ಹಿರಿಯಡ್ಕ | ಅಪಘಾತದ ಗಾಯಾಳು ವಿದ್ಯಾರ್ಥಿ ಮೃತ್ಯು

ಸಾಂದರ್ಭಿಕ ಚಿತ್ರ
ಹಿರಿಯಡ್ಕ, ಡಿ.10: ನಾಲ್ಕು ತಿಂಗಳ ಹಿಂದೆ ಅಂಜಾರು ಗ್ರಾಮದ ಅರಂತಬೆಟ್ಟು ಕ್ರಾಸ್ ಬಳಿ ನಡೆದ ಅಪಘಾತದಲ್ಲಿ ಗಾಯಗೊಂಡಿದ್ದ ವಿದ್ಯಾರ್ಥಿಯೊಬ್ಬ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟ ಬಗ್ಗೆ ವರದಿಯಾಗಿದೆ.
ಮೃತರನ್ನು ಬೊಮ್ಮರಬೆಟ್ಟು ಗ್ರಾಮದ ಪಡ್ಡಾಂ ನಿವಾಸಿ ದಯಾನಂದ ನಾಯ್ಕ್ ಎಂಬವರ ಮಗ ಸಂದೇಶ(18) ಎಂದು ಗುರುತಿಸಲಾಗಿದೆ. ಹಿರಿಯಡ್ಕ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಬಿಸಿಎ ವ್ಯಾಸಂಗ ಮಾಡುತ್ತಿದ್ದ ಇವರು, ಆ.7ರಂದು ಅರಂತಬೆಟ್ಟು ಕ್ರಾಸ್ ಬಳಿ ಬೈಕ್ ಅಪಗಾತದಲ್ಲಿ ಗಾಯಗೊಂಡಿದ್ದರು.
ಬಳಿಕ ಮಣಿಪಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಬಿಡುಗಡೆಗೊಂಡಿದ್ದ ಸಂದೇಶ್ ನಾಯ್ಕ್ ಗೆ ಡಿ.8ರಂದು ಉಸಿರಾಟದ ತೊಂದರೆ ಉಂಟಾಗಿತ್ತು. ಕೂಡಲೇ ಇವರನ್ನು ಮಣಿಪಾಲ ಆಸ್ಪತ್ರೆಗೆ ದಾಖಲಿಸಿದ್ದು, ಡಿ.9ರಂದು ರಾತ್ರಿ ಚಿಕಿತ್ಸೆ ಫಲಕಾರಿಯಾಗದೆ ಸಂದೇಶ್ ಮೃತಪಟ್ಟರೆಂದು ತಿಳಿದುಬಂದಿದೆ.
ಈ ಬಗ್ಗೆ ಹಿರಿಯಡ್ಕ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story





