Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
    • ಕ್ರೈಂ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 23ನೇ ವಾರ್ಷಿಕ ವಿಶೇಷಾಂಕ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಜಿಲ್ಲೆಗಳು
  3. ಉಡುಪಿ
  4. ಗ್ಯಾರಂಟಿ ಯೋಜನೆ| ತಿಂಗಳಲ್ಲಿ ಕುಂದಾಪುರ...

ಗ್ಯಾರಂಟಿ ಯೋಜನೆ| ತಿಂಗಳಲ್ಲಿ ಕುಂದಾಪುರ ತಾಲೂಕಿಗೆ 20.25 ಕೋಟಿ ರೂ. ಅನುದಾನ: ಕಾನ್ಮಕ್ಕಿ

ವಾರ್ತಾಭಾರತಿವಾರ್ತಾಭಾರತಿ28 Jan 2026 8:24 PM IST
share
ಗ್ಯಾರಂಟಿ ಯೋಜನೆ| ತಿಂಗಳಲ್ಲಿ ಕುಂದಾಪುರ ತಾಲೂಕಿಗೆ 20.25 ಕೋಟಿ ರೂ. ಅನುದಾನ: ಕಾನ್ಮಕ್ಕಿ

ಕುಂದಾಪುರ, ಜ.28: ರಾಜ್ಯ ಸರಕಾರದ ನಾಲ್ಕು ಗ್ಯಾರಂಟಿ ಯೋಜನೆಗಳ ಮೂಲಕ ಕಳೆದ ಒಂದು ತಿಂಗಳಲ್ಲಿ ಕುಂದಾಪುರ ತಾಲೂಕಿನ ಜನತೆಗೆ 20,25,69,896 ರೂ. ಅನುದಾನ ದೊರೆತಿದೆ ಎಂದು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಹರಿಪ್ರಸಾದ್ ಶೆಟ್ಟಿ ಕಾನ್ಮಕ್ಕಿ ತಿಳಿಸಿದ್ದಾರೆ.

ಕುಂದಾಪುರ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ಬುಧವಾರ ನಡೆದ ಗ್ಯಾರಂಟಿ ಅನುಷ್ಠಾನ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತಿದ್ದರು.

ಡಿಸೆಂಬರ್ ತಿಂಗಳಿನಲ್ಲಿ ಗೃಹಲಕ್ಷ್ಮಿ ಯೋಜನೆಯಲ್ಲಿ 10,06,98,000ರೂ., ಗೃಹಜ್ಯೋತಿ ಯೋಜನೆಯಲ್ಲಿ 4,54,14,271ರೂ., ಅನ್ನಭಾಗ್ಯ ಯೋಜನೆ ಯಲ್ಲಿ 2,57,85,945ರೂ., ಶಕ್ತಿ ಯೋಜನೆಯಲ್ಲಿ 3,06,71,680 ರೂ. ಅನುದಾನ ಕುಂದಾಪುರ ತಾಲೂಕಿಗೆ ಬಂದಿದೆ. ಯುವನಿಧಿ ಅನುದಾನ ಬಂದಿಲ್ಲ ಎಂದರು.

ಎಸೆಸೆಲ್ಸಿ ಪರೀಕ್ಷೆ ಸಂದರ್ಭ ವಿದ್ಯುತ್ ಕಡಿತ ಮಾಡದಂತೆ ಕೋಣಿ ನಾರಾಯಣ ಆಚಾರ್ಯ ಮೆಸ್ಕಾಂಗೆ ಮನವಿ ಮಾಡಿದರು. ಶಂಕರನಾರಾ ಯಣ ವಿಭಾಗದಲ್ಲಿ ಏಳು ಹೊಸ ಟ್ರಾನ್ಸ್‌ಫಾರ್ಮರ್ ಅಳವಡಿಕೆಗೆ ಮಂಜೂರಾತಿ ಯಾಗಿದೆ ಎಂದು ಮೆಸ್ಕಾಂ ಎಇ ಗುರುಪ್ರಸಾದ್ ಮಾಹಿತಿ ನೀಡಿದರು.

ಹಂಗಳೂರು ಕೋಡಿ ಭಾಗಕ್ಕೆ ಹೆಚ್ಚುವರಿ ಬಸ್ ಬೇಕು, ಬೆಂಗಳೂರಿನಲ್ಲಿ ಉಪಯೋಗಿಸಿ ಬಿಟ್ಟ ಹಳೆ ಬಸ್‌ಗಳನ್ನು ಇಲ್ಲಿಗೆ ನೀಡಲಾಗುತ್ತಿದೆ, ಸಚಿವರು ಒಂದು ಬಾರಿಯೂ ಗ್ಯಾರಂಟಿ ಸಮಿತಿಯವರ ಜೊತೆ ಸಭೆ ನಡೆಸಿಲ್ಲ, ಕೋಟ ಹೈಸ್ಕೂಲ್ ಬಳಿ ಬಸ್ ನಿಲುಗಡೆ ಬೇಕು ಎಂಬ ಬೇಡಿಕೆ, ದೂರುಗಳು ಸಭೆ ಯಲ್ಲಿ ಕೇಳಿಬಂದವು.

ಮೊದಲು 9 ಲಕ್ಷ ಕಿ.ಮೀ. ಓಡಿದ ಬಸ್‌ಗಳನ್ನು ಗುಜರಿಗೆ ಹಾಕ ಲಾಗುತ್ತಿತ್ತು. ಈಗ 14 ಲಕ್ಷ ಕಿ.ಮೀ. ಆದರೂ ಓಡಿಸಲಾಗುತ್ತಿದೆ. ಹಾಗಿದ್ದರೂ ಯಾವುದೇ ಬಸ್‌ನ್ನು ನಿರ್ವಹಣೆ ಮಾಡದೇ, ಓಡಾಟಕ್ಕೆ ಸೂಕ್ತ ಎಂದೆನಿಸದೇ ಕಳುಹಿಸುವುದಿಲ್ಲ. ಯಾವುದೇ ಬಸ್ ಅರ್ಧದಲ್ಲಿ ನಿಂತಿಲ್ಲ. ಹೊಸ ಬಸ್ ಗಳು ಸದ್ಯ ಬಂದಿಲ್ಲ, ಹೊಸ ಮಾರ್ಗಗಳಿಗೆ ಬಸ್ ಓಡಿಸಲು ಇನ್ನೂ ಯಾವುದೇ ಅನುಮತಿ ಸಿಕ್ಕಿಲ್ಲ ಎಂದು ಡಿಪೊ ಮೆನೆಜರ್ ಉದಯ ಕುಮಾರ್ ಶೆಟ್ಟಿ ಸಭೆಗೆ ತಿಳಿಸಿದರು.

ಅಮಾಸೆಬೈಲು ಕೆಳಸುಂಕ ಬಸ್ ಓಡಾಟ 15 ದಿನಗಳಿಂದ ನಡೆಸುತ್ತಿದೆ. ಮರವಂತೆ ಬಡಾಕೆರೆ ಬಸ್ ಓಡಾಟಕ್ಕೆ ಇದ್ದ ತಡೆ ತೆರವಾಗಿ ಬಸ್ ಹೋಗುತ್ತಿದೆ. ಹೊಸ ಬಸ್ ಮಾರ್ಗಗಳ ಸರ್ವೆಗೆ ಬಂದ ಸೂಚನೆಯಂತೆ ಸರ್ವೆ ಕಾರ್ಯ ನಡೆದಿದೆ ಎಂದ ಅಧ್ಯಕ್ಷರು ಹೇಳಿದರು.

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಉಮೇಶ್ ಕೋಟ್ಯಾನ್, ಅಕ್ಟೋಬರ್ ವರೆಗಿನ ಗೃಹಲಕ್ಷ್ಮಿ ಅನುದಾನ ಬಂದಿದೆ. ಫಲಾನುಭವಿ ಮೃತಪಟ್ಟರೆ ಮರಣ ಪ್ರಮಾಣಪತ್ರ ನೀಡಿ ಆ ಮನೆಯ ಬೇರೆ ಸದಸ್ಯರು ಫಲಾನುಭವಿ ಆಗಬಹುದು. ಮರಣ ಹೊಂದಿದ ಫಲಾನುಭವಿಯ ಖಾತೆಗೆ ಮರಣ ಹೊಂದಿದ ನಂತರದ ತಿಂಗಳುಗಳ ಹಣ ಜಮೆಯಾಗಿದ್ದರೆ ಬ್ಯಾಂಕಿನಿಂದ ನೇರ ಸರಕಾರಕ್ಕೆ ಮರುಪಾವತಿ ಆಗುತ್ತದೆ ಎಂದರು.

ಬೆಳ್ತಿಗೆ ಅಕ್ಕಿ ಬದಲು ಕುಚ್ಚುಲಕ್ಕಿ ನೀಡುತ್ತಿದ್ದು ಈ ಕುಚ್ಚುಲಕ್ಕಿ ಕರಾವಳಿ ಜನ ಸೇವಿಸುವಂತಿಲ್ಲ. ಬೆಳ್ತಿಗೆ ಪ್ರಮಾಣ ಹೆಚ್ಚಿಸಿ ಎಂದು ಅಭಿಜಿತ್ ಪೂಜಾರಿ ಆಗ್ರಹಿಸಿದರು. ಬಿಪಿಎಲ್ ಪಡಿತರ ಅಕ್ರಮ ಮಾರಾಟ ತಡೆಯಬೇಕು ಎಂದು ಝಹೀರ್ ಒತ್ತಾಯಿಸಿದರು. ಬೆಳ್ತಿಗೆ ಬರುವ ಪ್ರಮಾಣವೇ ಕಡಿಮೆಯಾಗಿದೆ ಎಂದು ಆಹಾರ ನಿರೀಕ್ಷಕ ಸುರೇಶ್ ತಿಳಿಸಿದರು.

ತಾ.ಪಂ. ಕಾರ್ಯನಿರ್ವಹಣಾಧಿಕಾರಿ ಮಹೇಶ್ ಕೆ.ಜಿ. ಸ್ವಾಗತಿಸಿದರು. ಸದಸ್ಯರಾದ ಆಶಾ ಕರ್ವಾಲೊ, ಗಣೇಶ್, ಚಂದ್ರ ಕಾಂಚನ್, ಸವಿತಾ ಪೂಜಾರಿ, ಅರುಣ್ ಉಪಸ್ಥಿತರಿದ್ದರು.

Tags

GuaranteeSchemeKundapurKanmakki
share
ವಾರ್ತಾಭಾರತಿ
ವಾರ್ತಾಭಾರತಿ
Next Story
X