ಯುಎಫ್ಸಿ ಅಧ್ಯಕ್ಷರಾಗಿ ಗಿರೀಶ್ ಗುಡ್ಡೆಯಂಗಡಿ ಪುನರಾಯ್ಕೆ

ಉಡುಪಿ, ನ.10: ಉದ್ಯಾವರ ಫ್ರೆಂಡ್ಸ್ ಸರ್ಕಲ್ ಇದರ 52ನೇ ವಾರ್ಷಿಕ ಮಹಾಸಭೆ ನಿರ್ದೇಶಕ ಯು.ಪದ್ಮನಾಭ ಕಾಮತರ ಮನೆಯ ಆವರಣದಲ್ಲಿ ಅಧ್ಯಕ್ಷ ಗಿರೀಶ್ ಗುಡ್ಡೆಯಂಗಡಿ ಅಧ್ಯಕ್ಷತೆಯಲ್ಲಿ ನಡೆಯಿತು.
ಗೌರವಾಧ್ಯಕ್ಷರನ್ನಾಗಿ ಉದ್ಯಾವರ ನಾಗೇಶ್ ಕುಮಾರ್ ಮತ್ತು ಅಧ್ಯಕ್ಷರನ್ನಾಗಿ ಗಿರೀಶ್ ಗುಡ್ಡೆಯಂಗಡಿ ಅವರನ್ನು 2025-2026 ಸಾಲಿಗೆ ಪುನರಾಯ್ಕೆ ಮಾಡಲಾಯಿತು.
ಉಪಾಧ್ಯಕ್ಷರಾಗಿಶ್ರೀಧರ್ಮಾಬಿಯಾನ್ ಮತ್ತು ಹೆಲನ್ ಫೆರ್ನಾಂಡಿಸ್, ಪ್ರಧಾನ ಕಾರ್ಯದರ್ಶಿಯಾಗಿ ಸುವೇಲ್ ರಹಮತುಲ್ಲ, ಕಾರ್ಯದರ್ಶಿಗಳಾಗಿ ಆಶಾವಾಸು ಮತ್ತು ಭಾಸ್ಕರ್ ಬಂಗೇರ ಕೋಶಾಧಿಕಾರಿಯಾಗಿ ಸತೀಶ್ ಡಿ.ಸಾಲಿಯಾನ್ ಸಂಘಟನಾ ಕಾರ್ಯದರ್ಶಿಗಳಾಗಿ ಯು.ಆರ್.ಚಂದ್ರಶೇಖರ್ ಮತ್ತು ಮುಹಮ್ಮದ್ ಆಲಿ, ಸಾಂಸ್ಕೃತಿಕ ಕಾರ್ಯದರ್ಶಿಗಳಾಗಿ ಶ್ರೀಧರ್ ಗಣೇಶ್ ನಗರ, ಆಂತರಿಕ ಲೆಕ್ಕ ಪರಿಶೋಧಕರಾಗಿತಿಲಕರಾಜ್ ಸಾಲಿಯಾನ್, ನಿರ್ದೇಶಕರುಗಳಾಗಿ ಅಬ್ದುಲ್ ಜಲೀಲ್ ಸಾಹೇಬ್, ಚಂದ್ರಾವತಿ ಎಸ್.ಭಂಡಾರಿ, ರಮೇಶ್ ಕುಮಾರ್ ಉದ್ಯಾವರ್, ಶರತ್ ಕುಮಾರ್, ಯು.ಪದ್ಮನಾಭ ಕಾಮತ್ ಮಹಮದ್,ಮಹಮ್ಮದ್ ನಯಾಜ್ ಪುನರಾಯ್ಕೆಯಾದರು.
ಪ್ರಧಾನ ಕಾರ್ಯದರ್ಶಿ ಸುವೇಲ್ ರಹಮತುಲ್ಲ ವಾರ್ಷಿಕ ವರದಿಯನ್ನು ಮಂಡಿಸಿದರು. ವಾರ್ಷಿಕ ಲೆಕ್ಕಪತ್ರವನ್ನು ಕೋಶಾಧಿಕಾರಿ ಸತೀಶ್ ಡಿ.ಸಾಲಿಯಾನ್ ಪರವಾಗಿ ಅಧ್ಯಕ್ಷರು ಸಭೆಯ ಮುಂದಿಟ್ಟರು. ಮಾಜಿ ಅಧ್ಯಕ್ಷರಾದ ಅನುಪ್ ಕುಮಾರ್ ಮತ್ತು ರಿಯಾಝ್ ಪಳ್ಳಿ,ಗಿರೀಶ್ ಕುಮಾರ್, ಶೇಖರ ಕೆ.ಕೋಟಿಯಾನ್ ಸದಸ್ಯರಾದ ರೋಯ್ಸ್ ಮರ್ವಿನ್ ಫೆರ್ನಾಂಡಿಸ್ ಮಾತನಾಡಿದರು.
ಪ್ರಧಾನ ಕಾರ್ಯದರ್ಶಿ ಸುವೇಲ್ ರಹಮತ್ತುಲ್ಲ ವಂದಿಸಿದರು. ನಿರ್ದೇಶಕ ಚಂದ್ರಾವತಿ ಎಸ್.ಭಂಡಾರಿ,ಶರತ್ ಕುಮಾರ್ ಮತ್ತುಯು.ಪದ್ಮನಾಭ ಕಾಮತ್ ಉಪಸ್ಥಿತರಿದ್ದರು.







