ಮನೆಯಲ್ಲಿದ್ದ ಚಿನ್ನಾಭರಣ ಕಳವು: ಪ್ರಕರಣ ದಾಖಲು

ಸಾಂದರ್ಭಿಕ ಚಿತ್ರ
ಹಿರಿಯಡ್ಕ, ಆ.26: ಮನೆಯ ಕಾಪಾಟಿನಲ್ಲಿಟ್ಟಿದ್ದ ಚಿನ್ನಾಭರಣಗಳನ್ನು ಕಳ್ಳರು ಕಳವು ಮಾಡಿರುವ ಘಟನೆ ಬೊಮ್ಮರಬೆಟ್ಟು ಗ್ರಾಮದಲ್ಲಿ ನಡೆದಿದೆ.
ಆ.23ರಂದು ಪದ್ಮಾವತಿ ಎಂಬವರು ಮನೆಯ ಕಾಪಾಟಿನಲ್ಲಿಟ್ಟಿದ್ದ ಚಿನ್ನಾಭರಣಗಳನ್ನು ಪರಿಶೀಲಿಸಿದಾಗ ಅದರಲ್ಲಿದ್ದ 1,20,000ರೂ. ಮೌಲ್ಯದ ಚಿನ್ನದ ಸರ ಹಾಗೂ 24000ರೂ. ಮೌಲ್ಯದ 2 ಉಂಗುರಗಳು ಕಳವು ಆಗಿರುವುದು ಕಂಡುಬಂದಿದೆ.
ಒಂದು ವಾರದ ಹಿಂದೆ ಆಕಾಶ್ ಎಂಬಾತ ಅಶ್ವಥ್ ಎಂಬವರೊಂದಿಗೆ ಮನೆಯ ಬಳಿ ಬಂದು ಹೋಗಿದ್ದು, ಇವರು ಆ.17ರ ರಾತ್ರಿಯಿಂದ ಆ.23ರ ಸಂಜೆಯ ಮಧ್ಯಾವಧಿಯಲ್ಲಿ ಮನೆಯಲ್ಲಿ ಇಲ್ಲದ ಸಮಯ ಚಿನ್ನಾಭರಣ ಕಳವು ಮಾಡಿಕೊಂಡು ಹೋಗಿರುವ ಬಗ್ಗೆ ಪದ್ಮಾವತಿ ಸಂಶಯ ವ್ಯಕ್ತಪಡಿಸಿ ದ್ದಾರೆ. ಈ ಬಗ್ಗೆ ಹಿರಿಯಡ್ಕ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story





