ಬಸ್ಸುಗಳನ್ನು ನಿಲ್ದಾಣಗಳಲ್ಲಿಯೇ ನಿಲುಗಡೆ ಮಾಡಲು ಸೂಚನೆ

ಉಡುಪಿ, ನ.27: ಜಿಲ್ಲೆಯಲ್ಲಿ ಸಂಚರಿಸುವ ಖಾಸಗಿ ಹಾಗೂ ಕೆಎಸ್ಸಾರ್ಟಿಸಿ ಬಸ್ಸುಗಳು ಮುಖ್ಯವಾಗಿ ಎಂ.ಜಿ.ಎಂ ಕಾಲೇಜು ಮತ್ತು ಸಂತೆಕಟ್ಟೆ ಬಸ್ಸು ನಿಲ್ದಾಣಗಳಲ್ಲಿ ಬಸ್ಸುಗಳನ್ನು ನಿಲುಗಡೆ ಮಾಡದೇ ಬಸ್ಸು ನಿಲ್ದಾಣದ ಹಿಂದೆ ಅಥವಾ ಮುಂದೆ ನಿಲುಗಡೆ ಮಾಡುತ್ತಿರುವ ಬಗ್ಗೆ ಸಾರ್ವಜನಿಕರಿಂದ ದೂರುಗಳು ಕೇಳಿ ಬಂದಿವೆ.
ಆದ್ದರಿಂದ ಜಿಲ್ಲೆಯಲ್ಲಿ ಸಂಚರಿಸುವ ಎಲ್ಲಾ ಖಾಸಗಿ ಹಾಗೂ ಕೆಎಸ್ಸಾರ್ಟಿಸಿ ಬಸ್ಸುಗಳು ಕಡ್ಡಾಯವಾಗಿ ಬಸ್ಸು ನಿಲ್ದಾಣಗಳ ಲ್ಲಿಯೇ ನಿಲುಗಡೆ ಮಾಡಲು ಎಲ್ಲಾ ಬಸ್ಸುಗಳ ಮಾಲಕರು ಕ್ರಮವಹಿಸಬೇಕು. ತಪ್ಪಿದ್ದಲ್ಲಿ ಸೂಕ್ತ ಕಠಿಣ ಕ್ರಮ ಕೈಗೊಳ್ಳಲಾ ಗುವುದು ಎಂದು ಜಿಲ್ಲಾ ಪ್ರಾದೇಶಿಕ ಸಾರಿಗೆ ಅಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Next Story





