ಹಿರಿಯಡ್ಕ: ಬೈಕ್ ಸುಲಿಗೆ ಪ್ರಕರಣ; ಆರೋಪಿ ಬಂಧನ

ಹಿರಿಯಡ್ಕ, ಅ.19: ಅಂಜಾರು ಗ್ರಾಮದ ಕಾಜರಗುತ್ತು ರಸ್ತೆಯ ಕಲ್ಲಂಬೆಟ್ಟು ಎಂಬಲ್ಲಿ ನಡೆದ ಬೈಕ್ ಸುಲಿಗೆ ಪ್ರಕರಣಕ್ಕೆ ಸಂಬಂಧಿಸಿ ಕ್ಷಿಪ್ರ ಕಾರ್ಯಾಚರಣೆ ನಡೆಸಿದ ಪೊಲೀಸರು ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಕಾಪು ಮಲ್ಲಾರು ಗ್ರಾಮದ ಸೂರಜ್ ಕೋಟ್ಯಾನ್(31) ಬಂಧಿತ ಆರೋಪಿ.
ಅ.17ರಂದು ಬಡಬೆಟ್ಟು ಗ್ರಾಮದ ಸಂದೀಪ್ ನಾಯ್ಕ್ ಎಂಬವರು ತನ್ನ ಬೈಕ್ ನಿಲ್ಲಿಸಿ ರಸ್ತೆ ಬದಿ ಫೋನ್ ಮಾತನಾಡು ತ್ತಿದ್ದು, ಈ ವೇಳೆ ಬಂದ ಇಬ್ಬರು ಅಪರಿಚಿತರು, ಸಂದೀಪ್ ನಾಯ್ಕ್‌ರನ್ನು ದೂಡಿ ಅವರ ಬೈಕ್‌ನ್ನು ಸುಲಿಗೆ ಮಾಡಿ ಕೊಂಡು ಪರಾರಿಯಾದರು. ಈ ಬಗ್ಗೆ ಹಿರಿಯಡ್ಕ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಪ್ರಕರಣ ತನಿಖಾಧಿಕಾರಿ ಬ್ರಹ್ಮಾವರ ವೃತ್ತ ನಿರೀಕ್ಷಕ ದಿವಾಕರ್ ಪಿ.ಎಂ. ತನಿಖೆ ನಡೆಸಿ, ಆರೋಪಿಯನ್ನು ಅ.18ರಂದು ಬಂಧಿಸಿ ಬೈಕ್‌ನ್ನು ವಶಪಡಿಸಿಕೊಂಡಿದೆ. ಪ್ರಕರಣ ದಾಖಲಾದ ಒಂದೇ ದಿನದಲ್ಲಿ ಪ್ರಕರಣ ಬೇಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
Next Story





