ಸರಕಾರಿ ಕೆಲಸ ಕೊಡಿಸುವುದಾಗಿ ನಂಬಿಸಿ 10.83 ಲಕ್ಷ ರೂ. ವಂಚನೆ: ಪ್ರಕರಣ ದಾಖಲು

ಕೋಟ, ಜೂ.16: ಸರಕಾರಿ ಕೆಲಸ ಕೊಡಿಸುವುದಾಗಿ ನಂಬಿಸಿ ಯುವತಿಯೊಬ್ಬಳಿಗೆ ಲಕ್ಷಾಂತರ ರೂ. ವಂಚಿಸಿರುವ ಬಗ್ಗೆ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಐರೋಡಿ ಗ್ರಾಮದ ಎಸ್ ವರ್ಷಾ(23) ಎಂಬವರಿಗೆ ಸರಕಾರಿ ಕೆಲಸ ಕೊಡಿಸುವುದಾಗಿ ನಂಬಿಸಿದ ಅಭಿಷೇಕ್ ಎಂಬಾತ, 2025ರ ಅ.31ರಿಂದ 2026ರ ಮೇ 28ರವರೆಗೆ ವರ್ಷಾ ಅವರಿಂದ ಒಟ್ಟು 10,83,000ರೂ. ಪಡೆದುಕೊಂಡಿದ್ದನು. ಬಳಿಕ ಆರೋಪಿ ಸರಕಾರಿ ಕೆಲಸವನ್ನು ಕೊಡಿಸದೇ ಪಡೆದುಕೊಂಡ ಹಣವನ್ನು ವಾಪಾಸ್ಸು ನೀಡದೆ ಮೋಸ ಮಾಡಿದ್ದಾನೆ. ಹಣ ವಾಪಾಸು ಕೇಳಿದಕ್ಕೆ ವರ್ಷಾಗೆ ಅವಾಚ್ಯ ಶಬ್ದದಿಂದ ಬೈದು ಜೀವ ಬೆದರಿಕೆ ಹಾಕಿದ್ದಾನೆ ಎಂದು ದೂರಲಾಗಿದೆ.
Next Story




