ಹಾರಾಡಿ: ರಾತ್ರಿ ಗದ್ದೆ ನೀರಿನಲ್ಲಿ ಬಿದ್ದಿದ್ದ ಮಹಿಳೆಯ ರಕ್ಷಣೆ

ಬ್ರಹ್ಮಾವರ, ಸೆ.24: ಬ್ರಹ್ಮಾವರ ಠಾಣಾ ವ್ಯಾಪ್ತಿಯ ಹಾರಾಡಿಯಲ್ಲಿ ರಾತ್ರಿ ಗದ್ದೆಯ ನೀರಿನಲ್ಲಿ ಬಿದ್ದ ಮಾನಸಿಕವಾಗಿ ನೊಂದ ಮಹಿಳೆಯನ್ನು ಸಾಮಾಜಿಕ ಕಾರ್ಯಕರ್ತ ವಿಶು ಶೆಟ್ಟಿ ಅಂಬಲಪಾಡಿ ರಕ್ಷಣೆ ಮಾಡಿದ್ದಾರೆ.
ಸುಮಾರು 35 -40 ವರ್ಷ ಪ್ರಾಯದ ಈ ಮಹಿಳೆಯ ಬಗ್ಗೆ ಯಾವುದೇ ಮಾಹಿತಿ ದೊರೆತ್ತಿಲ್ಲ. ಕೈಯಲ್ಲಿ ಹಚ್ಚೆ ಇದ್ದು ಸೀತಾ ಎಂದು ಹಿಂದಿಯಲ್ಲಿ ಬರೆಯಲಾಗಿದೆ. ರಾತ್ರಿ ಸಮಯ ಮಹಿಳೆಗೆ ದುಷ್ಕರ್ಮಿಗಳಿಂದ ತೊಂದರೆಯಾಗಿ ರುವ ಬಗ್ಗೆ ಶಂಕೆ ವ್ಯಕ್ತವಾಗುತ್ತದೆ.
ಬೆಳಗಿನ ಜಾವ ಗದ್ದೆಯಲ್ಲಿ ಬಿದ್ದಿರುವ ಮಹಿಳೆಯನ್ನು, ರಾಘವ ಶೆಟ್ಟಿ ಹಾರಾಡಿ ಮನೆಯಲ್ಲಿ ಆರೈಕೆ ಮಾಡಿ ಸ್ನಾನ ಮಾಡಿಸಿ ಆಹಾರ ನೀಡಿ ಮಾನವೀಯತೆ ಮೆರೆದರು. ಬಳಿಕ ವಿಶು ಶೆಟ್ಟಿ ಮಾಹಿತಿ ನೀಡಿದ್ದು, ಅದರಂತೆ ಸ್ಥಳಕ್ಕೆ ಆಗಮಿಸಿದ ಅವರು, ಮಹಿಳೆಯನ್ನು ರಕ್ಷಿಸಿ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ ಸಖಿ ಸೆಂಟರ್ ಗೆ ದಾಖಲಿಸಿದರು.
ತದ ನಂತರ ಮಹಿಳೆಯನ್ನು ಹೆಚ್ಚಿನ ಚಿಕೆತ್ಸೆಗೆ ಬಾಳಿಗ ಆಸ್ಪತ್ರೆಗೆ ದಾಖಲಿಸ ಲಾಯಿತು. ಮಹಿಳೆಯ ಬಗ್ಗೆ ಮಾಹಿತಿ ಇರುವವರು ಬ್ರಹ್ಮಾವರ ಠಾಣೆ ಅಥವಾ ಬಾಳಿಗ ಆಸ್ಪತ್ರೆಯನ್ನು ಸಂಪರ್ಕಿಸಲು ವಿಶು ಶೆಟ್ಟಿ ಕೋರಿದ್ದಾರೆ. ರಕ್ಷಣಾ ಕಾರ್ಯ ದಲ್ಲಿ ಬ್ರಹ್ಮಾವರ ಠಾಣಾ ಸಿಬಂದಿ ಶಾಂಭವಿ ಹಾಗೂ ರಾಜೇಶ್ ಹೇರೂರು ಸಹಕರಿಸಿದ್ದಾರೆ.





