ಬೈಂದೂರು | ಇಸ್ಪೀಟು ಜುಗಾರಿ: ಆರು ಮಂಂದಿ ಬಂಧನ

ಬೈಂದೂರು: ಶಿರೂರು ಗ್ರಾಮದ ಸರಕಾರಿ ಹಾಡಿಯಲ್ಲಿ ಇಸ್ಪೀಟು ಜುಗಾರಿ ಆಡುತ್ತಿದ್ದ ಆರು ಮಂದಿಯನ್ನು ಬೈಂದೂರು ಪೊಲೀಸರು ನ.16ರಂದು ರಾತ್ರಿ ವೇಳೆ ಬಂಧಿಸಿದ್ದಾರೆ.
ಪಡುವರಿ ಗ್ರಾಮದ ಶೇಖರ(36) ಭಟ್ಕಳದ ಹರೀಶ್ ನಾಯ್ಕ್(42), ದೇವಂದ್ರ ಜಟ್ಟಪ್ಪ ನಾಯ್ಕ್(38), ಅಶೋಕ ವೆಂಕಟೇಶ ನಾಯ್ಕ್(42), ನಾಗಪ್ಪ ಗೊವೀಂದ ನಾಯ್ಕ್(45), ಶಿರೂರು ಗ್ರಾಮದ ದಿನಕರ(32) ಬಂಧಿತ ಆರೋಪಿಗಳು. ಬಂಧಿತರಿಂದ 24010ರೂ. ನಗದು, ನಾಲ್ಕು ದ್ವಿಚಕ್ರ ವಾಹನಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story





