ಉಡುಪಿ ಜಿಲ್ಲೆಯಾದ್ಯಂತ ಭಾರೀ ಗಾಳಿಮಳೆ: ಮನೆಗಳಿಗೆ ಹಾನಿ

ಉಡುಪಿ: ರೆಡ್ ಅಲರ್ಟ್ ಘೋಷಣೆಯಾಗಿರುವಂತೆ ಉಡುಪಿ ಜಿಲ್ಲೆಯಾದ್ಯಂತ ಇಂದು ಭಾರೀ ಗಾಳಿಮಳೆಯಾಗಿರುವ ಬಗ್ಗೆ ವರದಿಯಾಗಿದೆ. ಇದರಿಂದ ಹಲವು ಕಡೆ ಮನೆಗಳ ಮೇಲೆ ಮರ ಬಿದ್ದು ಅಪಾರ ಹಾನಿ ಉಂಟಾಗಿದೆ ಎಂದು ತಿಳಿದುಬಂದಿದೆ.
ಕಳೆದ 24 ಗಂಟೆ ಅವಧಿಯಲ್ಲಿ ಕಾರ್ಕಳ- 67.1ಮಿ.ಮೀ., ಕುಂದಾಪುರ- 35.9ಮಿ.ಮೀ., ಉಡುಪಿ- 47.1ಮಿ.ಮೀ., ಬೈಂದೂರು- 52.0ಮಿ.ಮೀ., ಬ್ರಹ್ಮಾವರ- 68.6ಮಿ.ಮೀ., ಕಾಪು-35.3ಮಿ.ಮೀ., ಹೆಬ್ರಿ- 54.5ಮಿ.ಮೀ. ಮಳೆಯಾಗಿದ್ದು, ಜಿಲ್ಲೆಯಲ್ಲಿ ಸರಾಸರಿ 51.9ಮಿ.ಮೀ. ಮಳೆಯಾಗಿರುವ ಬಗ್ಗೆ ವರದಿಯಾಗಿದೆ.
ಕುಂದಾಪುರ ತಾಲೂಕಿನ ಗುಜ್ಜಾಡಿ ರತ್ನಾಕರ ಆಚಾರ್ಯ, ಬಸ್ರೂರು ಸೀತಾ ಮೊಗರ್ತಿ, ಕಂದಾವರ ಲಕ್ಷ್ಮೀ, ವಕ್ವಾಡಿ ಶ್ಯಾಮಲ, ಗುಲ್ಲಾಡಿ ಜಯಂತಿ ಶೆಡ್ತಿ, ಕೊರ್ಗಿ ಆರತಿ ಎಸ್.ಹೆಗ್ಡೆ, ಕಾಪು ತಾಲೂಕಿನ ಕುತ್ತಾರು ಜಯಂತ ದೇವಾಡಿಗ ಹಾಗೂ ಉಡುಪಿ ತಾಲೂಕಿನ ಮರ್ಣೆ ರಮೇಶ್ ಅವರ ಮನೆಗಳು ಹಾನಿಯಾಗಿ ಒಟ್ಟು 2.15ಲಕ್ಷ ರೂ. ನಷ್ಟ ಉಂಟಾಗಿದೆ ಎಂದು ಮೂಲಗಳು ತಿಳಿಸಿವೆ.
Next Story





