Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
    • ಕ್ರೈಂ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 23ನೇ ವಾರ್ಷಿಕ ವಿಶೇಷಾಂಕ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ಪುಸ್ತಕ ಸಾಂಗತ್ಯ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಜಿಲ್ಲೆಗಳು
  3. ಉಡುಪಿ
  4. ರಾಹುಲ್ ಗಾಂಧಿಗಿರಿಯ ಧ್ವನಿಯಾದರೆ,...

ರಾಹುಲ್ ಗಾಂಧಿಗಿರಿಯ ಧ್ವನಿಯಾದರೆ, ಯಶ್‌ಪಾಲ್ ಗೂಂಡಾಗಿರಿಯ ಧ್ವನಿ: ನಿಕೇತ್‌ರಾಜ್ ಮೌರ್ಯ

ವಾರ್ತಾಭಾರತಿವಾರ್ತಾಭಾರತಿ31 July 2026 7:34 PM IST
share
ರಾಹುಲ್ ಗಾಂಧಿಗಿರಿಯ ಧ್ವನಿಯಾದರೆ, ಯಶ್‌ಪಾಲ್ ಗೂಂಡಾಗಿರಿಯ ಧ್ವನಿ: ನಿಕೇತ್‌ರಾಜ್ ಮೌರ್ಯ
ಶಾಸಕ ಯಶ್‌ಪಾಲ್ ದ್ವೇಷ ಭಾಷಣ ಖಂಡಿಸಿ ಕಾಂಗ್ರೆಸ್ ಪ್ರತಿಭಟನೆ

ಉಡುಪಿ: ರಾಹುಲ್ ಗಾಂಧಿ ಕುಟುಂಬವನ್ನು ಧ್ವಂಸ ಮಾಡಲು ಸಾಧ್ಯವೇ ಇಲ್ಲ. ಯಾಕೆಂದರೆ ರಾಹುಲ್ ಗಾಂಧಿ ಭಾರತದ ಭಯರಹಿತ ಧ್ವನಿಯಾಗಿದ್ದಾರೆ. ಅದೇ ರೀತಿ ಅವರು ಪ್ರಜಾಪ್ರಭುತ್ವ, ಸತ್ಯ, ನ್ಯಾಯ, ಭಾರತ ಜೋಡೊ, ದೇಶಪ್ರೇಮ, ಪ್ರೀತಿಯ ಧ್ವನಿಯಾಗಿದ್ದಾರೆ. ರಾಹುಲ್ ಗಾಂಧಿಯು ಗಾಂಧಿಗಿರಿಯ ಧ್ವನಿಯಾದರೆ ಯಶ್‌ ಪಾಲ್ ಸುವರ್ಣ ಗೂಂಡಾಗಿರಿಯ ಧ್ವನಿಯಾಗಿದ್ದಾರೆ. ಇಡೀ ದೇಶದ ಜನ ಇಂದು ಬಿಜೆಪಿಯ ವಿರುದ್ಧ ಇದ್ದಾರೆ. ಹಾಗಾಗಿ ಯಶ್‌ಪಾಲ್ ಸುವರ್ಣರ ಗೂಂಡಾಗಿರಿ ಇನ್ನು ನಡೆಯುವುದಿಲ್ಲ ಎಂದು ವಾಗ್ಮಿ ನಿಕೇತ್‌ರಾಜ್ ಮೌರ್ಯ ಹೇಳಿದ್ದಾರೆ.

ಕಾಂಗ್ರೆಸ್ ಪಕ್ಷದ ನಾಯಕ ರಾಹುಲ್ ಗಾಂಧಿಯ ವಂಶ ದ್ವಂಸ ಮಾಡುವುದಾಗಿ ಜೀವ ಬೆದರಿಕೆಯೊಡ್ಡಿ, ನೀಟ್ ವಿದ್ಯಾರ್ಥಿ ಚಳವಳಿಯನ್ನು ಹೀನಾಯವಾಗಿ ನಿಂದಿಸಿ ದ್ವೇಷ ಭಾಷಣ ಮಾಡಿದ ಉಡುಪಿ ಶಾಸಕ ಯಶ್ ಪಾಲ್ ಸುವರ್ಣರ ಚಾರಿತ್ರ್ಯ ಹೀನ ನಡೆಯನ್ನು ಖಂಡಿಸಿ ಉಡುಪಿ ಜಿಲ್ಲಾ ಕಾಂಗ್ರೆಸ್ ವತಿಯಿಂದ ಉಡುಪಿ ನಗರದ ಹಳೆಯ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ಬಳಿ ಶುಕ್ರವಾರ ಹಮ್ಮಿಕೊಳ್ಳಲಾದ ಪ್ರತಿಭಟನಾ ಸಭೆಯನ್ನುದ್ದೇಶಿಸಿ ಅವರು ಮಾತನಾಡುತಿದ್ದರು.

ಯುವ ಜನತೆ ಬೀದಿಬರುತ್ತಿದ್ದಾರೆ. ಇದರಿಂದ ಬಿಜೆಪಿಗೆ ಮತ್ತೆ ಭಯ ಆರಂಭವಾಗಿದೆ. ಗಾಂಧಿಯನ್ನು ಕಂಡು ಗೋಡ್ಸೆಗೆ ಆಗುತ್ತಿದ್ದ ಭಯ ಇಂದು ಬಿಜೆಪಿಯವರಿಗೆ ಆಗುತ್ತಿದೆ. ವಿದ್ಯಾರ್ಥಿ ಚಳವಳಿ ಕಂಡು ಮೋದಿಗೆ ಆಗುತ್ತಿರುವ ಭಯ, ಉಡುಪಿ ಕಾಂಗ್ರೆಸ್ ಕಂಡು ಶಾಸಕ ಯಶ್‌ಪಾಲ್ ಸುವರ್ಣಗೆ ಆಗುತ್ತಿದೆ ಎಂದು ಅವರು ಟೀಕಿಸಿದರು.

ಮೋದಿ 2014ರಲ್ಲಿ ಇಡೀ ದೇಶವನ್ನು ಮೂರ್ಖರನ್ನಾಗಿಸಿ ಅಧೀಕಾರಕ್ಕೆ ಬಂದರು. ಬಳಿಕ ಅಂಧ ಭಕ್ತರನ್ನು ಪ್ರತಿ ಬಾರಿಯೂ ಮೂರ್ಖರನ್ನಾಗಿಸುತ್ತಿ ದ್ದಾರೆ. ಆದರೆ ಈ ಆಟ ಹೆಚ್ಚು ಕಾಲ ನಡೆಯುವುದಿಲ್ಲ. ಬಿಜೆಪಿಯ ಪಾಪದ ಕೊಡ ತುಂಬುತ್ತಿದೆ. ಜನ ಬೀದಿಗೆ ಇಳಿಯುತ್ತಿದ್ದಾರೆ. ಮಾಧ್ಯಮಗಳು ತೋರಿಸದಿರುವುದನ್ನು ಯುವಜನತೆ ಮೊಬೈಲ್ ಮೂಲಕ ಬಿಜೆಪಿ ದೇಶಕ್ಕೆ ಮಾಡಿರುವ ಮೋಸವನ್ನು ಬಯಲಿಗೆ ತರುತ್ತಿದ್ದಾರೆ. ಚಳವಳಿಯನ್ನು ಹತ್ತಿಕ್ಕಲು ಎಸಗಿರುವ ದೌರ್ಜನ್ಯವನ್ನು ಯುವಜನತೆ ಮರೆಯುವುದಿಲ್ಲ. 2029ರ ಚುನಾವಣೆಯಲ್ಲಿ ಉತ್ತರ ಕೊಡಲು ಈ ದೇಶದ ಯುವಜನತೆ ಸಿದ್ಧರಾಗಿದ್ದಾರೆ ಎಂದರು.

ಕಾಂಗ್ರೆಸ್ ಮುಖಂಡ, ವಕೀಲ ಸುಧೀರ್ ಕುಮಾರ್ ಮರೋಳಿ ಮಾತನಾಡಿ, ಯಶ್‌ಪಾಲ್ ಸುವರ್ಣ ಮುಂದಿನ ಚುನಾವಣೆಯಲ್ಲಿ ಟಿಕೆಟ್ ಉಳಿಸಿಕೊಳ್ಳಲು ಮತ್ತೆ ಧ್ವೇಷದ ಬೆಂಕಿಯನ್ನು ಉಗುಲಿದ್ದಾರೆ. ಯಶ್‌ಪಾಲ್ ಸುವರ್ಣರ ಗೂಂಡಾಗಿರಿಯ ದೇಹದ ಭಾಷೆ(ಬಾಡಿ ಲ್ಯಾಂಗ್ವೇಜ್) ಹಾಗೂ ಬಾಯಿ ಭಾಷೆ ಒಂದೇ ಆಗಿದೆ. ಈ ರೀತಿಯ ರೌಡಿ ಶಾಸಕರನ್ನು ಆಯ್ಕೆ ಮಾಡಿದ ಪರಿಣಾಮ ಇಂದು ನಾವು ಅವರ ವಿರುದ್ಧ ಪ್ರತಿಭಟನೆ ಮಾಡುವ ಸ್ಥಿತಿ ಎದುರಾಗಿದೆ ಎಂದು ದೂರಿದರು.

ಮಾಜಿ ಸಚಿವ ವಿನಯ ಕುಮಾರ್ ಸೊರಕೆ ಮಾತನಾಡಿ, ಧ್ವೇಷ ಭಾಷಣ ಮಾಡಿದ ಶಾಸಕ ಯಶ್‌ಪಾಲ್ ಸುವರ್ಣ ರನ್ನು ಕೂಡಲೇ ಸರಕಾರ ಜೈಲಿಗೆ ಹಾಕಬೇಕು. ರಾಮಮಂದಿರದ ಹುಂಡಿ ಕದ್ದ ಬಿಜೆಪಿಯವರಿಗೆ ದೇವರ ಶಾಪ ಇದೆ. ಅದಕ್ಕಾಗಿ ಇಂತಹ ವಿನಾಶ ಕಾಲೇ ವಿಪರೀತ ಬುದ್ದಿ ಎಂಬಂತೆ ವರ್ತಿಸುತ್ತಿದ್ದಾರೆ ಎಂದು ಆರೋಪಿಸಿದರು.

ಕಾಂಗ್ರೆಸ್ ಜಿಲ್ಲಾ ಅಧ್ಯಕ್ಷ ಅಶೋಕ್ ಕುಮಾರ್ ಕೊಡವೂರು, ಮುಖಂಡ ರಾದ ಪ್ರಸಾದ್‌ರಾಜ್ ಕಾಂಚನ್ ಮಾತನಾ ಡಿದರು. ಪ್ರತಿಭಟನೆಯಲ್ಲಿ ಕಾಂಗ್ರೆಸ್ ಮುಖಂಡರಾದ ಗೋಪಾಲ್ ಪೂಜಾರಿ, ಉದಯ ಕುಮಾರ್ ಶೆಟ್ಟಿ ಮುನಿ ಯಾಲು, ದಿನೇಶ್ ಹೆಗ್ಡೆ ಮೊಳಹಳ್ಳಿ, ಕಿಶನ್ ಹೆಗ್ಡೆ ಕೊಳ್ಕೆಬೈಲು, ರಮೇಶ್ ಕಾಂಚನ್, ಅಮೃತ್ ಶೆಣೈ, ಪ್ರಖ್ಯಾತ್ ಶೆಟ್ಟಿ, ಪ್ರಶಾಂತ್ ಶರ್ಪುದ್ದೀನ್ ಶೇಖ್, ಇಸ್ಮಾಯಿಲ್ ಆತ್ರಾಡಿ, ಶಬ್ಬೀರ್ ಉಡುಪಿ, ಅಝೀಝ್ ಹೆಜಮಾಡಿ, ವರೋನಿಕಾ ಕರ್ನೆಲಿಯೋ, ರಾಘವೇಂದ್ರ ಶೆಟ್ಟಿ ಕರ್ಜೆ ಮೊದಲಾದವರು ಉಪಸ್ಥಿತರಿದ್ದರು.

ರಾವಣನಂತೆ ಬಿಂಬಿಸಿದ ಯಶ್‌ಪಾಲ್ ಕಟೌಟ್‌ಗೆ ಮೊಟ್ಟೆ ಎಸೆತ: ಪ್ರತಿಕೃತಿ ದಹನ

ಪ್ರತಿಭಟನೆಯಲ್ಲಿ ಯಶ್‌ಪಾಲ್ ಸುವರ್ಣರನ್ನು 10 ತಲೆ ಹಾಗೂ ಎಂಟು ಕೈಗಳ ರಾವಣನಂತೆ ಬಿಂಬಿಸಿದ ಕಟೌಟ್ ಗಮನ ಸೆಳೆಯಿತು.

ಚಡ್ಡಿ ಧರಿಸಿರುವ ಯಶ್‌ಪಾಲ್, ಕೈಗಳಲ್ಲಿ ಮದ್ಯದ ಬಾಟಲಿ, ಐಸ್‌ಕ್ಯಾಂಡಿ, ಮೊಬೈಲ್, ಟವಲ್, ಜೋಕರ್ ಇಸ್ಪೀಟ್, ಮೆಲೋಡಿ ಚಾಕಟೇಲ್, ಚೊಂಬುಗಳನ್ನು ಹಿಡಿದುಕೊಂಡಿರುವಂತೆ ಕಟೌಟ್‌ನಲ್ಲಿ ಚಿತ್ರಿಸ ಲಾಗಿದೆ.

ಬಳಿಕ ಕಾಂಗ್ರೆಸ್ ಕಾರ್ಯಕರ್ತರು ಈ ಕಟೌಟ್‌ಗೆ ಮೊಟ್ಟೆಗಳನ್ನು ಎಸೆದು ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದರು. ಯಶ್‌ಪಾಲ್ ವಿರುದ್ಧ ಘೋಷಣೆ ಗಳನ್ನು ಕೂಗುತ್ತ ರಾವಣನಂತೆ ಬಿಂಬಿಸಲಾದ ಯಶ್‌ಪಾಲ್ ಸುವರ್ಣರ ಪ್ರತಿಕೃತಿಯನ್ನು ದಹಿಸಲಾಯಿತು.





share
ವಾರ್ತಾಭಾರತಿ
ವಾರ್ತಾಭಾರತಿ
Next Story
X