ಗಂಗ್ಗೊಳ್ಳಿ: ಮರುವಾಯಿ ಹೆಕ್ಕುತ್ತಿದ್ದ ಮಹಿಳೆ ನೀರಿನಲ್ಲಿ ಮುಳುಗಿ ಮೃತ್ಯು

ಗಂಗ್ಗೊಳ್ಳಿ, ಆ.3: ಹೊಳೆಯಲ್ಲಿ ಮರುವಾಯಿ (ಮಳಿ) ತೆಗೆಯುವ ಕೆಲಸ ಮಾಡಿಕೊಂಡಿದ್ದ ಶೇಷಿ ಖಾರ್ವಿ (60) ಇಂದು ಬೆಳಗ್ಗೆ ಪಂಚಗಂಗಾವಳಿ ಹೊಳೆಯಲ್ಲಿ ಮರುವಾಯಿ ತೆಗೆಯುವ ವೇಳೆ ಅಕಸ್ಮಿಕವಾಗಿ ಕಾಲುಜಾರಿ ನೀರಿನಲ್ಲಿ ಮುಳುಗಿದ್ದು, ಗಮನಿಸಿದ ಸ್ಥಳೀಯರನ್ನು ಅವರನ್ನು ಮೇಲಕ್ಕೆ ತಂದು ಚಿಕಿತ್ಸೆಗಾಗಿ ಕುಂದಾಪುರ ಸರಕಾರಿ ಆಸ್ಪತ್ರೆಗೆ ಕರೆತಂದರೂ ಅದಾಗಲೇ ಮೃತಪಟ್ಟಿರುವುದಾಗಿ ವೈದ್ಯರು ದೃಢಪಡಿಸಿದರು.
ಈ ಬಗ್ಗೆ ಗಂಗೊಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story





