ಹೂಡೆ | ಅಂಗನವಾಡಿ ಕೇಂದ್ರದಲ್ಲಿ ಮಕ್ಕಳ ದಿನಾಚರಣೆ

ಉಡುಪಿ, ನ.16: ವಿಮೆನ್ ಇಂಡಿಯಾ ಮೂವ್ಮೆಂಟ್ ಹೂಡೆ ಶಾಖೆಯ ವತಿಯಿಂದ ಹೂಡೆ ಗುಡ್ಡೇರಿಕಂಬಳ ಅಂಗನವಾಡಿ ಕೇಂದ್ರದಲ್ಲಿ ಮಕ್ಕಳ ದಿನಾಚರಣೆಯನ್ನು ಹಮ್ಮಿಕೊಳ್ಳಲಾಗಿತ್ತು.
ಮಹಿಳೆಯರು ಹಾಗೂ ಹಳೆ ವಿದ್ಯಾರ್ಥಿ ಮಕ್ಕಳಿಗೆ ವಿವಿಧ ಆಟೋಟ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು. ಈ ಸಂದರ್ಭದಲ್ಲಿ ಕೆಮ್ಮಣ್ಣು ಗ್ರಾಮ ಪಂಚಾಯತ್ ಸದಸ್ಯ ಉಸ್ತಾದ್ ಹೈದರ್ ಅಲಿ ಸ್ಪರ್ಧೆಯ ವಿಜೇತ ಮಕ್ಕಳಿಗೆ ಬಹುಮಾನ ವಿತರಣೆ ಮಾಡಿದರು.
ಅತಿಥಿಗಳಾಗಿ ವಿಮೆನ್ ಇಂಡಿಯಾ ಮೂಮೆಂಟ್ ಉಡುಪಿ ಜಿಲ್ಲಾಧ್ಯಕ್ಷೆ ನಾಝಿಯ ನಸ್ರುಲ್ಲಾ, ಉಡುಪಿ ಜಿಲ್ಲಾ ಕಾರ್ಯದರ್ಶಿ ರಹಮ್ತುನ್ನಿಸಾ, ಜಿಲ್ಲಾ ಸಮಿತಿ ಸದಸ್ಯ ನಸೀಮ್ ಫಾತಿಮಾ, ಉಡುಪಿ ಕ್ಷೇತ್ರ ಸಮಿತಿಯ ಕಾರ್ಯದರ್ಶಿ ನಾದಿಯ ಅನ್ಸಾರ್, ಅಂಗನವಾಡಿ ಬಾಲವಿಕಾಸ ಅಧ್ಯಕ್ಷೆ ಫೌಝಿಯಾ ನಯಾಜ್, ಕೆಮ್ಮಣ್ಣು ಗ್ರಾಪಂ ಸದಸ್ಯೆ ಫೌಝಿಯಾ ಸಾದಿಕ್, ಅಂಗನವಾಡಿ ಶಿಕ್ಷಕಿ ಅರ್ಚನಾ, ನಿವೃತ್ತ ಶಿಕ್ಷಕಿ ಶಕುಂತಲಾ ಕುಂದರ್, ಆಶಾ ಕಾರ್ಯಕರ್ತೆಯರು ಉಪಸ್ಥಿತರಿದ್ದರು.
Next Story





