ಹಾರಾಡಿ ಉಪಚುನಾವಣೆ: ಬಿಜೆಪಿ ಬೆಂಬಲಿತ ಅಭ್ಯರ್ಥಿಗೆ ಗೆಲವು

ಉಡುಪಿ, ಜು.26: ಹಾರಾಡಿ ಗ್ರಾಮ ಪಂಚಾಯತ್ ಉಪಚುನಾವಣೆಯಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿ ಸಚಿನ್ ಕುಮಾರ್ ಜಯ ಗಳಿಸಿದ್ದು, ಉಡುಪಿ ಶಾಸಕ ಯಶ್‌ಪಾಲ್ ಸುವರ್ಣ ಅಭಿನಂದನೆ ಸಲ್ಲಿಸಿದ್ದಾರೆ.
ಈ ಸಂದರ್ಭದಲ್ಲಿ ಬಿಜೆಪಿ ಮಂಡಲ ಅಧ್ಯಕ್ಷೆ ವೀಣಾ ವಿ.ನಾಯ್ಕ್, ಪ್ರಧಾನ ಕಾರ್ಯದರ್ಶಿ ಸಚಿನ್ ಪೂಜಾರಿ, ಹಾರಾಡಿ ಶಕ್ತಿ ಕೇಂದ್ರ ಸಂಚಾಲಕ ಗಣೇಶ್ ಶೆಟ್ಟಿ, ಬೈಕಾಡಿ ಶಕ್ತಿ ಕೇಂದ್ರ ಸಂಚಾಲಕ ಚಂದ್ರಶೇಕರ್ ಬೈಕಾಡಿ, ಮಹಿಳಾ ಮೋರ್ಚ ಅಧ್ಯಕ್ಷೆ ವಸಂತಿ ಸತೀಶ್ ಪೂಜಾರಿ, ಪಂಚಾಯತ್ ಸದಸ್ಯರಾದ ಸುಜಾತ ಪೂಜಾರಿ, ಉಷಾ, ಲಕ್ಷ್ಮಿ, ಮೀರಾ ಸದಾನಂದ ಪೂಜಾರಿ, ಪ್ರಮುಖ ರಾದ ಭಾಸ್ಕರ್ ಪೂಜಾರಿ, ಪ್ರದೀಪ್ ಕುಂದರ್, ಸುಶಾಂತ್, ಕಿಶೋರ್, ಉಪಸ್ಥಿತರಿದ್ದರು.
Next Story