ಕುಂದಾಪ್ರ ಭಾಷೆಗೆ ವಿಶ್ವಮಾನ್ಯತೆ: ಆನಂದ್ ಕುಂದರ್

ಕೋಟ: ಕುಂದಾಪ್ರ ಭಾಷೆ, ಇಲ್ಲಿನ ವಿವಿಧ ಜನಾಂಗದ ಬದುಕಿನ ಜೀವನ ಪರಿ ವಿಶ್ವಮಟ್ಟದಲ್ಲಿ ಪಸರಿಸಿ ಕೊಂಡಿದೆ. ಈ ಬಗ್ಗೆ ಅಧ್ಯಯನ ಅಗತ್ಯ. ಇದರಿಂದ ಮುಂದಿನ ತಲೆಮಾರಿಗೆ ಅನುಕೂಲವಾಗಲಿದೆ ಎಂದು ಮಣೂರು ಗೀತಾನಂದ ಪೌಂಡೇಶನ್ ಪ್ರವರ್ತಕ ಆನಂದ್ ಸಿ.ಕುಂದರ್ ಹೇಳಿದ್ದಾರೆ.
ಕೋಟದ ಪಂಚವರ್ಣ ಮಹಿಳಾ ಮಂಡಲದ ನೇತೃತ್ವದಲ್ಲಿ ಮಾತೃಸಂಸ್ಥೆ ಪಂಚವರ್ಣ ಯುವಕ ಮಂಡಲದ ಮಾರ್ಗದರ್ಶನದಲ್ಲಿ ಆ.10ರಂದು ಕೋಟದ ಹಂದಟ್ಟಿನಲ್ಲಿ ನಡೆಯಲಿರುವ ಊರ್ ಕೇರಿ ಬದ್ಕಿನ ಹಬ್ಬ ಎಂಬ ಆಸಾಡಿ ಒಡ್ರ್ ಕಾರ್ಯಕ್ರಮದ ಆಮಂತ್ರಣ ಪತ್ರಿಕೆಯನ್ನು ಬುಧವಾರ ಬಿಡುಗಡೆಗೊಳಿಸಿ ಅವರು ಮಾತನಾಡುತಿದ್ದರು.
ನಮ್ಮ ಜೀವನ ಪದ್ದತಿ, ಭಾಷೆ ಜಗತ್ತಿನಲ್ಲಿ ಶೇಷ್ಠತೆ ಪಡೆದುಕೊಂಡಿದೆ. ಅದನ್ನು ಉಳಿಸಿ ಬೆಳೆಸಬೇಕಾದರೆ ಈ ರೀತಿಯ ಕಾರ್ಯಕ್ರಮಗಳು ಆಗಿಂದಾಗ ನಡೆಯುತ್ತಿರಬೇಕು ನಮ್ಮ ಭಾಷೆ, ಬದುಕಿನ ವಿಚಾರಧಾರೆ ಗಳು ಉಳಿಯ ಬೇಕಾದರೆ ನಮ್ಮ ಮನೆಯಲ್ಲಿ ಅದನ್ನು ದೈನಂದಿನ ಬದುಕಿನಲ್ಲಿ ಅಳವಡಿಸಿ ಯುವ ಜನಾಂಗಕ್ಕೆ ಊಣಬಡಿಸಬೇಕು ಎಂದರು.
ರಾಜ್ಯೋತ್ಸವ ಪ್ರಶಸ್ತಿ ಪುರಸ್ಕ್ರತ ಮಣೂರು ಜಯರಾಮ್ ಶೆಟ್ಟಿ ಮಾತನಾಡಿ ದರು. ಕೋಟದ ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಸದಸ್ಯ ಮಣೂರು ಭಾಸ್ಕರ್ ಶೆಟ್ಟಿ, ಪಂಚವರ್ಣದ ಗೌರವಾಧ್ಯಕ್ಷ ಸತೀಶ್ ಎಚ್. ಕುಂದರ್, ಪಂಚವರ್ಣ ಪೋಷಕರಾದ ವಿಷ್ಣುಮೂರ್ತಿ ಮಯ್ಯ ಮಣೂರು, ಪಂಚವರ್ಣ ಮಹಿಳಾ ಮಂಡಲದ ಅಧ್ಯಕ್ಷೆ ಲಲಿತಾ ಪೂಜಾರಿ, ಯುವಕ ಮಂಡಲದ ಅಧ್ಯಕ್ಷ ಕೆ.ಮನೋಹರ್ ಪೂಜಾರಿ, ಸ್ಥಾಪಕಾಧ್ಯಕ್ಷ ಶೇವಧಿ ಸುರೇಶ್ ಗಾಣಿಗ ಉಪಸ್ಥಿತರಿದ್ದರು.
ಮಹಿಳಾ ಮಂಡಲದ ಕಾರ್ಯಾಧ್ಯಕ್ಷೆ ಕಲಾವತಿ ಅಶೋಕ್ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿ ದರು. ಸಂಚಾಲಕಿ ಸುಜಾತ ಎಂ.ಬಾಯರಿ ಕಾರ್ಯಕ್ರಮ ನಿರೂಪಿಸಿದರು. ಕಾರ್ಯದರ್ಶಿ ವಸಂತಿ ಹಂದಟ್ಟು ವಂದಿಸಿದರು.







