ಹಿರಿಯಡ್ಕ | ಯಕ್ಷಗಾನ ಕಲಾವಿದರ ರಾಜ್ಯೋತ್ಸವ ಪ್ರಶಸ್ತಿ ಕಳವು; ಪ್ರಕರಣ ದಾಖಲು

ಸಾಂದರ್ಭಿಕ ಚಿತ್ರ
ಹಿರಿಯಡ್ಕ, ನ.13: ಯಕ್ಷಗಾನ ಕಲಾವಿದ ಸಿ.ಮಂಜುನಾಥ ಪ್ರಭು (77), ಎಂಬವರ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಫಲಕ ಕಳವಾಗಿರುವ ಬಗ್ಗೆ ಹಿರಿಯಡ್ಕ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬ್ರಹ್ಮಾವರ ತಾಲೂಕಿನ ಬೆನಗಲ್ ನಿವಾಸಿಯಾದ ಮಂಜುನಾಥ್ ಪ್ರಭು ಅವರಿಗೆ ಕರ್ನಾಟಕ ಸರ್ಕಾರವು 2024ರ ನ.1ರಂದು ಸುವರ್ಣ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಯನ್ನು ಫಲಕದೊಂದಿಗೆ ನೀಡಿ ಗೌರವಿಸಿತ್ತು. ಕುಕ್ಕೆಹಳ್ಳಿ ಗ್ರಾಮದ ಬಾಡಿಗೆ ಮನೆಯಲ್ಲಿ ವಾಸವಾಗಿದ್ದ ಇವರು, ಆ ಪ್ರಶಸ್ತಿ ಫಲಕವನ್ನು ಕೈ ಚೀಲದಲ್ಲಿ ಹಾಕಿ ಮಲಗುತ್ತಿದ್ದರು.
ಅ.15ರಂದು ಬೆಳಿಗ್ಗೆ ಅವರು ಯಕ್ಷಗಾನದ ಸಾಮಾಗ್ರಿ ಹಾಗೂ ಬಟ್ಟೆಗಳನ್ನು ಸರಿಪಡಿಸಲು ಹೋದಾಗ ಪ್ರಶಸ್ತಿ ಫಲಕ ನಾಪತ್ತೆಯಾಗಿರುವುದು ಕಂಡು ಬಂದಿದೆ. ಪ್ರಶಸ್ತಿ ಫಲಕದಲ್ಲಿ ಬಂಗಾರದ ಲೇಪನದ ಪ್ಲೇಟ್ ಇದ್ದು ಅದರ ಅಂದಾಜು ಮೌಲ್ಯ 25000 ರೂ. ಆಗಿದೆ. ಯಾರೋ ಕಳ್ಳರು ಅದನ್ನು ಕಳವು ಮಾಡಿಕೊಂಡು ಹೋಗಿರಬಹುದು ಎಂದು ದೂರಲಾಗಿದೆ.
Next Story




