ಗಂಗೊಳ್ಳಿ | ಮೀನು ಮಾರಾಟದ ಮಹಿಳೆ ಕುಸಿದು ಬಿದ್ದು ಮೃತ್ಯು

ಸಾಂದರ್ಭಿಕ ಚಿತ್ರ
ಗಂಗೊಳ್ಳಿ, ಡಿ.4: ಪ್ರತಿದಿನದಂತೆ ಮೀನು ಮಾರಾಟ ಮಾಡಲು ಗಂಗೊಳ್ಳಿಯಿಂದ ಮೀನು ತೆಗೆದುಕೊಂಡು ಬಸ್ಸಿನಲ್ಲಿ ಕುಂದಾಪುರದ ವಿನಾಯಕ ಜಂಕ್ಷನ್ ಗೆ ಬರುತ್ತಿದ್ದ ಪದ್ಮಾವತಿ (67) ಎಂಬ ಮೀನುಗಾರ ಮಹಿಳೆ ಶಾಸ್ತ್ರಿ ಪಾರ್ಕ್ ಸಮೀಪ ಬಸ್ಸಿನಲ್ಲೇ ಕುಸಿದು ಬಿದ್ದು ಮೃತಪಟ್ಟಿದ್ದಾರೆ.
ಬಸ್ಸಿನಲ್ಲಿದ್ದ ಸ್ಥಳೀಯರು ಸೇರಿ ತಕ್ಷಣ ಪದ್ಮಾವತಿ ಅವರನ್ನು ಕುಂದಾಪುರ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು, ಅಲ್ಲಿ ಪರೀಕ್ಷಿಸಿದ ವೈದ್ಯರು ಆಕೆ ಮೃತಪಟ್ಟಿರುವುದಾಗಿ ತಿಳಿಸಿದರು.
ಈ ಬಗ್ಗೆ ಕುಂದಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story





