ಅಕ್ರಮ ಅನ್ನಭಾಗ್ಯದ ಅಕ್ಕಿ ಸಾಗಾಟ: ಓರ್ವನ ಸೆರೆ

ಶಂಕರನಾರಾಯಣ, ನ.12: ಕಾರಿನಲ್ಲಿ ಅಕ್ರಮವಾಗಿ ಅನ್ನಭಾಗ್ಯದ ಅಕ್ಕಿಯನ್ನು ಸಾಗಾಟ ಮಾಡುತ್ತಿದ್ದ ಓರ್ವ ಆರೋಪಿಯನ್ನು ಪೊಲೀಸರು ನ.11ರಂದು ಬೆಳಗ್ಗೆ ಬಂಧಿಸಿದ್ದಾರೆ.
ಬ್ರಹ್ಮಾವರ ಹಾರಾಡಿ ಗ್ರಾಮದ ವಾಸೀಂ ಅಕ್ರಂ(36) ಬಂಧಿತ ಆರೋಪಿ. ಕುಂದಾಪುರ ಆಹಾರ ನಿರೀಕ್ಷಕ ಎಚ್.ಎಸ್.ಸುರೇಶ ಅವರಿಗೆ ಓಮಿನಿ ಕಾರಿನಲ್ಲಿ ಉಚಿತ ಅನ್ನ ಭಾಗ್ಯ ಅಕ್ಕಿಯನ್ನು ಅಕ್ರಮವಾಗಿ ಸಂಗ್ರಹಿಸಿ ಸಿದ್ದಾಪುರ ಕಡೆಯಿಂದ ಸಾಗಾಟ ಮಾಡುತ್ತಿರುವ ಬಗ್ಗೆ ಮಾಹಿತಿ ಬಂದಿದ್ದು, ಅದರಂತೆ ಶಂಕರನಾರಾಯಣ ಪೊಲೀಸರೊಂದಿಗೆ ಶಂಕರನಾರಾಯಣ-ಹಾಲಾಡಿ ರಸ್ತೆಯ ಪೆಟ್ರೋಲ್ ಪಂಪ್ ಬಳಿ ಕಾರನ್ನು ತಡೆದು ನಿಲ್ಲಿಸಿ ಪರಿಶೀಲನೆ ನಡೆಸಲಾಯಿತು.
ಆಗ ಕಾರಿನಲ್ಲಿ 12 ಚೀಲಗಳಲ್ಲಿ ಒಟ್ಟು 6 ಕ್ವಿಂಟಾಲ್ ಅಕ್ಕಿ ಕಂಡುಬಂದಿದ್ದು, ಇದರ ಒಟ್ಟು ಮೌಲ್ಯ 13,800ರೂ. ಎಂದು ಅಂದಾಜಿಸಲಾಗಿದೆ. ಅದೇ ರೀತಿ 50,000ರೂ. ಮೌಲ್ಯದ ಕಾರು, ವಿದ್ಯುತ್ ಚಾಲಿತ ಸ್ಕೇಲ್ನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಈ ಬಗ್ಗೆ ಶಂಕರನಾರಾಯಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story





