Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
    • ಕ್ರೈಂ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 23ನೇ ವಾರ್ಷಿಕ ವಿಶೇಷಾಂಕ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ಪುಸ್ತಕ ಸಾಂಗತ್ಯ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಮಾಹಿತಿ ಮಾರ್ಗದರ್ಶನ
    • ಆರೋಗ್ಯ
    • ಓ ಮೆಣಸೇ
    • ಕೃತಿ ಪರಿಚಯ
    • ಝಲಕ್
    • ಬುಡಬುಡಿಕೆ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಜಿಲ್ಲೆಗಳು
  3. ಉಡುಪಿ
  4. ಸುಳ್ಳು ಪ್ರಕರಣದಲ್ಲಿ ಅಮಾಯಕ ರಿಕ್ಷಾ...

ಸುಳ್ಳು ಪ್ರಕರಣದಲ್ಲಿ ಅಮಾಯಕ ರಿಕ್ಷಾ ಚಾಲಕನನ್ನು ಸಿಲುಕಿಸಿದ ಗಂಗೊಳ್ಳಿ ಪೊಲೀಸರು; ಹೈಕೋರ್ಟ್‌ನಿಂದ ರಕ್ಷಣೆ

► ಗಂಗೊಳ್ಳಿಯಲ್ಲೊಂದು ಅಪರೂಪದ ಪ್ರಕರಣ: ಡಾ. ಶ್ಯಾನುಭಾಗ್ ► ಪೊಲೀಸರ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಲು ಸಹಕಾರ

ವಾರ್ತಾಭಾರತಿವಾರ್ತಾಭಾರತಿ8 Sept 2026 8:24 PM IST
share
ಸುಳ್ಳು ಪ್ರಕರಣದಲ್ಲಿ ಅಮಾಯಕ ರಿಕ್ಷಾ ಚಾಲಕನನ್ನು ಸಿಲುಕಿಸಿದ ಗಂಗೊಳ್ಳಿ ಪೊಲೀಸರು; ಹೈಕೋರ್ಟ್‌ನಿಂದ ರಕ್ಷಣೆ

ಉಡುಪಿ, ಸೆ.8: ಸರಕಾರಿ ಜಮೀನಿನಲ್ಲಿ ಅಕ್ರಮವಾಗಿ ಕಲ್ಲುಕೋರೆ ಮಾಡಿ ಕೆಂಪುಕಲ್ಲನ್ನು ಕಳವು ಮಾಡಿದ ಪ್ರಕರಣವೊಂದರಲ್ಲಿ ಯಾವುದೇ ತಪ್ಪು ಮಾಡಿರದ ಆಲೂರಿನ ಬಡ ರಿಕ್ಷಾ ಡ್ರೈವರ್ ಶೀನ ಪೂಜಾರಿ (55) ಅವರನ್ನು ಬಲಿಪಶು ಮಾಡಿ ಗಂಗೊಳ್ಳಿ ಪೊಲೀಸರು ಹೂಡಿದ್ದ ದಾವೆಯನ್ನು ಕರ್ನಾಟಕ ಉಚ್ಛ ನ್ಯಾಯಾಲಯ ರದ್ದುಪಡಿಸಿ ಆದೇಶ ನೀಡಿದೆ ಎಂದು ಶೀನ ಪೂಜಾರಿ ಅವರ ಪರವಾಗಿ ಉಚ್ಛ ನ್ಯಾಯಾಲಯದಲ್ಲಿ ಪೊಲೀಸರ ಕ್ರಮವನ್ನು ಪ್ರಶ್ನಿಸಿದ್ದ ಉಡುಪಿಯ ಮಾನವ ಹಕ್ಕುಗಳ ರಕ್ಷಣಾ ಪ್ರತಿಷ್ಠಾನದ ಡಾ.ರವೀಂದ್ರನಾಥ ಶ್ಯಾನುಭಾಗ್ ತಿಳಿಸಿದ್ದಾರೆ.

ಉಡುಪಿಯ ವೈಕುಂಠ ಬಾಳಿಗಾ ಕಾನೂನು ಕಾಲೇಜಿನ ತಮ್ಮ ಕಚೇರಿಯಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ‘ಬೇಲಿಯೇ ಎದ್ದು ಹೊಲ ಮೇಯ್ದ’ ವಿಶಿಷ್ಟ ಪ್ರಕರಣದ ಕುರಿತು ವಿವರಿಸಿ ಅವರು ಮಾತನಾಡುತಿದ್ದರು.

ಕುಂದಾಪುರ ತಾಲೂಕಿನ ಆಲೂರು ಗ್ರಾಮದ ಶೀನ ಪೂಜಾರಿ ವೃತ್ತಿಯಲ್ಲಿ ರಿಕ್ಷಾ ಚಾಲಕ. ಪತ್ನಿ ಎಂಡೋಸಲ್ಫಾನ್ ಪೀಡಿತೆ. ಅವರ ಆರೋಗ್ಯದ ಚಿಕಿತ್ಸೆ ಗಾಗಿ ಹಾಗೂ ಕಾಲೇಜಿನಲ್ಲಿ ಓದುತ್ತಿರುವ ಇಬ್ಬರು ಪುತ್ರರ ವಿದ್ಯಾಭ್ಯಾಸಕ್ಕಾಗಿ ಹಣಹೊಂದಿಸಲು ಶೀನ ಪೂಜಾರಿ ಹಗಲಿರುಳು ಕಷ್ಟಪಟ್ಟು ದುಡಿಯುತಿದ್ದಾರೆ ಎಂದು ಡಾ.ಶ್ಯಾನುಭಾಗ್ ವಿವರಿಸಿದರು.

2025ರ ಆಗಸ್ಟ್ 24ರಂದು ಆಲೂರಿನ ಅವರ ಪರಿಚಯದ ಉದಯ ಶೆಟ್ಟಿ ಎಂಬವರು ಗಂಗೊಳ್ಳಿಗೆ ಹೋಗಿಬರಲು ಶೀನ ಪೂಜಾರಿ ಅವರ ರಿಕ್ಷಾವನ್ನು ಗೊತ್ತುಮಾಡಿದ್ದರು. ಮನೆಯಿಂದ ಅವರನ್ನು ಗಂಗೊಳ್ಳಿ ಪೊಲೀಸ್ ಠಾಣೆಗೆ ಕರೆದೊಯ್ದ ಶೀನಪೂಜಾರಿ ಹೊರಗೆ ರಿಕ್ಷಾ ನಿಲ್ಲಿಸಿದ್ದು, ತನಗಾಗಿ ಕಾಯುವಂತೆ ತಿಳಿಸಿ ಉದಯ ಶೆಟ್ಟಿ ಠಾಣೆಯೊಳಗೆ ಹೋಗಿದ್ದರು.

ಅರ್ಧಗಂಟೆಯ ಬಳಿಕ ಪೊಲೀಸ್ ಪೇದೆಯೊಬ್ಬರು ಹೊರಬಂದು ಶೀನ ಪೂಜಾರಿ ಅವರನ್ನು ಠಾಣೆಯೊಳಗೆ ಬರುವಂತೆ ತಿಳಿಸಿದಂತೆ ಅವರು ಠಾಣೆಯೊಳಗೆ ಹೋದರು. ಅಲ್ಲಿ ಪೊಲೀಸ್ ಅಧಿಕಾರಿಯೊಬ್ಬರು ಉದಯ ಶೆಟ್ಟಿ ಅವರ ಪರಿಚಯವಿದೆಯೇ ಎಂದು ವಿಚಾರಿಸಿದ್ದು, ಅವರು ಹೌದೆಂದು ತಿಳಿಸಿದ್ದರು. ‘ಹಾಗಿದ್ದರೆ ಶೀನ ಪೂಜಾರಿಯ ವರೇ ಈ ದಾಖಲೆಯೊಂದಕ್ಕೆ ಸಹಿ ಮಾಡಿ’ ಎಂದು ಪೊಲೀಸರು ಹೇಳಿದ್ದರು.

ಸರ್, ಇದೆಲ್ಲಾ ಏನು? ನನಗೆ ಓದಲು, ಬರೆಯಲು ಬರುವುದಿಲ್ಲ. ನಾನೇಕೆ ಸಹಿ ಹಾಕಬೇಕು ಎಂದು ಶೀನಪೂಜಾರಿ ವಿಚಾರಿಸಿದಾಗ, ಇದು ಕೇವಲ ಔಪಚಾರಿಕ. ನಿಮಗಿದರಿಂದ ಯಾವುದೇ ತೊಂದರೆಯಾಗುವುದಿಲ್ಲ ಎಂದು ಪೊಲೀಸರು ಭರವಸೆ ಮಾತುಗಳನ್ನಾಡಿದ್ದರು. ಪೊಲೀಸ್ ಇಲಾಖೆಗೆ ಸಹಕರಿಸುವುದು ಪ್ರತಿಯೊಬ್ಬ ನಾಗರಿಕರ ಕರ್ತವ್ಯ ಎಂದು ತಿಳಿದು ಶೀನ ಪೂಜಾರಿ ಪೊಲೀಸರು ನೀಡಿದ ದಾಖಲೆಗೆ ಸಹಿ ಮಾಡಿದ್ದರು. ಬಳಿಕ ಅವರಿಂದ ಆಧಾರ್ ಕಾರ್ಡಿನ ಪ್ರತಿ ಪಡೆದುಕೊಂಡು, ನಿಮಗೇನೂ ತೊಂದರೆಯಾಗುವುದಿಲ್ಲ.. ಒಮ್ಮೆ ನ್ಯಾಯಾಲಯಕ್ಕೆ ಬರಬೇಕಾಗಬಹುದು ಎಂದು ಪೊಲೀಸರು ಹೇಳಿದಾಗ ಶೀನ ಪೂಜಾರಿಗೆ ಆತಂಕ ಉಂಟಾಗಿತ್ತು.

ಕೋರ್ಟ್‌ನಿಂದ ಸಮನ್ಸ್: ಇದಾಗ ಎರಡು ತಿಂಗಳ ಬಳಿಕ ಶೀನ ಪೂಜಾರಿ ಅವರಿಗೆ ಕೋರ್ಟಿನಿಂದ ಸಮನ್ಸ್ ಬಂದಿದೆ. ಸ್ಟೇಷನಿಗೆ ಬಂದು ಪಡೆಯುವಂತೆ ಗಂಗೊಳ್ಳಿ ಪೊಲೀಸರು ಅವರ ಮೊಬೈಲ್‌ಗೆ ಕರೆ ಮಾಡಿ ತಿಳಿಸಿದ್ದರು. ಬಳಿಕ ಅವರಿದ್ದಲ್ಲಿಗೆ ಬಂದ ಪೊಲೀಸರು ನೋಟೀಸು ನೀಡಿ ಸಹಿ ಪಡೆದು ತೆರಳಿದ್ದರು. ಓದಲು ಬಾರದ ಶೀನ ಪೂಜಾರಿ ಪರಿಚಯದವರ ಬಳಿ ಅದನ್ನು ಓದಿಸಿದಾಗ, ಕುಂದಾಪುರ ನ್ಯಾಯಾಲಯದಲ್ಲಿ ಪೊಲೀಸರು ಅವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ಹೂಡಿದ್ದು, ಕೋರ್ಟಿಗೆ ಹಾಜರಾಗಿ ಜಾಮೀನು ಪಡೆಯದಿದ್ದರೆ ಜೈಲುಪಾಲಾಗುತ್ತೀರಿ ಎಂದು ಅವರು ತಿಳಿಸಿದರು.

ನೋಟೀಸನ್ನು ವಿವರವಾಗಿ ಓದಿಸಿದಾಗ, ಸರಕಾರಿ ಜಮೀನಿನಲ್ಲಿ ಕಲ್ಲುಕೋರೆಯನ್ನು ಮಾಡಿ, ಕೆಂಪು ಕಲ್ಲು ಕದ್ದಿರುವ ಆಪಾದನೆಯಲ್ಲಿ ಉದಯ ಶೆಟ್ಟಿ ಅವರನ್ನು ಒಂದನೇ ಹಾಗೂ ಶೀನ ಪೂಜಾರಿ ಅವರನ್ನು ಎರಡನೇ ಆರೋಪಿಯಾಗಿ ಮಾಡಿರುವುದು ಶೀನ ಪೂಜಾರಿ ಅವರಿಗೆ ತಿಳಿಯಿತು. ಉದಯ ಶೆಟ್ಟಿ ಆಲೂರಿನವರು ಎಂಬುದನ್ನು ಹೊರತು ಪಡಿಸಿ ಅವರ ಬಗ್ಗೆ ಯಾವುದೇ ಮಾಹಿತಿ ತಿಳಿಯದ ಅಮಾಯಕ ಶೀನಪೂಜಾರಿ ಅವರನ್ನು ಪೊಲೀಸರು ಆರೋಪಿಯನ್ನಾಗಿ ಮಾಡಿರುವುದು ತಿಳಿದು ದಿಗ್ಭ್ರಮೆ ಗೊಳಗಾದರು.

ಕೂಡಲೇ ಗಂಗೊಳ್ಳಿ ಠಾಣೆಗೆ ತೆರಳಿ ಪೊಲೀಸರ ಬಳಿ ರಿಕ್ಷಾ ಚಲಾಯಿಸಿ ದುಡಿಯುತ್ತಿರುವ ತನ್ನನ್ನು ಕಳ್ಳನನ್ನಾಗಿ ಮಾಡಿರುವುದು ಸರಿಯೇ ಎಂದು ವಿಚಾರಿಸಿದಾಗ, ಏನೂ ಟೆನ್ಶನ್ ತೆಗೆದುಕೊಳ್ಳಬೇಡಿ, ಸಣ್ಣ ಕೇಸು, ನ್ಯಾಯಾಲಯ ವಿಧಿಸುವ ಸಣ್ಣ ಮೊತ್ತದ ದಂಡ ಕಟ್ಟಿ ಎಂದು ಸಲಹೆ ನೀಡಿ ಕಳುಹಿಸಿದರು.

ನ್ಯಾಯಾಲಯದಲ್ಲಿ ತಾವು ಮಾಡದ ತಪ್ಪನ್ನು ಒಪ್ಪಿಕೊಳ್ಳಲು, ಕಳ್ಳತನ ಪಟ್ಟ ಹೊರಲು ಶೀನರ ಆತ್ಮಸಾಕ್ಷಿ ಒಪ್ಪಲಿಲ್ಲ. ಒಪ್ಪದಿದ್ದರೆ ಪ್ರಕರಣ ವರ್ಷಗಟ್ಟಲೆ ಮುಂದುವರಿದು ನ್ಯಾಯಾಲಯಕ್ಕೆ ಓಡಾಡಬೇಕಾದ ಸಾಧ್ಯತೆ ಇದೆ ಎಂದು ತಿಳಿದವರು ಹೇಳಿದಾಗ ಅವರ ಜಂಘಾಬಲವೇ ಉಡುಗಿತ್ತು. ವಿಶ್ವಾಸದಿಂದ ಪೊಲೀಸರಿಗೆ ಸಹಕರಿಸಿದ್ದು ಬಿಟ್ಟು ಬೇರಾವುದೇ ತಪ್ಪು ಮಾಡದ ಅವರಿಗೆ ಪ್ರಕರಣದಿಂದ ಹೊರಬರುವ ದಾರಿ ಕಾಣದೇ ನಿದ್ರೆಯನ್ನೇ ಕಳೆದುಕೊಂಡರು.

ಕೊನೆಗೆ ಪರಿಚಯದ ಕಾನೂನು ವಿದ್ಯಾರ್ಥಿಯೊಬ್ಬರ ಸಲಹೆಯಂತೆ ಉಡುಪಿಯ ಮಾನವ ಹಕ್ಕುಗಳ ಪ್ರತಿಷ್ಠಾನವನ್ನು ಆಶ್ರಯಿಸಿದರು. ಕೋರ್ಟಿನಿಂದ ಬಂದ ಸಮನ್ಸ್ ಪ್ರತಿಬಿಟ್ಟು ಬೇರಾವುದೇ ದಾಖಲೆ ಅವರ ಬಳಿ ಇದ್ದಿರಲಿಲ್ಲ.

ಕಾರ್ಯೋನ್ಮುಖವಾದ ಪ್ರತಿಷ್ಠಾನ: ಕೊನೆಗೆ ಎರಡು ತಿಂಗಳ ಸತತ ಪ್ರಯತ್ನದಿಂದ ಪ್ರಕರಣಕ್ಕೆ ಸಂಬಂಧಿಸಿದ ದಾಖಲೆಗಳ ಅಧಿಕೃತ ಪ್ರತಿ ಪಡೆದ ಪ್ರತಿಷ್ಠಾನ, ಅಮಾಯಕ ಶೀನಪೂಜಾರಿ ಅವರ ಆತ್ಮಸಂಮಾನದ ರಕ್ಷಣೆಗಾಗಿ ಕಾನೂನು ಹೋರಾಟಕ್ಕೆ ಮುಂದಾಯಿತು. ರಾಜ್ಯ ಹೈಕೋರ್ಟ್‌ನಲ್ಲಿ ಪ್ರತಿಷ್ಠಾನದ ವಕೀಲರಾದ ಎನ್.ವಿವೇಕಾನಂದರ ಮೂಲಕ ಕ್ರಿಮಿನಲ್ ಮೊಕದ್ದಮೆ ಹೂಡಿ, ಕುಂದಾಪುರ ನ್ಯಾಯಾಲಯದಲ್ಲಿ ನಡೆಯುತ್ತಿರುವ ದಾವೆಯಿಂದ ಶೀನ ಪೂಜಾರಿ ಅವರನ್ನು ಮುಕ್ತಗೊಳಿಸಲು ವಿನಂತಿಸಿತು.

ನ್ಯಾಯಮೂರ್ತಿ ನಾಗಪ್ರಸನ್ನರ ಪೀಠದ ಮುಂದೆ ಪ್ರಕರಣ ವಿಚಾರಣೆಗೆ ಬಂದಾಗ, ಶೀನ ಪೂಜಾರಿ ಅವರ ಮೇಲಿನ ಆರೋಪಕ್ಕೆ ಯಾವ ಆಧಾರವಿದೆ ಎಂದು ಗಂಗೊಳ್ಳಿ ಠಾಣೆಗೆ ನೋಟೀಸು ನೀಡಲು ಸೂಚಿಸಿದರು.ಗಂಗೊಳ್ಳಿ ಪೊಲೀಸರಿಗೆ ನಾಲ್ಕು ಬಾರಿ ಅವಕಾಶ ನೀಡಿದರೂ ಅವರಿಂದ ಯಾವುದೇ ಉತ್ತರ ಬರಲಿಲ್ಲ. ಕೊನೆಗೆ ಆಗಸ್ಟ್ 6ರಂದು ಅಂತಿಮ ಆದೇಶ ನೀಡಿದ ನ್ಯಾಯಾಧೀಶರು ಅಪೀಲುದಾರ ಶೀನ ಪೂಜಾರಿ ಅವರನ್ನು ಕುಂದಾಪುರ ನ್ಯಾಯಾಲಯದಲ್ಲಿ ನಡೆಯುತ್ತಿರುವ ವಿಚಾರಣೆಯಲ್ಲಿ ದೋಷಾರೋಪಣ ಪಟ್ಟಿಯಿಂದ ತೆಗೆದುಹಾಕುವಂತೆ ಸೂಚಿಸಿ, ಅವರನ್ನು ಆಪಾದನೆಯಿಂದ ದೋಷಮುಕ್ತ ಗೊಳಿಸಿದ್ದಾರೆ ಎಂದು ಡಾ.ಶ್ಯಾನುಭಾಗ್ ವಿವರಿಸಿದರು.

ಪೊಲೀಸರ ವಿರುದ್ಧ ಮಾನನಷ್ಟ ಮೊಕದ್ದಮೆಗೆ ಸಿದ್ಧ

ಅಮಾಯಕ ಶೀನ ಪೂಜಾರಿ ಅವರ ಮೇಲೆ ಮಾಡಿರುವ ಆಪಾದನೆಗಳು ಆಧಾರರಹಿತ ಎಂದು ಕರ್ನಾಟಕ ಹೈಕೋರ್ಟ್ ತೀರ್ಮಾನಿಸಿರುವುದರಿಂದ ಇದೀಗ ಶೀನ ಪೂಜಾರಿ ಅವರು ಸಮ್ಮತಿಸಿದರೆ ಗಂಗೊಳ್ಳಿ ಪೊಲೀಸರ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಲು ಪ್ರತಿಷ್ಠಾನ ಸಿದ್ಧವಿದೆ ಎಂದು ಡಾ. ರವೀಂದ್ರನಾಥ ಶ್ಯಾನುಭಾಗ್ ತಿಳಿಸಿದ್ದಾರೆ.

ಪ್ರತಿಷ್ಠಾನ ತಾನೇ ವೆಚ್ಚ ಭರಿಸಿ ಸುಳ್ಳು ಆರೋಪ ಹೊರಿಸಿದ ಪೊಲೀಸರ ಮೇಲೆ ಮಾನನಷ್ಟ ಮೊಕದ್ದಮೆಯನ್ನು ಸೂಕ್ತ ನ್ಯಾಯಾಲಯದಲ್ಲಿ ಹೂಡಲು ಸಿದ್ಧವಿದೆ. ಆದರೆ ಇದಕ್ಕೆ ಶೀನಪೂಜಾರಿ ಹಾಗೂ ಅವರ ಕುಟುಂಬ ಸಮ್ಮತಿಸಬೇಕಿದೆ ಎಂದು ಅವರು ನುಡಿದರು.


ಶೀನ ಪೂಜಾರಿ




Tags

Gangollipoliceimplicateinnocentrickshaw driverfalse caseHigh Courtprotect
share
ವಾರ್ತಾಭಾರತಿ
ವಾರ್ತಾಭಾರತಿ
Next Story
X