ಕೃಷಿ ಹೊಂಡಕ್ಕೆ ಹಾರಿ ಬಾಲಕಿ ಆತ್ಮಹತ್ಯೆ

ಕೋಟ, ಜ.5: ಕ್ಷುಲ್ಲಕ ಕಾರಣಕ್ಕಾಗಿ ಬಾಲಕಿಯೊಬ್ಬಳು ಕೃಷಿ ಹೊಂಡಕ್ಕೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಜ.4ರಂದು ಮಧ್ಯಾಹ್ನ ವೇಳೆ ನಡೆದಿದೆ.
ಮೃತರನ್ನು ವಂಶಿಕ(17) ಎಂದು ಗುರುತಿಸಲಾಗಿದೆ. ಈಕೆ ಬೆಳಗ್ಗೆ ಮನೆಯಲ್ಲಿ ಯಾರಿಗೂ ಹೇಳದೇ ಸ್ಕೂಟಿಯನ್ನು ತೆಗೆದುಕೊಂಡು ಹೋಗಿದ್ದು, ಈ ವೇಳಲೆ ಸ್ಕೂಟಿ ಬಿದ್ದು ಹಾನಿಯಾಗಿತ್ತು. ವಂಶಿಕ ಸ್ಕೂಟಿಯನ್ನು ಮನೆಯಲ್ಲಿ ತಂದಿಟ್ಟು ಯಾರಿಗೂ ಹೇಳದೇ ಮನೆಯಿಂದ ಹೋದವಳು ನಾಪತ್ತೆಯಾಗಿದ್ದಳು.
ಈಕೆ ಸ್ಕೂಟಿಗೆ ಹಾನಿ ಮಾಡಿರುವುದಕ್ಕೆ ಹೆದರಿ ಮನೆಯ ಹತ್ತಿರ ಕೃಷಿ ಹೊಂಡಕ್ಕೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರು ವುದಾಗಿ ತಿಳಿದುಬಂದಿದೆ. ಈ ಬಗ್ಗೆ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story





