ಇಸ್ಪೀಟ್ ಜುಗಾರಿ: ನಾಲ್ವರ ಬಂಧನ
ಬೈಂದೂರು, ಜು.23: ಯಡ್ತರೆ ಗ್ರಾಮದ ಅಂಬಿಕಾ ಹೊಟೇಲ್ ಬಳಿ ಜು.22ರಂದು ಅಪರಾಹ್ನ ವೇಳೆ ಇಸ್ಪೀಟು ಜುಗಾರಿ ಆಡುತ್ತಿದ್ದ ನಾಲ್ವರನ್ನು ಬೈಂದೂರು ಪೊಲೀಸರು ಬಂಧಿಸಿದ್ದಾರೆ.
ತಗ್ಗರ್ಸೆಯ ಕೃಷ್ಣ ಕುಮಾರ್(38), ಪ್ರಶಾಂತ ಕುಮಾರ್(29), ಉಪ್ಪುಂದ ಮಡಿಕಲ್‌ನ ಕೃಷ್ಣ(40), ಉಪ್ಪುಂದದ ನಾಗರಾಜ(32) ಬಂಧಿತ ಆರೋಪಿ ಗಳು. ಇವರಿಂದ 22,500ರೂ. ನಗದು ವಶಪಡಿಸಿಕೊಳ್ಳಲಾಗಿದೆ.
ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story