ಜ.29 ರಂದು ಗಾಂಧಿ ಸ್ಮೃತಿ ವಿಚಾರಗೋಷ್ಟಿ

ಉಡುಪಿ, ಜ.27: ರಥಬೀದಿ ಗೆಳೆಯರು ಉಡುಪಿ, ಸಹಬಾಳ್ವೆ ಉಡುಪಿ, ಸೌಹಾರ್ದ ಕರ್ನಾಟಕ, ಕರ್ನಾಟಕ ದಲಿತ ಸಂಘರ್ಷ ಸಮಿತಿ(ಅಂಬೇಡ್ಕರ್ ವಾದ) ಉಡುಪಿ ಜಿಲ್ಲಾ ಸಮಿತಿಗಳ ಸಂಯುಕ್ತ ಆಶ್ರಯದಲ್ಲಿ ಗಾಂಧಿ ಸ್ಮೃತಿ ಅಂಗ ವಾಗಿ ಗಾಂಧೀಜಿಯವರ ಗ್ರಾಮೀಣ ಭಾರತ - ಪ್ರಸ್ತುತ ಸವಾಲುಗಳು ವಿಚಾರಗೋಷ್ಟಿ ಮತ್ತು ಸಂವಾದ ಜ.29. ರಂದು ಸಂಜೆ 5ಗಂಟೆಗೆ ಉಡುಪಿ ಅಜ್ಜರಕಾಡು ವಿಮಾ ನೌಕರರ ಸಭಾ ಭವನದಲ್ಲಿ ಜರಗಲಿದೆ. ಪ್ರಗತಿಪರ ಚಿಂತಕ ವಿಲ್ಫ್ರೆಡ್ ಡಿಸೋಜ ಉಪ್ಪಿನಂಗಡಿ ವಿಚಾರ ಮಂಡನೆ ಮಾಡಲಿದ್ದಾರೆ ಎಂದು ಸಂಘಟಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Next Story





