಿಯೊಬ್ಬರು ಲಕ್ಷಾಂತರ ರೂ. ವಂಚನೆ ಮಾಡಿರುವ ಬಗ್ಗೆ ಹೆಬ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹೆಬ್ರಿ ಸೋಮೇಶ್ವರದ ಕೆಪ್ಲಿ ನಿವಾಸಿ ರಮೇಶ ಎಂಬವರಿಗೆ ಜ.2ರಂದು ಬಜಾಜ್ ಫೈನಾನ್ಸ್‌ನಿಂದ ರವಿ ಕುಮಾರ್ ಮಾತನಾಡುವುದಾಗಿ ಹೇಳಿ ಕರೆ ಮಾಡಿದ್ದು, ಶೇ.3ರ ಬಡ್ಡಿದರದಲ್ಲಿ ಆನ್‌ಲೈನ್ ಲೋನ್ ಕೋಡುವುದಾಗಿ ರಮೇಶ್ ಅವರನ್ನು ನಂಬಿಸಿದ್ದನು.
5 ವರ್ಷಕ್ಕೆ ಪ್ರತಿ ತಿಂಗಳು 6289ರೂ. ಹಣ ಪಾವತಿಸಲು ಬರುತ್ತದೆ ಎಂದು ನಂಬಿಸಿ ಬೇರೆ ಬೇರೆ ಕಾರಣ ಹೇಳಿ ಜ.2ರಿಂದ ಜ.5ರವರೆಗೆ ಹಂತ ಹಂತವಾಗಿ ಒಟ್ಟು 36 ಟ್ರಾಜೆಂಕ್ಷನ್ ಮೂಲಕ 2,19500ರೂ. ಹಣವನ್ನು ಹಾಕಿಸಿಕೊಂಡು ಮೋಸ ಮಾಡಿರುವುದಾಗಿ ದೂರಲಾಗಿದೆ.
Next Story





