ಬ್ರಹ್ಮಾವರ: ಸೀತಾನದಿಯಲ್ಲಿ ಸ್ವಾತಂತ್ರ್ಯ ಧ್ವಜಾರೋಹಣ

ಬ್ರಹ್ಮಾವರ: 79ನೇ ವರ್ಷದ ಸ್ವಾತಂತ್ರ್ಯ ದಿನಾಚರಣೆಯ ಪ್ರಯುಕ್ತ ಸಾಲಿಗ್ರಾಮ ಕಯಾಕಿಂಗ್ ತಂಡ ವಿಭಿನ್ನವಾಗಿ ರಾಷ್ಟ್ರ ಪ್ರೇಮವನ್ನು ಮೆರೆಯಿತು. ಸೀತಾ ನದಿಯಲ್ಲಿ ಕಯಕಿಂಗ್ ಮೂಲಕ ಪ್ರಕೃತಿ ವಿಸ್ಮಯಗಳನ್ನು ತೋರಿಸಿ ಜನರಲ್ಲಿ ಪ್ರಕೃತಿ ಪ್ರೇಮವನ್ನು ಬಿತ್ತುವ ಕೆಲಸ ಮಾಡಲಾಯಿತು.
ಈ ಬಾರಿ ತಂಡವು ಹೊಸತನ ಎಂಬಂತೆ ಬದುಕ ಕೊಟ್ಟ ನಾಡ ಮಣ್ಣಲಿ, ಬಂಧಗಳ ಸೇತುವೆ ಕಟ್ಟಿ, ದೇಶಭಕ್ತಿಯ ನೂಲ ಬಿಗಿದು, ನಾಡ ಹೆಮ್ಮೆ ಮೇಲೇಳುವಂತೆ, ನೀರ ಆರ್ಭಟಕೆ ಸುಂದರವಾದ ಮರದ ಸೇತುವೆ ಯೊಂದನ್ನು ಕಟ್ಟಿ ಅದರಲ್ಲಿ ಧ್ವಜವನ್ನು ಮೇಲೇರಿಸಿ ಹೊಸ ರೀತಿಯ ಆಚರಣೆಯನ್ನು ಮೆರೆದಿದೆ.
ಸಾಲಿಗ್ರಾಮ ಕಯಾಕಿಂಗ್‌ನ ಮುಖ್ಯಸ್ಥರಾದ ಮಿಥುನ್ ಕುಮಾರ್ ಮೆಂಡನ್, ಲೋಕೇಶ್ ಮತ್ತಿತರು ಉಪಸ್ಥಿತರಿದ್ದರು.
Next Story





