ಹೂಡೆ ಸಾಲಿಹಾತ್‌ನಿಂದ ಸ್ವಾತಂತ್ರೋತ್ಸವ ದಿನಾಚರಣೆ

ಉಡುಪಿ: ತೋನ್ಸೆ ಹೂಡೆಯ ಸಾಲಿಹಾತ್ ಸಮೂಹ ಶಿಕ್ಷಣ ಸಂಸ್ಥೆಯು 79ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಲಾಯಿತು.
ಉದ್ಯಮಿ ಪೀರು ಸಾಹೇಬ್ ಆದಿ ಉಡುಪಿ ಧ್ವಜಾರೋಹಣ ನೆರವೇರಿಸಿದರು. ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಅಕ್ಬರ್ ಅಲಿ ಉಡುಪಿ ಸಭೆಯನ್ನುದ್ದೇಶಿಸಿ ಮಾತನಾಡಿದರು. ಅಧ್ಯಕ್ಷತೆಯನ್ನು ಶಿಕ್ಷಣ ಸಂಸ್ಥೆಯ ಉಪಾಧ್ಯಕ್ಷ ಇದ್ರೀಸ್ ಹೂಡೆ ವಹಿಸಿದ್ದರು. ಈ ಸಂದರ್ಭದಲ್ಲಿ ಸಂಸ್ಥೆಯ ಟ್ರಸ್ಟಿ ಆದಂ ಸಾಹೇಬ್, ಉಮರ್ ಉಸ್ತಾದ್ ಹಾಗೂ ಸಂಸ್ಥೆಯ ಮಖ್ಯಸ್ಥರು ಉಪಸ್ಥಿತರಿದ್ದರು.
Next Story





