ಆ.29ರಂದು ಉಚಿತ ಮೂಳೆಯ ಖನಿಜಾಂಶಗಳ ಸಾಂದ್ರತೆ ಪರೀಕ್ಷಾ ಶಿಬಿರ

ಉಡುಪಿ, ಆ.27: ಉಡುಪಿ ಡಾ.ಟಿ.ಎಂ.ಎ.ಪೆ ಆಸ್ಪತ್ರೆಯ ಮೂಳೆ ವಿಭಾಗದಲ್ಲಿ ಆ.29ರಂದು ಬೆಳಿಗ್ಗೆ 10ರಿಂದ ಮಧ್ಯಾಹ್ನ 3ರವರೆಗೆ ಉಚಿತ ಮೂಳೆಯ ಖನಿಜಾಂಶಗಳ ಸಾಂದ್ರತೆ ಪರೀಕ್ಷಾ ಶಿಬಿರವನ್ನು ಏರ್ಪಡಿಸಲಾಗಿದೆ.
40 ವರ್ಷ ದಾಟಿದವರು ಈ ಒಂದು ಶಿಬಿರಕ್ಕೆ ಅವರ ಹೆಸರನ್ನು ನೋಂದಾಯಿಸಬಹುದು. ಶಿಬಿರಕ್ಕೆ ಮೊದಲು ಬಂದವ ರಿಗೆ ಮತ್ತು 100 ಶಿಬಿರಾರ್ಥಿ ಗಳಿಗೆ ಮಾತ್ರ ಅವಕಾಶ ಇರುವುದು. ನೊಂದಣಿ ಮತ್ತು ಹೆಚ್ಚಿನ ಮಾಹಿತಿಗಾಗಿ 0820-2526501 ಮತ್ತು ದೂರವಾಣಿ ವಿಸ್ತರಣೆ ಸಂಖ್ಯೆ 2164ಗೆ ಸಂಪರ್ಕಿಸ ಬಹುದೆಂದು ಆಸ್ಪತ್ರೆಯ ವೆದ್ಯಕಿಯ ಅಧಿಕ್ಷಕ ಡಾ.ಶಶಿಕಿರಣ್ ಉಮಾಕಾಂತ್ ತಿಳಿಸಿದರು.
ಆಸ್ಟಿಯೊಪೊರೊಸಿಸ್ ಅಂದರೆ ಮೂಳೆ ತೆಳುವಾಗಿ ಮತ್ತು ದುರ್ಬಲವಾಗಿ ಮೂಳೆ ಮುರಿತಕ್ಕೆ ಕಾರಣವಾಗುವ ಒಂದು ಸದ್ದಿಲ್ಲದ ಸ್ಥಿತಿ. ದೆಹವು ಹೊಸ ಮೂಳೆಗಳ ರಚನೆ ರೂಪಿಸಲು ವಿಫಲವಾದರೆ ಅಥವಾ ಹಳೆಯ ಮೂಳೆಗಳು ಹೆಚ್ಚಿನ ಸಂಖ್ಯೆ ಯಲ್ಲಿ ನಾಶವಾದರೆ ಈ ರೊಗವು ಸಂಭವಿಸುತ್ತದೆ. ಈ ರೋಗವು ಋತುಬಂಧಕ್ಕೊಳಗಾದ ಮಹಿಳೆಯರಲ್ಲಿ ಹೆಚ್ಚು ಸಾಮಾನ್ಯವಾಗಿದೆ. ಆದರೆ ಮಾಹಿತಿಯ ಕೊರತೆಯ ಕಾರಣದಿಂದಾಗಿ ಚಿಕಿತ್ಸೆ ತೆಗೆದುಕೊಳ್ಳುವುದಿಲ್ಲ ಎಂದು ಆಸ್ಪತ್ರೆಯ ಮೂಳೆ ವಿಭಾಗದ ಮುಖ್ಯಸ್ಥ ಡಾ.ರಾಜಾರಮ್ ಪೈ ತಿಳಿಸಿದ್ದಾರೆ.
ಆಸ್ಟಿಯೊಪೊರೊಸಿಸ್ ಪರೀಕ್ಷೆಯನ್ನು ದೇಹದ ಮೇಲೆ ಯಾವುದೇ ಗಾಯವಿಲ್ಲದೇ ಅತ್ಯಂತ ಸುಲಭದಲ್ಲಿ ಕಂಡು ಹಿಡಿಯುವ ವಿಧಾನವೇ ಮೂಳೆಯ ಖನಿಜಾಂಶಗಳ ಸಾಂದ್ರತೆ ಪರೀಕ್ಷೆ. ಪರೀಕ್ಷೆಯ ನಂತರ ತಜ್ಞರು ರೋಗ ನಿರ್ಣಯ ಮಾಡಿ, ಸಲಹೆ ಗಳನ್ನು ನೀಡುತ್ತಾರೆ. ಮಹಿಳೆಯರು ಅದರಲ್ಲೂ 50 ವರ್ಷ ದಾಟಿದವರು ಮೂಳೆಯ ಖನಿಜಾಂಶಗಳ ಸಾಂದ್ರತೆ ಪರೀಕ್ಷೆಯನ್ನು ಖಡ್ಡಾಯವಾಗಿ ಮಾಡಿಸಿಕೊಳ್ಳಬೇಕೆಂದು ಅವರು ಹೇಳಿಕೆಯಲ್ಲಿ ತಿಳಿಸಿದ್ದಾರೆ.







