ಉಡುಪಿ ತುಳುಕೂಟದ ತುಳು ಭಾವಗೀತೆ ಸ್ಪರ್ಧೆ ಉದ್ಘಾಟನೆ

ಉಡುಪಿ, ಡಿ.3: ತುಳುಕೂಟ ಉಡುಪಿ ವತಿಯಿಂದ ದಿವಂಗತ ನಿಟ್ಟೂರು ಸಂಜೀವ ಭಂಡಾರಿ ಸ್ಮರಣಾರ್ಥ 30ನೇ ವರ್ಷದ ತುಳು ಭಾವ ಗೀತೆ ಸ್ಪರ್ಧೆಯನ್ನು ಉಡುಪಿ ಕ್ರಿಶ್ಚಿಯನ್ ಹೈಸ್ಕೂಲಿನಲ್ಲಿ ಆಯೋಜಿಸಲಾಗಿತ್ತು.
ಸ್ಪರ್ಧೆಯನ್ನು ಉದ್ಯಮಿ ಹರಿಪ್ರಸಾದ್ ರೈ ಮತ್ತು ಕನ್ನಡ ಸಂಸ್ಕೃತಿ ಇಲಾಖೆದ ಸಹಾಯಕ ನಿರ್ದೇಶಕಿ ಪೂರ್ಣಿಮಾ ಉದ್ಘಾಟಿಸಿದರು. ತುಳುಕೂಟದ ಅಧ್ಯಕ್ಷ ಬಿ.ಜಯಕರ ಶೆಟ್ಟಿ ಇಂದ್ರಾಳಿ ಅಧ್ಯಕ್ಷತೆ ವಹಿಸಿದ್ದರು, ಗೌರವ ಅಧ್ಯಕ್ಷ ಡಾ.ಭಾಸ್ಕರಾನಂದ ಕುಮಾರ್, ಪ್ರಧಾನ ಕಾರ್ಯದರ್ಶಿ ಗಂಗಾಧರ ಕಿದಿಯೂರು, ಕೋಶಾಧಿಕಾರಿ ಚೈತನ್ಯ ಎಂ.ಜಿ., ಸ್ಪರ್ಧೆಯ ಸಂಚಾಲಕ ಜಯರಾಂ ಶೆಟ್ಟಿಗಾರ್ ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ಎದೆ ತುಂಬಿ ಹಾಡುವೆನು ಸ್ಪರ್ಧೆಯ ವಿಜೇತೆ ಆಕಾಶವಾಣಿ ಎ ಟಾಪ್ ಗ್ರೇಡ್ ಕಲಾವಿದೆ ಸಂಗೀತಾ ಬಾಲಚಂದ್ರ, ಬಾಲನಟಿ ವೈಷ್ಣವಿ ವಿಶ್ವನಾಥ್, ಬಾಲನಟ ಯಶಸ್ ಪಿ.ಸುವರ್ಣ ಅವರನ್ನು ಸನ್ಮಾನಿಸಲಾಯಿತು.
ಭಾವಗೀತೆ ಸ್ಪರ್ಧೆಯ ಸಮಾರೋಪ ಸಮಾರಂಭದಲ್ಲಿ ಮಾಹೆಯ ರೇಡಿಯೋ ಮಣಿಪಾಲದ ಸಹಾಯಕ ಪ್ರಾಧ್ಯಾಪಕಿ ಡಾ.ರಶ್ಮಿ ಅಮ್ಮೆಂಬಳ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ತುಳುಕೂಟದ ಉಪಾಧ್ಯಕ್ಷ ಭುವನ ಪ್ರಸಾದ್ ಹೆಗ್ಡೆ ಅಧ್ಯಕ್ಷತೆ ವಹಿಸಿದ್ದರು.
ಇಂದ್ರಾಳಿ ಲಯನ್ಸ್ ಕ್ಲಬ್ ಅಧ್ಯಕ್ಷ ದಿವಾಕರ ಸನಿಲ್, ತುಳುಕೂಟದ ಉಪಾಧ್ಯಕ್ಷೆ ಶೋಭಾ ಶೆಟ್ಟಿ, ಕ್ರಿಶ್ಚಿಯನ್ ಪ್ರೌಢಶಾಲೆಯ ಮುಖ್ಯೋಪಾಧ್ಯಾಯಿನಿ ಹೆಲೆನ್ ವಿ.ಸಾಲಿನ್ಸ್, ತುಳು ಸಾಹಿತ್ಯ ಅಕಾಡೆಮಿದ ಮಾಜಿ ಪದಾಾಧಿಕಾರಿ ರಘು ಇಡ್ಕಿದು, ಉದ್ಯಮಿ ದೀಪಕ್ ದಿವಾಕರ್ ಕಿಣಿ ಮಣಿಪಾಲ, ತುಳುಕೂಟದ ಸದಸ್ಯೆ ವಿದ್ಯಾ ಸರಸ್ವತಿ ಭಾವಗೀತೆ ಸ್ಪರ್ಧೆಯ ವಿಜೇತರಿಗೆ ಬಹುಮಾನಗಳನ್ನು ವಿತರಿಸಿದರು.







