ಲಂಡನ್ ನ 'ದಿ ರಾಯಲ್ ಸೊಸೈಟಿ ಆಫ್ ಕೆಮಿಸ್ಟ್ರಿ ಅಸೋಸಿಯಟ್ ಸದಸ್ಯರಾಗಿ ಗ್ಲ್ಯಾನಿಶ್ ಜೂಡ್ ಮಾರ್ಟಿಸ್ ಆಯ್ಕೆ

ಉಡುಪಿ: ಮಣಿಪಾಲ್ ಇನ್ ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ರಸಾಯನಶಾಸ್ತ್ರ ಸಂಶೋಧನ ವಿದ್ಯಾರ್ಥಿ ಗ್ಲ್ಯಾನಿಶ್ ಜೂಡ್ ಮಾರ್ಟಿಸ್ ಪ್ರತಿಷ್ಠಿತ 'ದಿ ರಾಯಲ್ ಸೊಸೈಟಿ ಆಫ್ ಕೆಮಿಸ್ಟ್ರಿ, ಲಂಡನ್' ಸಂಸ್ಥೆಯ ಅಸೋಸಿಯಟ್ ಸದಸ್ಯರಾಗಿ ಆಯ್ಕೆಯಾಗಿದ್ದಾರೆ.
ರಸಾಯನಶಾಸ್ತ್ರ ಸಂಶೋಧನ ಕ್ಷೇತ್ರದಲ್ಲಿ ನೀಡಿರುವ ಕೊಡುಗೆಗಳಿಗಾಗಿ ಅವರಿಗೆ ಈ ಮನ್ನಣೆ ಲಭಿಸಿದೆ. ಇವರು ಎಂ.ಐ.ಟಿ ಮಣಿಪಾಲ್ ಕ್ಯಾಂಪಸ್ ನಲ್ಲಿ ಪ್ರೊ.ಸಂತೋಷ್ ಗಾಂವ್ಕರ್ ಅವರ ಮಾರ್ಗದರ್ಶನದಲ್ಲಿ ಪಿ.ಎಚ್.ಡಿ ಸಂಶೋಧನೆ ನಡೆಸುತ್ತಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.
Next Story




