ಸಿವಿಲ್ ಇಂಜಿನಿಯರಿಂಗ್ ಕುರಿತ ಅಂತಾರಾಷ್ಟ್ರೀಯ ಸಮ್ಮೇಳನ

ಮಣಿಪಾಲ : ಇಂದಿನ ಪ್ರಪಂಚದ ಸನ್ನಿವೇಶದಲ್ಲಿ ಭಾರತೀಯ ಸಿವಿಲ್ ಇಂಜಿನಿಯರ್‌ಗಳು ಅತ್ಯಾಧುನಿಕ ಕಟ್ಟಡಗಳು ಮತ್ತು ಮೂಲಭೂತ ರಚನೆಗಳನ್ನು ಮಾಡುತ್ತಿದ್ದಾರೆ. ಆದ್ದರಿಂದ ಸಿವಿಲ್ ಎಂಜಿನಿಯರಿಂಗ್ ಹೊಸ ಯುಗವೇ ಸೃಷ್ಠಿಯಾಗುತ್ತಿದೆ. ವಿದ್ಯಾರ್ಥಿಗಳು ಮತ್ತು ಸಂಶೋಧಕರು ಈ ಭೂಮಿಯನ್ನು ಸುರಕ್ಷಿತ ಸ್ಥಳವನ್ನಾಗಿ ಮಾಡಲು ಸುಸ್ಥಿರ ಅಭಿವೃದ್ಧಿ ಗುರಿ ಗಳೊಂದಿಗೆ ಮುಂದೆ ಸಾಗಬೇಕೆಂದು ಆಂಟ್ವರ್ಪೆನ್ ಬೆಲ್ಜಿಯಂ ವಿಶ್ವವಿದ್ಯಾ ಲಯದ ಪ್ರೊ.ವಿಮ್‌ವ್ಯಾನ್ ಡೆನ್ ಬರ್ಗ್ ಹೇಳಿದ್ದಾರೆ.
ಮಣಿಪಾಲ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ಸಿವಿಲ್ ಇಂಜಿನಿಯರಿಂಗ್ ವಿಭಾಗದ ವತಿಯಿಂದ ಆಯೋಜಿಸಲಾದ ಇಂಟರ್‌ನ್ಯಾಶನಲ್ ಕಾನ್ಫರೆನ್ಸ್ ಆನ್ ನ್ಯೂ ಹಾರಿಜಾನ್ಸ್ ಇನ್ ಸಿವಿಲ್ ಇಂಜಿನಿಯರಿಂಗ್ ಕುರಿತ ಅಂತಾರಾಷ್ಟ್ರೀಯ ಸಮ್ಮೇಳನದ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡುತಿದ್ದರು.
ಮಾಹೆ ಪ್ರೊ ವೈಸ್ ಚಾನ್ಸಲರ್ ಡಾ.ನಾರಾಯಣ ಸಭಾಹಿತ್, ಎಂಐಟಿ ನಿರ್ದೇಶಕ ಡಾ.ಅನಿಲ್ ರಾಣಾ ಮಾತನಾಡಿದರು. ಸಿವಿಲ್ ಇಂಜಿನಿಯರಿಂಗ್ ವಿಭಾಗದ ಮುಖ್ಯಸ್ಥ ಡಾ.ಪುರುಷೋತ್ತಮ ಜಿ.ಸರ್ವದೆ ಸ್ವಾಗತಿಸಿದರು. ಸಮ್ಮೇಳನದ ಸಂಚಾಲಕ ಡಾ.ಸಂದೇಶ್ ಉಪಾಧ್ಯಾಯ ಪ್ರಾಸ್ತಾವಿಕವಾಗಿ ಮಾತನಾಡಿದರು. ಡಾ.ಜಗದೀಶ್ ಪೈ ವಂದಿಸಿದರು. ಡಾ.ಸುಗಂದಿನಿ ಕುಡ್ವ ಮತ್ತು ಡಾ.ಚಿತ್ರಾ ಎಂ. ಕಾರ್ಯಕ್ರಮ ನಿರೂಪಿಸಿದರು.





