ರೈತಾಪಿ ಬದಲು ಕಾರ್ಪೋರೇಟ್ ಕೃಷಿ ಹೇರುವ ಹುನ್ನಾರ: ಕೆ.ಶಂಕರ್

ಕುಂದಾಪುರ: ನವ ಉದಾರವಾದಿ ಆರ್ಥಿಕ ನೀತಿಗಳ ಜಾರಿಯಿಂದ ಎಲ್ಲಾ ಕ್ಷೇತ್ರಗಳ ಮೇಲೆಯೂ ದುಷ್ಪರಿಣಾಮ ಬೀರು ತ್ತಿದೆ. ಕೃಷಿ ಅವನತಿಗೆ ಕಾರಣವಾಗಿದೆ. ಕಾರ್ಮಿಕರ ಪ್ರಶ್ನೆಗಳು ಅವರ ಸಮಸ್ಯೆಗಳ ಬಗ್ಗೆ ಹೋರಾಟ ನಡೆಸಿದರೂ ಸರಕಾರ ಗಮನ ಹರಿಸುತ್ತಿಲ್ಲ. ರೈತಾಪಿ ಕೃಷಿ ನಾಶಪಡಿಸಿ ಕಾರ್ಪೋರೇಟ್ ಕೃಷಿ ಹೇರುವ ಹುನ್ನಾರ ನಡೆಯುತ್ತಿದೆ ಹೀಗಾಗಿ ರೈತ ಕೂಲಿಕಾರರ ಕಾರ್ಮಿಕರ ಐಕ್ಯ ಹೋರಾಟ ಬೆಳೆದು ದೇಶದ ಸ್ವಾತಂತ್ರ್ಯ ರಕ್ಷಿಸಬೇಕು ಎಂದು ಸಿಐಟಿಯು ರಾಜ್ಯ ಉಪಾಧ್ಯಕ್ಷ ಕೆ.ಶಂಕರ್ ಹೇಳಿದ್ದಾರೆ.
ಕರ್ಕಿ ಗ್ರಾಮದಲ್ಲಿ ಇಂದು ನಡೆದ ಸಿಐಟಿಯು, ರೈತ ಸಂಘ, ಕೃಷಿಕೂಲಿಕಾರರ ಸಂಘಟನೆ ಜಂಟಿ ಪ್ರಚಾರಾಂದೋಲನ ಸಭೆಯನ್ನುದ್ದೇಶಿಸಿ ಅವರು ಮಾತ ನಾಡುತಿದ್ದರು.
ಪ್ರಚಾರಾಂದೋಲನದಲ್ಲಿ ಸಿಐಟಿಯು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುರೇಶ್ ಕಲ್ಲಾಗರ, ಜಿಲ್ಲಾ ಮುಖಂಡರಾದ ಎಚ್. ನರಸಿಂಹ, ರೈತ ಮುಖಂಡ ಚಂದ್ರಶೇಖರ ವಿ. ಮಾತನಾಡಿದರು. ರಂಗನಾಥ, ವೇದ, ಪ್ರೇಮ ಉಪಸ್ಥಿತರಿ ದ್ದರು ಚಂದ್ರ ಪೂಜಾರಿ ಸ್ವಾಗತಿಸಿದರು. ಸಂಜೀವ ಪೂಜಾರಿ ವಂದಿಸಿದರು.
ಸಿದ್ದಾಪುರ ಪ್ರಚಾರಾಂದೋಲನ: ಸಿದ್ದಾಪುರ ಪೇಟೆಯಲ್ಲಿ ನಡೆದ ಪ್ರಚಾರಾಂದೋಲನ ಸಭೆಯನ್ನುದ್ದೇಶಿಸಿ ಮಾತನಾಡಿದ ಸಿಐಟಿಯು ಜಿಲ್ಲಾ ಮುಖಂಡ ಎಚ್. ನರಸಿಂಹ, ರೈತರು ಕಾರ್ಮಿಕರ, ಕೂಲಿಕಾರರ ಬೇಡಿಕೆಗಳನ್ನು ಆಳುವ ಸರಕಾರಗಳು ಕಡೆಗಣಿಸುತ್ತಿವೆ ಕಾರ್ಮಿಕರ ಸಂಹಿತೆಗಳು ಹೊಸ ರೂಪದಲ್ಲಿ ತರುವ ಮೂಲಕ ಬಂಡವಾಳಗಾರರಿಗೆ ಕಾರ್ಮಿಕರನ್ನು ಗುಲಾಮ ರನ್ನಾಗಿಸುವ ಪ್ರಯತ್ನ ಮಾಡುತ್ತಿದೆ. ಕೇಂದ್ರ ಸರಕಾರದ ನವ ಉದಾರವಾದಿ ಆರ್ಥಿಕ ನೀತಿಗಳು ಜನರನ್ನು ಹೈರಾಣಾಗಿಸಿದೆ ಎಂದು ಹೇಳಿದರು.
ಸಿಐಟಿಯು ತಾಲೂಕು ಸಂಚಾಲಕ ಚಂದ್ರಶೇಖರ ವಿ. ಮಾತನಾಡಿದರು. ಸಿಐಟಿಯು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುರೇಶ್ ಕಲ್ಲಾಗರ, ಚಿಕ್ಕ ಮೊಗವೀರ, ಅಲೆಕ್ಸಾಂಡರ್, ರವಿ ವಿ.ಎಂ., ರಾಘವೇಂದ್ರ ಆಚಾರಿ, ಚಂದ್ರ ಆಚಾರ್, ರತ್ನಾಕರ್ ರಾವ್ ಮೊದಲಾದವರು ಉಪಸ್ಥಿತರಿದ್ದರು.